ಜನಪರ ಜನತಾ ಸರ್ಕಾರಕ್ಕೆ ಬೆಂಬಲಿಸಲು ಒಗ್ಗಟ್ಟಾಗಿರುವಂತೆ ಕರೆ, ನಿಖಿಲ್ ಕುಮಾರಸ್ವಾಮಿ
ದೇವಲಾಪುರ. ನ:- 21 ಜನಪರ ಜನತಾ ಸರ್ಕಾರ ಮತ್ತೊಮ್ಮೆ ರಾಜ್ಯದ ರೈತ ಸಮುದಾಯದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಾದರೆ ತಾವುಗಳು ಒಗ್ಗಟ್ಟಾಗಿ ಪಕ್ಷ ಬೆಂಬಲಿಸಬೇಕೆಂದು ನಿಖಿಲ್ ಕುಮಾರಸ್ವಾಮಿ ಅವರು ಕರೆ ನೀಡಿದರು.
ಅವರು ನಾಗಮಂಗಲ ತಾಲೂಕು ದೇವಲಾಪುರ ಹೋಬಳಿ ಸಮೀಪವಿರುವ ಲಕ್ಕೇ ಗೌಡನ ಗ್ರಾಮದಲ್ಲಿ ಶ್ರೀ ಕೆಂಪೇಗೌಡ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನಪರಜನಪಥಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಕುಮಾರಣ್ಣನವರ ಸರ್ಕಾರವಿದ್ದಾಗ ತಾವುಗಳು ಗಮನಿಸಿದ್ದು ಯಾವುದೇ ಸರ್ಕಾರ ಯೋಜನೆಗಳ ಅನುಷ್ಠಾನ ತರವಲ್ಲಿ ತಡವಾದರೂ ಕುಮಾರಣ್ಣನವರು ರೈತ ಸಮುದಾಯದ ಏಳಿಗೆಗಾಗಿ ರೈತಪರ ಯೋಜನೆಗಳನ್ನ ತರುವಲ್ಲಿ ಯಶಸ್ವಿಯಾಗಿರುವುದನ್ನ
ಜನತೆ ತಿಳಿದಿದೆ.
ರಾಜ್ಯದ ರೈತನಾಡಿಯಾಗಿ ಜನಪರ ಯೋಜನೆಗಳನ್ನ ರೂಪಿಸುವ ಮುಖಾಂತರ ಪಂಚರತ್ನ ಯೋಜನೆಗಳನ್ನ ಈಗಾಗಲೇ ಪ್ರವಾಸ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಸರಿ ಸಮಾನವಾದ ಶಿಕ್ಷಣ ಆರೋಗ್ಯ ಉದ್ಯೋಗಗಳನ್ನ ರೂಪಿಸುವ ವಿಶಿಷ್ಟವಾದ ಪಂಚರತ್ನ ಯೋಜನೆಗಳನ್ನ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕುಮಾರಣ್ಣನವರು ರಾಜ್ಯದಾದಂತ ಪ್ರವಾಸ ಕೈಗೊಂಡಿದ್ದು ತಮ್ಮಗಳ ಬೆಂಬಲ ಸಹಕರಿಸುವ ಮುಖಾಂತರ ಪ್ರಾದೇಶಿಕ ಪಕ್ಷವನ್ನ ಬಳಸಬೇಕೆಂದು ಈ ಸಂದರ್ಭದಲ್ಲಿಮಾತನಾಡಿದರು.
ಕುಮಾರಸ್ವಾಮಿಯವರ ಸರ್ಕಾರವನ್ನು ಕೆಳಗಿಳಿಸಿ ಬಿಜೆಪಿಯ ಸರ್ಕಾರವನ್ನು ತಂದಿದ್ದು ಜನತೆ ಇವರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದು ಈಗಾಗಲೇ ಮುಂದಿನ ಸಿಎಂ ಕುಮಾರಸ್ವಾಮಿ ಅವರೇ ಎಂಬ ಮಾತು ಮಾತು ಕೇಳಿ ಬರುತ್ತಿದ್ದು ಇವರು ಕೊಟ್ಟಂತಹ ರಾಜಕೀಯ ಸೇವೆಯಲ್ಲಿ ಅನೇಕ ಯೋಜನೆಗಳನ್ನು ಸರ್ಕಾರ ಈಡೇರಿಸಲು ಆಗಿಲ್ಲವೆಂದು ಶಾಸಕ ಸುರೇಶ್ ಗೌಡ ರವರು ಮಾತನಾಡಿದರು
ಇದೇ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಪ್ಪಾಜಿಗೌಡ ರವರು ನನ್ನ ಅವಧಿಯಲ್ಲಿ ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿದ್ದು ಇಂತಹ ಅಭಿವೃದ್ಧಿ ಕಾರ್ಯಗಳ ಸೇವೆಯನ್ನು ನೆನಪಿಸಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಹಾಲು ಒಕ್ಕೂಟದ ನಿರ್ದೇಶಕರಾದ ನಲ್ಲಿ ಗೆರೆ ಬಾಲು.ಕೋಟಿ ರವಿ ಡೈಮಂಡ್ ಮೂರ್ತಿ ನಿತೀಶ್ ಡಿ.ಟಿ ಶ್ರೀನಿವಾಸ್ ಹಾಗೂ ಅನೇಕ ಮುಖಂಡರು ಈ ಸಂದರ್ಭದಲ್ಲಿ ಉಪಸಿತರಿದ್ದರು.
ದೇವಲಾಪುರ ಜಗದೀಶ್ ನಾಗಮಂಗಲ