ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆ
ರಾಜ್ಯಾಧ್ಯಕ್ಷರಿಂದ ಭಟ್ಕಳ, ಹೊನ್ನಾವರ ಮತ್ತು ಕುಮಟಾ ತಾಲೂಕ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣೆ
ಕುಮಟಾ-ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆ ಇದರ ಕುಮಟಾ ಭಟ್ಕಳ ಹಾಗೂ ಹೊನ್ನಾವರ ಘಟಕದ ಪದಾಧಿಕಾರಿಗಳ ನೇಮಕಾತಿ ಪತ್ರವನ್ನು ಕುಮಟಾದಲ್ಲಿ ಆಯೋಜಿಸಿದ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಉಮೇಶ್ ಹರಿಕಾಂತ್ ಇವರು ಭಟ್ಕಳಘಟ್ಟದ ಪದಾಧಿಕಾರಿಗಳಿಗೆ. ಹಾಗೂ ಕುಮಟಾ ಘಟಕದ ಪದಾಧಿಕಾರಿಗಳಿಗೆ ಸಂಘದ ಪದಾಧಿಕಾರಿಗಳ ನೇಮಕಾತಿ ಪತ್ರವನ್ನು ನೀಡಿ ಮಾತನಾಡಿದರು. ಕರ್ನಾಟಕದಲ್ಲಿ ಕನ್ನಡ ನಾಮಫಲಕಗಳು ಕಡಿಮೆಯಾಗ್ತಾ ಇವೆ ಎಲ್ಲಿ ನೋಡಿದರೂ ಇಂಗ್ಲೀಷನ್ನ ಬಳಸ್ತಾ ಇದ್ದಾರೆ ಇದಕ್ಕೆ ನೀವೆಲ್ಲ ಕಡಿವಾಣ ಹಾಕಿ ಎಲ್ಲಾ ಕಡೆಯಲ್ಲಿಯೂ ಕನ್ನಡದ ನಾಮಪಲಕಗಳು ಬರುವ ಹಾಗೆ ಹೋರಾಟ ಮಾಡಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ಸ್ಮರಣಕ್ಕೆಯನ್ನು ನೀಡಿ ಗೌರವಿಸಲಾಯಿತು. ಹಾಗೆಯೇ ಭಟ್ಕಳದಿಂದ ಘಟಕದ ಅಧ್ಯಕ್ಷರಾದ ತಿಮ್ಮ ನಾಯ್ಕ್ ರವರು ಮಾತನಾಡಿ ಇನ್ನು ಮುಂದೆ ನಮ್ಮ ಹೋರಾಟ ಕನ್ನಡದ ಪರವಾಗಿರುತ್ತದೆ ಕನ್ನಡ ನಾಮಫಲಕಗಳನ್ನು ಅಳವಡಿಸುವಲ್ಲಿ ನಾವು ಹಾಗೂ ನಮ್ಮ ಸಂಘ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು ಹಾಗೆಯೇ ಈ ಸಂದರ್ಭದಲ್ಲಿ ಲಕ್ಷ್ಮಣ ಕೇಶವ ಮುಂತಾದ ಸಂಘದ ಪದಾಧಿಕಾರಿಗಳು ಹಾಜರಿದ್ದರು ಕಾರ್ಯಕ್ರಮವನ್ನ ಪ್ರದೀಪ್ ಶೆಟ್ಟಿ ಕುಮಟಾ ಇವರು ನಿರೂಪಿಸಿ ವಂದಿಸಿದರು.