ಭಟ್ಕಳ ದಲ್ಲಿ ಕಟ್ಟಡ ಕಾರ್ಮಿಕರ ಪ್ರಥಮ ತಾಲೂಕು ಸಮ್ಮೇಳನ…
ಮತ್ತು ಭಟ್ಕಳ ದ ಪುರಸಭಾ ಬಿಲ್ಡಿಂಗ್ ರೂಮ್ ನಂಬರ್ 8 ರಲ್ಲಿ ಎ. ಐ .ಟಿ.ಯು. ಸಿ ಅಧಿಕೃತ ಕಚೇರಿ ಉದ್ಘಾಟನೆ
ಭಟ್ಕಳ-ದಿನಾಂಕ 24.12.2023 ಭಾನುವಾರ ಬೆಳಿಗ್ಗೆ 11 ಗಂಟೆಗೆ ಭಟ್ಕಳ ದ ಪೇಟೆ ಹನುಮಂತ ದೇವಸ್ಥಾನ ಸಭಾಂಗಣ ಭಟ್ಕಳ ದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಎ.ಐ.ಟಿ.ಯು.ಸಿ ತಾಲೂಕು ಸಮ್ಮೇಳನ ನಡೆಯಿತು.
ಕಾಮ್ರೆಡ್ ಹೆಚ್. ಜಿ .ಉಮೇಶ್.
ಅವರಗೆರೆ. ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲುಒಡೆಯುವ ಕ್ವಾರಿ ಕಾರ್ಮಿಕರ ಸಂಘ ಎ.ಐ.ಟಿ.ಯು.ಸಿ ಬೆಂಗಳೂರು ಇವರು ಉದ್ಘಾಟನೆ ನೆರವೇರಿಸಿ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಹಲವಾರು ಸಮಸ್ಯೆಗಳ ಬಗ್ಗೆ ಮತ್ತು ಶೈಕ್ಷಣಿಕ ಅರ್ಜಿ ಧನಸಹಾಯ ಕಡಿತ ಆಗಿರುವ ಬಗ್ಗೆ ಪಿಂಚಣಿ ಅರ್ಜಿಗೆ ಹೆಚ್ಚಿನ ಧನ ಸಹಾಯ ಒದಗಿಸುವ ಬಗ್ಗೆ ಎಲ್ಲಾ ಬಾಕಿ ಇರುವ ಅರ್ಜಿಗಳಿಗೆ ಈ ಕೂಡಲೇ ಧನಸಹಾಯ ಜಮಾ ಮಾಡುವ ಬಗ್ಗೆ ಮುಂತಾದ ಹಲವಾರು ಕಾರ್ಮಿಕರ ಸಮಸ್ಯೆಗಳ ಒಳಗೊಂಡಂತೆ ಮಾತನಾಡಿದರು. ಎ.ಐ.ಟಿ.ಯು. ಸಿ
ಧ್ವಜಾರೋಹಣ ಕಾರ್ಯಕ್ರಮ ಅತ್ಯಂತ ಶಿಸ್ತುಬದ್ಧವಾಗಿ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಗಿರೀಶ್. ಹಾಗೂ ರಾಜ್ಯ ಕಾರ್ಯದರ್ಶಿ ಕಾಮ್ರೆಡ್ ಜಿ. ಎನ್.ರೇವಣಕರ್ ಮತ್ತು ತಾಲೂಕು ಸಂಘಟನೆಯ ಕಾರ್ಯಕರ್ತರು ಹಾಗೂ ಕಟ್ಟಡ ಕಾರ್ಮಿಕರೊಂದಿಗೆ ಧ್ವಜಾರೋಹಣ ನೆರವೇರಿತು.
ಸಭೆಯನ್ನು ಉದ್ದೇಶಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಗಿರೀಶ್ ರವರು ಮಾತನಾಡಿ ಎ.ಐ.ಟಿ.ಯು. ಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್. ಸ್ವಾತಂತ್ರ್ಯ ಪೂರ್ವದಲ್ಲಿ 1920 ರಲ್ಲಿ ಲಾಲಾ ಲಜಪತ್ ರಾಯ್ ಸ್ಥಾಪನೆ ಮಾಡಿರುವುದು. ಈ ಸಂಘಟನೆಯಲ್ಲಿ ಸುಭಾಷ್ ಚಂದ್ರ ಬೋಸ್. ಜವಾಹರ್ಲಾಲ್ ನೆಹರು. ಎಚ್. ಕೆ ಗಾಂಗೆ ಮುಂತಾದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಈ ಸಂಘಟನೆ ಕಟ್ಟಿದ್ದು ಇದು ಸಮರ್ಥ ಸಮಾಜ ನಿರ್ಮಾಣವಾಗಬೇಕೆಂದು ಕೂಲಿ ಕಾರ್ಮಿಕರು .ರೈತರು .ಬಡವರ ಒಳಗೊಂಡಂತೆ ಸ್ವಾತಂತ್ರ್ಯ ಪೂರ್ವದ ಸಂಘಟನೆ ಆಗಿರುತ್ತದೆ. ಸಂಘಟನೆಯ ತತ್ವ ಸಿದ್ಧಾಂತಗಳು ಅಲ್ಲಿಂದ ಇಲ್ಲಿಯವರೆಗೂ ಬಂದಂತಹ ಸಂಘಟನೆಯ ಕಾರ್ಯ ಚಟುವಟಿಕೆ ಹೋರಾಟ. ತ್ಯಾಗ. ಹೋರಾಟಗಾರರ ಜೈಲುವಾಸ ಮುಂತಾದ ವಿಷಯಗಳನ್ನು ಅತ್ಯಂತ ಸುಂದರವಾಗಿ ವಿವರಿಸಿದರು.
ರಾಜ್ಯದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ರಚನೆಗೆ ಶ್ರಮಿಸಿರುವ ಅತ್ಯಂತ ಹಿರಿಯ ಸಂಘಟನೆ ಎ.ಐ.ಟಿ.ಯು.ಸಿ
ಅಂದು ಕೇವಲ ಒಂದು ಕೋಟಿ ರೂಪಾಯಿ ಮೂಲ ನಿಧಿಯಿಂದ 14 ಸಾವಿರ ಕೋಟಿ ಕಲ್ಯಾಣ ಮಂಡಳಿ ನಿಧಿ ಇದ್ದು ಈಗ 6000 ಕೋಟಿ ರೂಪಾಯಿ ಕಲ್ಯಾಣ ಮಂಡಳಿಯ ನಿಧಿ ಇರುವುದನ್ನು ಮತ್ತು ಶೈಕ್ಷಣಿಕ ಸೌಲಭ್ಯ ಕಡಿತ ಮಾಡಿರುವುದನ್ನು ಎಳೆ ಎಳೆಯಾಗಿ ತಮ್ಮ ಭಾಷಣದಲ್ಲಿ ವಿವರಿಸಿದ್ದರು.
ಕಾಮ್ರೇಡ್ ಎಚ್. ಕೆ ರಾಮಚಂದ್ರಪ್ಪನವರು. ಕಾಮ್ರೆಡ್ ಶಿವಣ್ಣ. ಕಾಮ್ರೆಡ್ ಉಮೇಶ್ ಅವರಗೆರೆ ಕಾಮ್ರೇಡ್ ಗಿರೀಶ್ ಮತ್ತು ಹಲವಾರು ಎ.ಐ.ಟಿ.ಯು.ಸಿ ಸಂಘಟನೆಯ ಕಾರ್ಯಕರ್ತರು ಬೀದಿ ಹೋರಾಟದ ಮೂಲಕ ಮಂಡಳಿ ರಚನೆಗೆ ಶ್ರಮಿಸಿರುವುದನ್ನು ನೆನಪು ಮಾಡಿಕೊಟ್ಟರು.
ಇದೇ ಸಂದರ್ಭದಲ್ಲಿ ಮುಂದಿನ ಮೂರು ವರ್ಷದ ಒಳಗೆ ತಾಲೂಕು ಪದಾಧಿಕಾರಿಗಳನ್ನು ಈ ಕೆಳಕಂಡಂತೆ ಅಧ್ಯಕ್ಷರಾಗಿ ಜಿ.ಎನ್. ರೇವಣಕರ್
ಕಾರ್ಯದರ್ಶಿಯಾಗಿ ಪ್ರೇಮಾ. ಸುರೇಶ್ ಆಚಾರಿ
ಉಪಾಧ್ಯಕ್ಷರಾಗಿ ವೆಂಕಟರಮಣ ಜಟ್ಟಪ್ಪ ನಾಯ್ಕ್.
ರತ್ನಾಕರ ಗಣಪತಿ ಆಚಾರಿ.
ಸಹ ಕಾರ್ಯದರ್ಶಿಯಾಗಿ ದುರ್ಗಯ್ಯ ಮಾಸ್ತಿ ಗೊಂಡ
ಮಂಜುನಾಥ್ ಮಾದೇವ್ ಆಚಾರಿ
ಖಜಾಂಚಿಯಾಗಿ ರಂಜನಾ ಗೋವಿಂದ ಮೊಗೇರ.
ತಾಲೂಕು ಪದಾಧಿಕಾರಿಗಳನ್ನು ಸರ್ವ ಸದಸ್ಯರ ಅನುಮತಿಯಂತೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಗಿರೀಶ್ ರವರು ಘೋಷಣೆ ಮಾಡಿದರು. ಇದನ್ನು ರಾಜ್ಯ ಅಧ್ಯಕ್ಷರಾದ ಕಾಮ್ರೆಡ್ ಉಮೇಶ್ ರವರು ಅನುಮೋದಿಸಿದರು.
ಸಭಾ ಅಧ್ಯಕ್ಷತೆಯನ್ನು ಕಾಮ್ರೆಡ್
ಜಿ. ಎನ್. ರೇವಣಕರ್ ರಾಜ್ಯ ಕಾರ್ಯದರ್ಶಿ ನೆರವೇರಿಸಿದರು.
ಸಮ್ಮೇಳನದಲ್ಲಿ ಹಿರಿಯ ಕಟ್ಟಡ ಕಾರ್ಮಿಕ ಈರಪ್ಪ. ಸಣ್ಣು. ನಾಯ್ಕ್. ಸುರೇಶ್. ನಾಗಪ್ಪ. ಆಚಾರಿ. ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಬೇಕಾದ ಉತ್ತರ ಕನ್ನಡ ಜಿಲ್ಲಾ ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಿರೀಕ್ಷಕರು ಬಾರದೇ ಇರುವುದಕ್ಕೆ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ವಿಷಾದ ವ್ಯಕ್ತಪಡಿಸಿದರು.
ಅತಿಥಿಗಳ ಪರಿಚಯ ಪ್ರೇಮಾ ಸುರೇಶ್ ಆಚಾರಿ ನಿರ್ವಹಿಸಿದರು.
ವಂದನಾರ್ಪಣೆಯನ್ನು ರತ್ನಾಕರ್ ಆಚಾರಿ ನಿರ್ವಹಿಸಿದರು. ವೇದಿಕೆಯಲ್ಲಿ ವೆಂಕಟರಮಣ ದುರ್ಗಪ್ಪ ನಾಯ್ಕ್. ಮಂಜುನಾಥ್ ಮಾದೇವ ಆಚಾರಿ. ರತ್ನಾಕರ ಆಚಾರಿ ಉಪಸ್ಥಿತರಿದ್ದರು.
ಆನಂತರ ಪುರಸಭಾ ಆಫೀಸ್ ಬಿಲ್ಡಿಂಗ್ ಶಾಪ್ ನಂಬರ್ 8 ಲ್ಲಿರುವ ನೂತನ ಸಂಘದ ಕಚೇರಿಯನ್ನು ರಾಜ್ಯಾಧ್ಯಕ್ಷರಾದ ಕಾಮ್ರೆಡ್ ಉಮೇಶ್ ಅವರೆಗೆರೆ ಉದ್ಘಾಟಿಸಿದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯ ಕಾರ್ಯದರ್ಶಿ ಜಿ .ಎನ್. ರೇವಣಕರ್ ತಿಳಿಸಿರುತ್ತಾರೆ.