ಆಟೋ ಪಲ್ಟಿಯಾಗಿ ಚಾಲಕ ಸಾವು
ಭಟ್ಕಳ: ರಸ್ತೆಗೆ ಅಡ್ಡ ಬಂದ ದನ ತಪ್ಪಿಸಲು ಹೋದ ಆಟೋರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಆಟೋ ಚಾಲಕ ಗಂಭೀರವಾಗಿ ಗಾಯಗೊಂಡು ಸಾವನಪ್ಪಿರುವ ಘಟನೆ ಮಾರುಕೇರಿ ಕೋಟಖಂಡದಲ್ಲಿ ನಡೆದಿದೆ
ಮೃತ ಆಟೋ ಚಾಲಕ ನಾಗೇಶ ಕೃಷ್ಣ ಗೊಂಡ, ಈತ ಭಟ್ಕಳ ಕಡೆಯಿಂದ ಮಾರುಕೇರಿ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಆಟೋ ಚಲಾಯಿಸಿಕೊಂಡು ಬಂದವನು ಕೊಟಖಂಡ ಸಮೀಪ ರಸ್ತೆಗೆ ದನ ಅಡ್ಡ ಬಂದ ಹಿನ್ನೆಲೆ ದನವನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ.
ಅಪಘಾತದಲ್ಲಿ ಈತ ಗಂಭೀರವಾಗಿ ಗಾಯಗೊಂಡಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ವೇಳೆ ಗೊರಟೆ ಕ್ರಾಸ್ ಸಮೀಪ ಸಾವನ್ನಪ್ಪಿದ್ದಾನೆ. ಆಟೋ ಹಿಂಬದಿಯಲ್ಲಿದ್ದ ನಾಗರಾಜ ನಾಯ್ಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಭಟ್ಕಳ ಆಟೋ ಚಾಲಕರ ಸಂಘದಿಂದ ಸಂತಾಪ ಸೂಚಿಸಲಾಯಿತು. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.