ಬಹ್ಮರ್ಷಿ ನಾರಾಯಣ ಗುರು ಅವರ ಚಿಂತನೆ ವಿಶ್ವಕ್ಕೇ ಮಾರ್ಗದರ್ಶಿ : ಶಿವಾನಂದ ನಾಯ್ಕ.
ಭಟ್ಕಳ: ಬಹ್ಮರ್ಷಿ ನಾರಾಯಣ ಗುರು ಅವರ ಶಿಕ್ಷಣದಿಂದ ಸ್ವತಂತ್ರರಾಗಿ ಸಂಘಟನೆಯಿಂದ ಶಕ್ತಿವಂತರಾಗಿ ಎಂಬ ಚಿಂತನೆ ವಿಶ್ವಕ್ಕೇ ಮಾರ್ಗದರ್ಶಿ ಎಂದು ಹೆಸ್ಕಾಂ ಅಭಿಯಂತರ ಶಿವಾನಂದ ನಾಯ್ಕ ಹೇಳಿದರು. ಅವರು ಇಲ್ಲಿನ ಶ್ರೀ ನಾರಾಯಣ ಗುರು ವಸತಿ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ನಡೆದ ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ನಾರಾಯಣ ಗುರು ಅವರು ಬುದ್ಧ, ಬಸವ, ರಾಮಕೃಷ್ಣ, ವಿವೇಕಾನಂದರಂತೆ ಶೋಷಿತರ ಉದ್ಧಾರಕ್ಕಾಗಿ ಶ್ರಮಿಸಿದರು. ಅವರ ಮಹತ್ಕಾರ್ಯಗಳಿಂದ ನಾವೆಲ್ಲ ಪ್ರೇರಣೆ ಪಡೆಯಬೇಕು. ವಿದ್ಯಾರ್ಥಿಗಳೆಲ್ಲರಲ್ಲೂ ವಿಭಿನ್ನ ಪ್ರತಿಭೆಗಳಿವೆ. ಭವಿಷ್ಯದಲ್ಲಿ ನಿಮ್ಮ ಸಾಮರ್ಥ್ಯ ಗುರುತಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ನುಡಿದರು. ಭಟ್ಕಳ ತಾಲೂಕಿನ ನಾರಾಯಣ ಗುರು ಜಯಂತಿ ಸಮಿತಿಯ ಸಂಚಾಲಕ ಮನಮೋಹನ ನಾಯ್ಕ ಮಾತನಾಡಿ ನಾರಾಯಣ ಗುರುಗಳು ಸಾಮಾಜಿಕ ಪರಿವರ್ತನೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹನಿಯರು.ಅವರ ಜಯಂತಿಯನ್ನು ತಾಲೂಕು ಮಟ್ಟದಲ್ಲಿ ಬ್ರಹತ್ ಪ್ರಮಾಣದಲ್ಲಿ ಆಯೋಜನೆ ಮಾಡಲು ಸಿದ್ಧತೆ ನಡೆಯುತ್ತಿದ್ದು ಸೆಪ್ಟೆಂಬರ್ ೧೦ರಂದು ನಡೆತುವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಕರೆ ನೀಡಿದರು. ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ, ನಾರಾಯಣ ಗುರು ವಸತಿಶಾಲೆಯ ಪ್ರಾಂಶುಪಾಲ ರಮೇಶ ನಾಯ್ಕ ನಾರಾಯಣ ಗುರುಗಳ ಕೊಡುಗೆಗಳನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ನಾರಾಯಣ ಗುರುಗಳ ಜೀವನ ಮತ್ತು ಸಾಮಾಜಿಕ ಸುಧಾರಣೆಗಳು ಎಂಬ ವಿಷಯದ ಕುರಿತು ನಡೆದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತ
ವಿದ್ಯಾರ್ಥಿಗಳಿಗೆ ಸಾಹಿತ್ಯ ಪರಿಷತ್ ವತಿಯಿಂದ ಬಹುಮಾನ ವಿತರಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ಆಶಿತಾ ನಾಯ್ಕ ಪ್ರಥಮ, ರೋಹನ ಗುಡಿಗಾರ ದ್ವಿತೀಯ , ಶ್ರೇಯಾ ಜಿ.ಗೌಡ ತೃತೀಯ ಬಹುಮಾನ ಪಡೆದರೆ ಭಾಷಣ ಸ್ಪರ್ಧೆಯಲ್ಲಿ ಆಶಿಕಾ ನಾಯ್ಕ ಮತ್ತು ಮಂಜುನಾಥ ನಾಯ್ಕ ಪ್ರಥಮ, ಛಾಯಾ ನಾಯ್ಕ ದ್ವಿತೀಯ ಹಾಗೂ ಹರೀಶ ದೊಡ್ಮನಿ ತೃತೀಯ ಬಹುಮಾನ ಪಡೆದರು. ಕಾರ್ಯಕ್ರಮದಲ್ಲಿ ಪಾಂಡುರಂಗ ನಾಯ್ಕ, ಶಿಕ್ಷಕರಾದ ರಾಧಿಕಾ ಗೌಡ, ವಿಜಿತಾ ನಾಯ್ಕ, ವೆಂಕಟೇಶ ಮುಕ್ರಿ, ಅನಿಲ ದೇಶಬಂಢಾರಿ, ಕುಲದೀಪ ನಾಯ್ಕ, ವಿದ್ಯಾರ್ಥಿಗಳು ಹಾಗೂ ಪಾಲಕವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಲಾಯಿತು. ವಿದ್ಯಾರ್ಥಿನಿ ಕಾವ್ಯ ನಾಯ್ಕ ಪ್ರಾರ್ಥಿಸಿದರೆ ಹರ್ಷಿತ್ ದೊಡ್ಮನಿ ವಂದಿಸಿದರು ವಿದ್ಯಾರ್ಥಿನಿ ಛಾಯಾ ನಾಯ್ಕ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿದರು. ವಿದ್ಯಾರ್ಥಿಗಳು ನಾರಾಯಣ ಗುರುಗಳ ಜೀವನ ಸಾಮಾಜಿಕ ಸುಧಾರಣೆಗಳ ಕುರಿತು ಉತ್ತಮವಾಗಿ ಮಾತನಾಡಿದರು. ಸಂಪೂರ್ಣ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ನಿರ್ವಹಿಸಿದ್ದು ವಿಶೇಷವಾಗಿತ್ತು.