ಉತ್ತರ ಕನ್ನಡ ಜಿಲ್ಲೆಯ
ಜೋಯಿಡಾ ಪೋಲಿಸ್ ಠಾಣೆಯೊಳಗೆ ಹೊಡೆದಾಡಿಕೊಂಡ 3 ಜನ ಪೋಲಿಸರು
ಜೋಯಿಡಾ – ಶಾಂತಿ ಕಾಪಾಡಬೇಕಾದ ಪೊಲೀಸ್ ಸಿಬ್ಬಂದಿಗಳೇ ಠಾಣೆಯೊಳಗೆ ಹೊಡೆದಾಡಿಕೊಂಡ ಘಟನೆ ಉತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮೂವರು ಪೊಲೀಸ್ ಸಿಬ್ಬಂದಿಗಳು ಕ್ಷುಲ್ಲಕ ಕಾರಣವೊಂದಕ್ಕೆ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾರ್ವಜನಿಕ ವಲಯದಲ್ಲಿ ಹೊಡೆದಾಟ, ಬಡಿದಾಟ ಆದಾಗ ಹೋಗಿ ತಪ್ಪಿಸಿ, ಬುದ್ದಿವಾದ ಹೇಳಿ ಬರುವ ಪೊಲೀಸರೆ ಈಗ ಹೊಡೆದಾಡಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಇವರು ಹೊಡೆದಾಡಿಕೊಂಡ ವಿಡಿಯೋ ಠಾಣೆಯಲ್ಲಿನ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ಇವರು ಹೊಡೆದಾಡಿಕೊಳ್ಳುತ್ತಿರುವುದನ್ನ ಗಮನಿಸಿದ ಠಾಣಾಧಿಕಾರಿ ಮೂವರಿಗೂ ಬುದ್ದಿ ಮಾತು ಹೇಳಿದ್ದು, ಜನರಿಗೆ ಬುದ್ಧಿ ಹೇಳಬೇಕಾದ ಪೋಲಿಸರೇ ಈ ರೀತಿ ವರ್ತಿಸಿರುವುದು ಸಾರ್ವಜನಿಕರಿಗೆ ಬೇಸರ ಮೂಡಿಸಿದೆ.