`ಹಳಿಯಾಳ-ಸರ್ಕಾರಿ ಕೆಲಸಕ್ಕೆ ಪದೇ ಪದೇ ಅಡ್ಡಿಪಡಿಸುತ್ತಿರುವ ನಕಲಿ ಪತ್ರಕರ್ತರನ್ನು ನಿಯಂತ್ರಿಸಿ’ ಎಂದು ಹಳಿಯಾಳದ ವಿವಿಧ ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ನೌಕರರ ಸಂಘದ ಮೂಲಕ ಈ ಬಗ್ಗೆ ತಾಲೂಕಾ ಆಡಳಿತಕ್ಕೂ ನೌಕರರು ಪತ್ರ ಬರೆದಿದ್ದಾರೆ!
ಯಾವುದೇ ನೋಂದಣಿ, ಮಾನ್ಯತೆಗಳಿಲ್ಲದೇ ಪತ್ರಕರ್ತ ಎಂಬ ಸೋಗಿನಲ್ಲಿ ಅಧಿಕಾರಿ-ಸಿಬ್ಬಂದಿ ಕಾಡಿಸುವವರ ಸಂಖ್ಯೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿದೆ. ನಕಲಿ ಪತ್ರಕರ್ತರ ಹಾವಳಿಗೆ ಅಧಿಕಾರಿಗಳು ತತ್ತರಿಸಿದ್ದಾರೆ. ಇದೇ ರೀತಿ ಗಣೇಶ ರಾಥೋಡ್ ಎಂಬಾತರು ಅಧಿಕಾರಿಗಳಿಗೆ ಅನಗತ್ಯ ತೊಂದರೆ ನೀಡುತ್ತಿದ್ದು, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹಳಿಯಾಳದ ನೌಕರರು ಒತ್ತಾಯಿಸಿದ್ದಾರೆ.
`ಫೆಬ್ರವರಿ 3ರಂದು ಆಸ್ಪತ್ರೆಗೆ ನುಗ್ಗಿದ ಗಣೇಶ ರಾಥೋಡ್ ಹಾಗೂ ದಿವ್ಯಾ ಮಾಹಾಜನ್ ಎಂಬಾತರು ಅಲ್ಲಿನ ವೈದ್ಯಾಧಿಕಾರಿಗಳ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಕಚೇರಿಯಲ್ಲಿದ್ದ ಸಿಬ್ಬಂದಿ ತೇಜಸ್ವಿ ಪಾಲೇಕರ್ ಹಾಗೂ ವೈದ್ಯೆ ಡಾ ಸೋನಾ ಅವರ ವಿಡಿಯೋ ಮಾಡಿ, ಮಾನ ಕಳೆಯುವುದಾಗಿ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ನೀಡಲಾಗಿದ್ದು, ಅವರ ವಿರುದ್ಧ ತಾಲೂಕಾಡಳಿತವೂ ಕಠಿಣ ಕ್ರಮ ಜರುಗಿಸಬೇಕು’ ಎಂದು ಸರ್ಕಾರಿ ನೌಕರರ ಸಂಘದವರು ಆಗ್ರಹಿಸಿದ್ದಾರೆ.