ಫೇ. ೧೦ ಅರಣ್ಯವಾಸಿಗಳ ಬೆಂಗಳೂರು ಚಲೋ;
ಜಿಲ್ಲಾದ್ಯಂತ ಐದು ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳು ಭಾಗವಹಿಸುವಿಕೆ.
ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳನ್ನ ಸರಕಾರದ ಗಮನಕ್ಕೆ ಸೆಳೆಯುವ ಉದ್ದೇಶದಿಂದ ಫೇಬ್ರವರಿ ೧೦ ರಂದು ಅರಣ್ಯವಾಸಿಗಳ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಜಿಲ್ಲಾದ್ಯಂತ ಐದು ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳು ಭಾಗವಹಿಸುವ ವಿಶ್ವಾಸವನ್ನ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಇಂದು ಬೆಂಗಳೂರು ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಶಿರಸಿ ತಾಲೂಕ ಅರಣ್ಯ ಅತಿಕ್ರಮಣದಾರರನ್ನ ಉದ್ದೇಶಿಸಿ ಮಾತನಾಡುತ್ತಿದ್ದರು.
ನಿರಂತರ ೩೨ ವರ್ಷದಿಂದ ಅರಣ್ಯ ಭೂಮಿ ಹಕ್ಕಿಗಾಗಿ ಸಾಂಘಿಕ ಮತ್ತು ಕಾನೂನಾತ್ಮ ಹೋರಾಟ ಜರುಗುತ್ತಿದ್ದರೂ ಸರಕಾರ ಸ್ಫಂದಿಸದೇ ಇರುವುದು ವಿಷಾದಕರ. ಈ ಹಿನ್ನೆಲೆಯಲ್ಲಿ ಹೋರಾಟಕ್ಕೆ ಹೇಚ್ಚಿನ ಒತ್ತಡ ನೀಡುವುದು ಅನಿವಾರ್ಯವೆಂದು ಅವರು ಹೇಳಿದರು.
ಸಭೆಯಲ್ಲಿ ಇಬ್ರಾಹಿಂ ಗೌಡಳ್ಳಿ, ಜಿಬಿ ನಾಯ್ಕ ಶ್ರೀನಗರ, ಎಮ್ ಆರ್ ನಾಯ್ಕ, ಶಬ್ಬೀರ್, ಗಣಪತಿ ಬಿ ನಾಯ್ಕ, ನಾಸಿರ್ ಖಾನ್, ಲಿಂಗಯ್ಯ ದೇವಾಡಿಗ, ನಾಗರಾಜ ನಾಯ್ಕ, ನಾಗರಾಜ ದೇವಸ್ಥಳ್ಳಿ, ಗೋಪಾಲ ಮಾಸ್ತö್ಯ ಮೋಗೇರ, ನೇಹರೂ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಹತ್ತು ಪ್ರಮುಖ ಬೇಡಿಕೆಗಳು:
ಅರಣ್ಯವಾಸಿಗಳ ಪರವಾಗಿ ಸುಫ್ರೀಂ ಕೋರ್ಟನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಬೇಕು, ಅಸಮರ್ಪಕ ಜಿಪಿಎಸ್ ಮೇಲ್ಮನವಿ ಅಭಿಯಾನಕ್ಕೆ ಆದೇಶ ಮಾಡಬೇಕು, ಅರಣ್ಯ ಸಿಬ್ಬಂದಿಗಳಿAದ ಉಂಟಾಗುತ್ತಿರುವ ದೌರ್ಜನ್ಯ, ಕಿರುಕುಳ ನಿಯಂತ್ರಿಸುವುದು, ೧೯೭೮ ರ ಪೂರ್ವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರಕಾರದಿಂದ ಅರಣ್ಯೇತರ ಚಟುವಟಿಕೆಗೆ ಬಿಡುಗಡೆ ಮಾಡಿದ ೨,೫೧೩ ಕುಟುಂಬಗಳಿಗೆ ಹಾಗೂ ಜಿಲ್ಲೆಯಲ್ಲಿ ೬,೧೫೬ ಹಂಗಾಮಿ ಲಾಗಣಿದಾರರಿಗೆ ಖಾಯಂ ಮಂಜೂರಿ ಹಕ್ಕು ಪತ್ರ ನೀಡುವುದು ಮುಂತಾದ ಪ್ರಮುಖ ಹತ್ತು ಬೇಡಿಕೆಗಳನ್ನು ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಅಗ್ರಹಿಸಲಾಗುವುದೆಂದು ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದರು.