*ಭಟ್ಕಳದಲ್ಲಿ ವಿಜೃಂಬಣೆಯಿಂದ ನಡೆದ 77 ನೆ ಸ್ವಾತಂತ್ರ್ಯ ದಿನಾಚರಣೆ*
ಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತೆ ಡಾಕ್ಟರ್ ನಯನಾ .ಎನ್
ಭಟ್ಕಳ- ಭಟ್ಕಳ ತಾಲೂಕ ಕ್ರೀಡಾಂಗಣದಲ್ಲಿ ಇಂದು ಭಟ್ಕಳ ತಾಲೂಕ ಆಡಳಿತದ ನೇತೃತ್ವದಲ್ಲಿ ನಡೆದ 77 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಟ್ಕಳ ಸಹಾಯಕ ಆಯುಕ್ತೆ ಡಾಕ್ಟರ್ ನಯನಾ.ಎನ್ ಅವರು ಧ್ವಜಾರೋಹಣ ನಡೆಸಿ ಗೌರವ ವಂದನೆ ಸ್ವೀಕರಿಸಿದರು. ನಂತರ ಮಾತನಾಡಿದ ಅವರು ನಮ್ಮ ದೇಶಕ್ಕೆ ಸ್ವಾತಂತ್ರ್ಯವು ಅನೇಕ ಮಹಾನ ವ್ಯಕ್ತಿಗಳ ಹೋರಾಟ , ತ್ಯಾಗ ಮತ್ತು ಬಲಿದಾನದಿಂದ ಸಿಕ್ಕಿದೆ. ಕಳೆದ 76 ವರುಷಗಳಿಂದ ನಮ್ಮ ದೇಶ ಬಹಳಸ್ಟು ಅಭಿವೃದ್ಧಿ ಕಂಡಿದೆ. ನಮ್ಮ ದೇಶ ಚಂದಯಾನ 3 ನ್ನು ಯಶಸ್ವಿಯಾಗಿ ಪೂರೈಸಿದ ಜಗತ್ತಿನ 4 ದೇಶವಾಗಿದೆ ಎಂದರು. ಹಿಂದಿನ ಕಾಲದಲ್ಲಿ ನಮ್ಮ ದೇಶವು ವಿದೇಶಗಳಿಂದ ಆಹಾರ ಧಾನ್ಯಗಳನ್ನು ಬಳಕೆಗಾಗಿ ಆಮದು ಮಾಡಿಕೊಳ್ಳುತ್ತಿತು,ಈಗ ನಮ್ಮ ದೇಶವು ವಿದೇಶಗಳಿಗೆ ಆಹಾರ ಧಾನ್ಯಗಳನ್ನು ರಫ್ತು ಮಾಡುತ್ತಿದ್ದು ನಮ್ಮ ದೇಶದ ಕೃಷಿ ಅಷ್ಟು ಮುಂದುವರಿದಿದೆ ಎಂದರು. ನ ಇವತ್ತಿನ ದಿನಗಳಲ್ಲಿ ಯುವ ಜನಾಂಗ ಪಾಶ್ಚಾತ್ಯ ಸಂಸ್ಕøತಿಗೆ ಮಾರುಹೋಗುತ್ತಿದ್ದು ನಮ್ಮ ದೇಶದ ಸಂಸ್ಕøತಿ ಅಭಿಮಾನ ಮರೆಯುತ್ತಿರುವುದು ಕಳವಳಿಕರಿಯಾಗಿದೆ. ದೇಶದ ಭದ್ರ ಭುನಾಧಿಯಾಗಿರುವ ಯುವ ಜನಾಂಗ ನಮ್ಮ ದೇಶ-ನಮ್ಮ ಹೆಮ್ಮೆ ಎಂಬುದನ್ನು ಅರಿತು ದೇಶಾಭಿಮಾನ ಬೆಳಿಸಿಕೊಂಡಾಗ ಮಾತ್ರ ದೇಶದ ಸರ್ವೊತೋಮುಖ ಅಭಿವೃದ್ದಿಗೆ ಸಹಕಾರಿಯಾಲಿದೆ ಎಂದರು.
ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಮತ್ತು ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಶಾಲಾ , ಕಾಲೇಜು ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಾಲೂಕ ಆಡಳಿತ ವತಿಯಿಂದ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇದೆ ಸಂದರ್ಭದಲ್ಲಿ 5 ಜನ ಮಾಜಿ ಸೈನಿಕರನ್ನು ತಾಲೂಕ ಆಡಳಿತ ವತಿಯಿಂದ ಸನ್ಮಾನಿಸಲಾಯಿತು.
77 ನೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸರ್ಕಾರಿ ಕಚೇರಿಗಳಿಗೆ ಏರ್ಪಡಿಸಿದ್ದ ದೀಪಾಲಂಕಾರ ಸ್ಪರ್ಧೆಯಲ್ಲಿ ಅತೀ ಆಕರ್ಷಕವಾಗಿ ದೀಪಾಲಂಕಾರ ಮಾಡಿ ಪ್ರಥಮ ಬಹುಮಾನ ಪಡೆದುಕೊಂಡ ಹೆಸ್ಕಾಂ ಭಟ್ಕಳ ಕಚೇರಿಯ ಮುಖ್ಯ ಇಂಜಿನಿಯರ್ ಮಂಜುನಾಥ ಅವರಿಗೆ ಪ್ರಶಸ್ತಿ ಪತ್ರ ನೀಡಿ ತಾಲೂಕ ಆಡಳಿತ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ತಹಶೀಲ್ದಾರ್ ತಿಪ್ಪೇಸ್ವಾಮಿ, ಭಟ್ಕಳ ಡಿ.ಎಸ್.ಪಿ ಕೆ ಶ್ರೀಕಾಂತ್, ಬಿ.ಇ.ಓ ವಿ.ಡಿ.ಮೊಗೆರ, ಪುರಸಭಾ ಮುಖ್ಯಾಧಿಕಾರಿ ಸುರೇಶ್ ಎಂ, ತಲೂಕಾ ಪಂಚಾಯತ್ ಈ.ಓ ಪ್ರಭಾಕರ್ ಚಿಕ್ಕನಮನೆ ಮುಂತಾದವರು ಉಪಸ್ಥಿತರಿದ್ದರು.ಶಿಕ್ಷಕ ಶ್ರೀಧರ್ ಶೇಟ್ ಕಾರ್ಯಕ್ರಮ ನಿರೂಪಿಸಿದರು. ತಹಶೀಲ್ದಾರ್ ತಿಪ್ಪೇಸ್ವಾಮಿ ಸ್ವಾಗತಿಸಿದರು.