ಭ್ರಷ್ಟಾಚಾರದ ದೂರು ಹಿನ್ನಲೆ ಭಟ್ಕಳದ ಮುಂಡಳ್ಳಿ ನ್ಯಾಯಬೆಲೆ ಅಂಗಡಿಗೆ ಅಧಿಕಾರಿಗಳ ತಂಡ ಆಗಮಿಸಿ ತನಿಖೆ ಮತ್ತು ದಾಖಲೆ ಪರಿಶೀಲನೆ
ಭಟ್ಕಳ- ಭ್ರಷ್ಟಾಚಾರದ ದೂರು ಬಂದ ಹಿನ್ನಲೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿ ಯ ನ್ಯಾಯಬೆಲೆ ಅಂಗಡಿ ಗೆ ಗುರುವಾರ ಜಿಲ್ಲಾ ಡಿ.ಆರ್, ಫುಡ್ ಡಿ.ಡಿ, ಭಟ್ಕಳ ತಹಸೀಲ್ದಾರ್ ನೇತೃತ್ವದ ತಂಡ ಆಗಮಿಸಿ ತನಿಖೆ ನಡೆಸಿದರು. ಅಧಿಕಾರಿಗಳು ಮುಂಡಳ್ಳಿಯ ನ್ಯಾಯಬೆಲೆ ಅಂಗಡಿಯ ದಾಖಲೆ ಪರಿಶೀಲನೆ ನಡೆಸಿದರು. ಸ್ಟಾಕ್ ಮತ್ತು ಇತರೆ ದಾಖಲೆ ಪರಿಶೀಲಿಸಿದ ಅಧಿಕಾರಿಗಳು , ಮಹಿಳಾ ಗ್ರಾಹಕರ ಕುಂದು ಕೊರತೆಗಳನ್ನು ಆಲಿಸಿದರು.ನಂತರ ಮುಂಡಳ್ಳಿ ಗ್ರಾಮ ಪಂಚಾಯತ್ ಗೆ ತೆರಳಿ ದೂರುದಾರರಾದ ರಾಜು ನಾಯ್ಕ ಮುಂಡಳ್ಳಿ ಅವರ ಅಹವಾಲು ಆಲಿಸಿ, ಅವರಿಂದ ದಾಖಲೆ ಪಡೆದುಕೊಂಡರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಧಿಕಾರಿಗಳು ರಾಜು ನಾಯ್ಕ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮುಂಡಳ್ಳಿ ನ್ಯಾಯ ಬೇಲೆ ಅಂಗಡಿಗೆ ಆಗಮಿಸಿ , ತನಿಖೆ ನಡೆಸಿ ದಾಖಲೆಗಳನ್ನು ದೂರುದಾರರಿಂದ ಪಡೆದುಕೊಂದಿದೆವೆ, ದಾಖಲೆಗಳನ್ನು ಪರಿಶೀಲಸಿ ಮುಂದಿನ ದಿನಗಳಲಿ ವರದಿ ನೀಡಿ, ಭ್ರಷ್ಟಾಚಾರ ನಡೆದರೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ನಂತರ ಸಾಮಾಜಿಕ ಹೋರಾಟಗಾರ
ಗ್ರಾಮ ಪಂಚಾಯತ ಸದಸ್ಯ ರಾಜು ನಾಯ್ಕ ಮುಂಡಳ್ಳಿ ಮಾತನಾಡಿ ಭಟ್ಕಳ ತಾಲೂಕಿನ ಮುಂಡಳ್ಳಿ ನ್ಯಾಯಬೆಲೆ ಅಂಗಡಿಯಲ್ಲಿ 2016 ರಿಂದ 2021 ರವರೆ ಆಡಿಟ್ ನಡೆಸಿಲ್ಲ, 2011 ರಿಂದ 2021ರ ವರೆಗೆ ನ್ಯಾಯಬೆಲೆ ಅಂಗಡಿ ನಡೆಸುತ್ತಿರುವ ಯುವಕ ಸಂಘ ಮತ್ತು ಸಮಿತಿ ನವೀಕರಣ ಮತ್ತು ಕಾನೂನು ಬದ್ಧವಾಗಿ ನೋಂದೋಣಿ ಆಗಿಲ್ಲ, ಎಂದು ತಿಳುಸಿದರು. ಈ ಸಮಯದಲ್ಲಿ ಮುಂಡಳ್ಳಿ ನ್ಯಾಯಬೆಲೆ ಅಂಗಡಿಯಲ್ಲಿ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಮುಂಡಳ್ಳಿ ಹಲವು ಗ್ರಾಮಸ್ತರು ಹಾಜರಿದ್ದರು.