ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ನಾಳೆ ಭಟ್ಕಳದಲ್ಲಿ
ಕ್ಯಾನ್ಸರ್ ಜಾಗ್ರತಿ ಅರಿವು ಮೂಡಿಸಲು 5 ಕಿ.ಮಿ ಮ್ಯಾರಥಾನ್ ಓಟ
ಭಟ್ಕಳ-ಭಟ್ಕಳದಲ್ಲಿ ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಜನಜನಿತವಾಗಿರುವ *ಕ್ರಿಯಾಶೀಲ ಗೆಳೆಯರ ಸಂಘ* ಕ್ಯಾನ್ಸರ್ ಅರಿವು ಮೂಡಿಸುವ ಸಲುವಾಗಿ ಪ್ರಪ್ರಥಮ ಬಾರಿಗೆ ಭಟ್ಕಳ್ದಲ್ಲಿ *5 km ಮ್ಯಾರಥಾನ್ ಓಟವನ್ನು* ಹಮ್ಮಿಕೊಂಡಿದ್ದು, ಆರೋಗ್ಯ ಇಲಾಖೆ ಭಟ್ಕಳ, ಪೋಲಿಸ್ ಇಲಾಖೆ ಭಟ್ಕಳ ಜೊತೆಯಾಗಿ ಇತರೇ ಸರಕಾರಿ, ಅರೆಸರಕಾರಿ ಇಲಾಖೆಗಳು, ತಾಲೂಕಿನ ಎಲ್ಲ ಯುವಕ ಸಂಘಗಳು, ಸ್ಪೋರ್ಟ್ಸ ಕ್ಲಬ್, ಯೂಥ್ ಕ್ಲಬ್ ಗಳು, ಶಾಲಾ ಕಾಲೇಜುಗಳು, ಜೊತೆಗೆ ಭಟ್ಕಳದ ಸಮಸ್ತ ನಾಗರೀಕರು ಜೊತೆಯಾಗಿ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
*ಫೆಬ್ರವರಿ 4 ವಿಶ್ವ ಕ್ಯಾನ್ಸರ್ ದಿನ*
ಇತ್ತೀಚಿನ ದಿನಗಳಲ್ಲಿ ಮಹಾಮಾರಿಯಂತೆ ಹಬ್ಬುತ್ತಿರುವ ಕ್ಯಾನ್ಸರ್ ಕಾಯಿಲೆಯ ಕುರಿತು ಅರಿವು ಮೂಡಿಸುವ ಸಲುವಾಗಿ ಫೆಬ್ರವರಿ 5 ಭಾನುವಾರ ಈ ಮ್ಯಾರಥಾನ್ ಓಟ ನಡೆಯಲಿದ್ದು ಬೆಳಿಗ್ಗೆ 6:30ಕ್ಕೆ *ಸರ್ಪನಕಟ್ಟೆಯ ಪಿಯು ಕಾಲೇಜ ಆವರಣದಿಂದ* ಚಾಲನೆಗೊಂಡು ಪುರವರ್ಗ, ಕಾಳಿಕಾಂಬಾ ದೇವಸ್ಥಾನ, ಚೌಥನಿ, ಹೂವಿನಪೇಟೆ, ಮಾರಿಕಟ್ಟೆ, ರಾಜಾಂಗಣ, ಅರ್ಬನ ಬ್ಯಾಂಕ್, ಪಿಎಲ್ ಡಿ ಬ್ಯಾಂಕ್, ಸರ್ಕಲ್ ಮೂಲಕ ಹಾದು ಸಾಗರರಸ್ತೆಯ ಪೋಲಿಸ್ ಮೈದಾನದಲ್ಲಿ ಸೇರಲಿದೆ.
*ವಿಶೇಷ ಆಮಂತ್ರಿತರಾಗಿ ಕ್ಯಾನ್ಸರ್ ತಜ್ಞರಾದ ಡಾ. ರಾಮನಾಥ ಶೆಣೈ ಅವರಿಂದ ಕ್ಯಾನ್ಸರ್ ತಡೆಗಟ್ಟುವದರ ಜೊತೆಗೆ ಕ್ಯಾನ್ಸರ್ ಎದುರಿಸುವ ಕುರಿತು ತಮ್ಮ ಸಲಹೆ ನೀಡಲಿದ್ದು ಭಟ್ಕಳದ ಜನತೆ ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕಾಗಿ ಸಂಘಟಕರು ವಿನಂತಿಸಿಕೊಂಡಿದ್ದಾರೆ.