ಡೇಕನ್ ವೆಲ್ಫೇರ್ ಅಸೋಸಿಯೇಷನ್( ರಿ)ಭಟ್ಕಳ ವತಿಯಿಂದ ವಿಜೃಂಬಣೆಯಿಂದ ನಡೆದ 77 ನೆ ಸ್ವಾತಂತ್ರ್ಯ ದಿನಾಚರಣೆ
ಭಟ್ಕಳ- ಭಟ್ಕಳ ತಾಲೂಕಿನ ಡೆಕ್ಕನ್
ವೆಲ್ಫೇರ್ ಅಸೋಸಿಯೇಷನ್ (ರಿ)
ಮತ್ತು ವಿಶನ್ ಇಂಡಿಯಾ ಮಿಷನ್ ಪೌಂಡೇಶನ್ ವತಿಯಿಂದ ಕರ್ನಾಟಕ ಶಿಕ್ಷಣ ಅಕಾಡೆಮಿ ಕಚೇರಿಯಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯು ನಡೆಯಿತು. ಮುಖ್ಯ ಅತಿಥಿಯಾಗಿ ಭಾಬಾಗವಹಿಸಿ ಮಾತನಾಡಿದ ಕರ್ನಾಟಕ ರಣಧೀರರ ವೇಧಿಕೆ ಕರಾವಳಿ ಕರ್ನಾಟಕ ಅಧ್ಯಕ್ಷ ಕುಮಾರ ನಾಯ್ಕ ಮುಂಡಳ್ಳಿ ಅವರು ನಮ್ಮ ದೇಶಕ್ಕೆ ಸ್ವಾತಂತ್ರ್ಯವು ಅನೇಕ ಮಹಾನ ವ್ಯಕ್ತಿಗಳ ಹೋರಾಟ , ತ್ಯಾಗ ಮತ್ತು ಬಲಿದಾನದಿಂದ ಸಿಕ್ಕಿದೆ. ಕಳೆದ 76 ವರುಷಗಳಿಂದ ನಮ್ಮ ದೇಶ ಬಹಳಸ್ಟು ಅಭಿವೃದ್ಧಿ ಕಂಡಿದೆ. ನಮ್ಮ ದೇಶ ಚಂದಯಾನ 3 ಉಪಗ್ರಹವನ್ನು ನ್ನು ಯಶಸ್ವಿಯಾಗಿ ಪೂರೈಸಿದ ಜಗತ್ತಿನ 4 ದೇಶವಾಗಿದೆ ಎಂದರು. ಹಿಂದಿನ ಕಾಲದಲ್ಲಿ ನಮ್ಮ ದೇಶವು ವಿದೇಶಗಳಿಂದ ಆಹಾರ ಧಾನ್ಯಗಳನ್ನು ಬಳಕೆಗಾಗಿ ಆಮದು ಮಾಡಿಕೊಳ್ಳುತ್ತಿತು,ಈಗ ನಮ್ಮ ದೇಶವು ವಿದೇಶಗಳಿಗೆ ಆಹಾರ ಧಾನ್ಯಗಳನ್ನು ರಫ್ತು ಮಾಡುತ್ತಿದ್ದು ನಮ್ಮ ದೇಶದ ಕೃಷಿ ಅಷ್ಟು ಮುಂದುವರಿದಿದೆ ಎಂದರು. ನ ಇವತ್ತಿನ ದಿನಗಳಲ್ಲಿ ಯುವ ಜನಾಂಗ ಪಾಶ್ಚಾತ್ಯ ಸಂಸ್ಕøತಿಗೆ ಮಾರುಹೋಗುತ್ತಿದ್ದು ನಮ್ಮ ದೇಶದ ಸಂಸ್ಕøತಿ ಅಭಿಮಾನ ಮರೆಯುತ್ತಿರುವುದು ಕಳವಳಿಕರಿಯಾಗಿದೆ. ದೇಶದ ಭದ್ರ ಭುನಾಧಿಯಾಗಿರುವ ಯುವ ಜನಾಂಗ ನಮ್ಮ ದೇಶ-ನಮ್ಮ ಹೆಮ್ಮೆ ಎಂಬುದನ್ನು ಅರಿತು ದೇಶಾಭಿಮಾನ ಬೆಳಿಸಿಕೊಂಡಾಗ ಮಾತ್ರ ದೇಶದ ಸರ್ವೊತೋಮುಖ ಅಭಿವೃದ್ದಿಗೆ ಸಹಕಾರಿಯಾಲಿದೆ ಎಂದರು.
ಕರ್ನಾಟಕ ಶಿಕ್ಷಣ ಅಕಾಡೆಮಿ ಕಚೇರಿಯಲ್ಲಿ ನಡೆದ 77 ನೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಡೇಕನ್ ವೆಲ್ಫೇರ ಅಸ್ಸೋಸಿಯೇಶನ್ ಅಧ್ಯಕ್ಷ ಜೊತೆಗೂಡಿ ಸಾಮಾಜಿಕ ಕಾರ್ಯಕರ್ತ , ನಿವೃತ್ತ ಶಿಕ್ಷಕ ಫಾರೂಕ್ ಶೇಕ್ ಅವರು ಧ್ವಜಾರೋಹಣ ನೆರವೇರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡೇಕನ್ ವೆಲ್ಫೇರ್ ಅಸೋಸಿಯೇಷನ್ ಉಪಾಧ್ಯಕ್ಷ ಡಾಕ್ಟರ್ ನಸಿಮ್ ಖಾನ್ ಶಿರಾಲಿ ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯವು ಅನೇಕ ಮಹಾನ ವ್ಯಕ್ತಿಗಳ ಹೋರಾಟ , ತ್ಯಾಗ ಮತ್ತು ಬಲಿದಾನದಿಂದ ಸಿಕ್ಕಿದೆ.ನಾವು ಅದನ್ನು ಈಗ ಉಚಿತವಾಗಿ ಅನುಭವಿಸುತ್ತಿದೆವೆ . ಅವರ ಶ್ರಮ ಇನ್ನು ನಮ್ಸ್ಗೆ ಅರ್ಥವಾಗಿಲ್ಲ ಎಂದರು. ಈ ಕಾರ್ಯಕ್ರಮದಲ್ಲಿ ಹೈ.ವೆ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲಕ , ಸಮಾಜ ಸೇವಕ ರವೀಂದ್ರ ರಾವ್ ಅವರು ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ಅಕಾಡೆಮಿ ಅಧ್ಯಕ್ಷ ಅಮ್ಜದ್ ಅಲಿ ಶೇಕ್ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಅಕಾಡೆಮಿ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಿತನುಡಿಗಳನ್ನು ನುಡಿದರು. ಪ್ರೊಫೆಸರ್ ಗೌಸ್ ಅಲಿ ಶೆಕ್ ಎಲರನ್ನು ವಂದಿಸಿದರು. ಈ ಕಾರ್ಯಕ್ರಮದಲ್ಲಿ ಡೇಕನ್
ವೆಲ್ಫರ ಅಸ್ಸೋಸಿಆಶನ್ ಅಧ್ಯಕ್ಷ ಐ.ಡಿ.ಖಾನ್, ಕಾರ್ಯದರ್ಶಿ, ಖಜಾಂಚಿ, ಪದಾಧಿಕಾರಿಗಳು ಭಾಗವಾಸಿದ್ದರು.