*ಕುಮಟಾದಲ್ಲಿ ಕೊನೆಗೌಡರಿಗೆ ವಿಮೆ ಕಾರ್ಡ್ ವಿತರಣೆ ಮಾಡಿದ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ
ಕುಮಟಾ: ತಾಲೂಕಿನ ಅಡಿಕೆ, ತೆಂಗು ಕೊನೆಗೌಡರಿಗೆ ವಿಮೆ ಮಾಡಿಸಿ ಕಾರ್ಡ್ ವಿತರಣೆ ಮಾಡವ ಕಾರ್ಯಕ್ರಮ ಕುಮಟಾ ದ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಅನಂತಮೂರ್ತಿ ಟ್ರಸ್ಟ್ ವತಿಯಿಂದ ನಡೆಯಿತು.
ಶ್ರೀ ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಟ್ರಸ್ಟ್ ಅಧ್ಯಕ್ಷರಾದ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಯವರು ಜಿಲ್ಲೆಯಾದ್ಯಂತ ಅನೇಕ ಜನಪರ ಕಾರ್ಯಗಳನ್ನು ಕೈಗೊಂಡಿದ್ದು ಅದರ ಒಂದು ಭಾಗವಾಗಿ ಜಿಲ್ಲೆಯಲ್ಲಿ ಅಡಿಕೆ ತೆಂಗು ಕೊನೆಗೌಡರಿಗೆ ಅವರ ಕುಟುಂಬದ ಭದ್ರತೆಗಾಗಿ ತಮ್ಮ ಸ್ವತ ಖರ್ಚಿನಿಂದ ಭಾರತ್ ಪೋಸ್ಟ್ ಮೂಲಕ ತಮ್ಮ ಸ್ವಂತ ಖರ್ಚಿನಲ್ಲಿ ವಿಮೆ ಮಾಡಿಸುವ ಉತ್ತಮ ಕಾರ್ಯ ಕೊಗೊಂಡಿದ್ದು ಈಗಾಗಲೇ ಶಿರಸಿ ಭಾಗದಲ್ಲಿ ಸಾವಿರಾರು ಜನರಿಗೆ ವಿಮೆ ಮಾಡಿಸಿ ಕಾರ್ಡ್ ವಿತರಿಸಿದ್ದು ಇಂದು ಬುಧವಾರ ಕುಮಟಾ ತಾಲ್ಲೂಕಿನ ಅಡಿಕೆ ತೆಂಗು ಕೊಯ್ಯುವ ಕೊನೆಗೌಡರಿಗೆ ತಮ್ಮ ಟ್ರಸ್ಟ್ ವತಿಯಿಂದ ವಿಮೆ ಮಾಡಿಸಿ ಕಾರ್ಡ್ ವಿತರಿಸಲಾಯಿತು..
ನಂತರ ಮಾತನಾಡಿದ ಅನಂತಮೂರ್ತಿ ಹೆಗಡೆ ಈಗಾಗಲೇ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿ ಪಾಸಿಂಗ್ ಮಾಡಿಸಿದ್ದೇವೆ, ಅಫಘಾತದಲ್ಲಿ ಮೃತಪಟ್ಟ ಚಾಲಕರ ಮನೆ ಗೆ ತೆರಳಿ ತಮ್ಮ ಕೈಲಾದ ಮಟ್ಟಿಗೆ ಅವರ ಕುಟುಂಬಕ್ಕೆ ನೆರವು ನೀಡಿದ್ದೇನೆ..ಅನೇಕ ಬಸ್ ನಿಲ್ದಾಣ, ಶಾಲೆ ದೇವಾಲಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮಾಡಿಸಿದ್ದೇವೆ, ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ನೆರವು ನೀಡಿದ್ದೇವೆ, ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕೆಂಬುದಕ್ಕೆ ಜಿಲ್ಲೆಯ ಜನರ ಪ್ರತಿನಿಧಿಯಾಗಿ ಶಿರಸಿಯಿಂದ ಕಾರವಾರ ಜಿಲ್ಲಾಧಿಕಾರಿಗಳ ಕಛೇರಿತನಕ 140 ಕಿ ಮೀ ಪಾದಯಾತ್ರೆ ಮಾಡಿ ಮನವಿ ನೀಡಿ ಬೆಳಗಾವಿ ಅಧಿವೇಶನದಲ್ಲಿಯೂ ಪ್ರತಿಭಟನೆ ಮಾಡಿ ಅಲ್ಲಿಯೂ ಸರ್ಕಾರಕ್ಕೆ ಮನವಿ ನೀಡುವ ಕೆಲಸವನ್ನು ಜಿಲ್ಲೆಯ ಜನರ ಒಡಗೂಡಿ ಮಾಡಿದ್ದೇನೆ.. ಈಗ ಶ್ರಮಜೀವಿಗಳಾದ ಕೊನೆಗಾಡರಿಗೆ ವಿಮೆ ಮಾಡಿಸುವ ಕಾರ್ಯಕ್ಕೆ ಹೆಜ್ಜೆ ಇಟ್ಟು ಕೊನೆಗೌಡರಿಗೆ ಅಡಿಕೆ ತೆಂಗು ಕೊಯ್ಯುವಾಗ ದುರಾದೃಷ್ಟವಶಾತ್ ಏನಾದರೂ ಅಪಘಾತ ಸಂಭವಿಸಿದಾಗ ಅವರ ಕುಟುಂಬದ ಬಧ್ರತೆ ದೃಷ್ಟಿಯಿಂದ ತಮ್ಮ ಸ್ವಂತ ಖರ್ಚಿನಲ್ಲಿ ಪೊಸ್ಟ್ ಮುಖಾಂತರ ಈ ವಿಮೆ ಮಾಡಿಸಿಕೊಡುತ್ತಿದ್ದೇನೆ.. ಹೀಗೆ ಜಿಲ್ಲೆಯ ಜನರಿಗಾಗಿ ನನ್ನ ಜನಸೇವೆ ಕೇವಲ ಬಾಯಲ್ಲಿ ಹೇಳದೇ ಕಾರ್ಯರೂಪದಲ್ಲಿ ಮಾಡುತ್ತಿದ್ದೇನೆ.. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷದಿಂದ ಜನರ ಪ್ರತಿನಿಧಿಯಾಗುವ ಅವಕಾಶ ನೀಡಿದರೆ ಜಿಲ್ಲೆಯಲ್ಲಿ ಯಾವ ರೀತಿ ಅಭಿವೃದ್ಧಿ ಪರ ಕಾರ್ಯ ಕೈಗೊಳ್ಳಬೇಕು ಎನ್ನುವ ಪರಿಕಲ್ಪನೆ ನನಗೆ ಇದೆ ಅದನ್ನು ಮಾಡಿ ತೋರಿಸುತ್ತೇನೆ ಎಂದರು..
ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಬಿಜೆಪಿ ಮುಖಂಡ ಶಿವಾನಂದ ಹೆಗಡೆ ಕಡತೋಕ ರವರು ಕೂಡ ಅನಂತಮೂರ್ತಿ ಟ್ರಸ್ಟ್ ವತಿಯಿಂದ ನೀಡುವ ಕಾರ್ಡ್ ವಿತರಿಸಿ ಅನಂತಮೂರ್ತಿ ಹೆಗಡೆ ಯವರು ಜಿಲ್ಲೆಯಲ್ಲಿ ಉತ್ತಮ ಜನಪರ ಕಾರ್ಯ ಮಾಡುತ್ತಿದ್ದಾರೆ ಜಿಲ್ಲೆಯ ಜನರ ಮನೆ ಮಾತಾಗಿದ್ದಾರೆ ಕೊನೆಗೌಡರಿಗೆ ಈತರ ವಿಮೆ ಮಾಡಿಸುವ ಕಾರ್ಯಕ್ಕೆ ಯಾರೂ ಮುಂದಾಗಿರಲಿಲ್ಲ ಆದರೆ ಇವರು ಅದನ್ನು ಗುರುತಿಸಿ ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿಸಿಕೊಡುತ್ತಿರುವುದು ಶ್ಲಾಘನೀಯ ಎಂದರು..
ಇನ್ನೊರ್ವ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಬಿಜೆಪಿ ಮುಖಂಡ ಹಾಗೂ ಇಂದಿನ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡ ಗಜಾನನ ಪೈ ಮಾತನಾಡಿ ನಮ್ಮ ರೈತರಿಗೆ ಇದು ಬಹಳ ಉಪಯುಕ್ತ ವಾಗಿದೆ ಈ ವಿಮೆ ಮಾಡಿಸುವ ಕಾರ್ಯದ ಬಗ್ಗೆ ನನ್ನಲ್ಲಿ ಹೆಗಡೆಯವರು ತಿಳಿಸಿದಾಗ ಸೊಸೈಟಿ ಗಳ ಮೂಲಕ ಅಥವಾ ಗ್ರಾ ಪಂ ವ್ಯಾಪ್ತಿಯಲ್ಲಿ ಮಾಡಬೇಕೊ ಎಂದು ನಾವು ಚರ್ಚಿಸಿ ನಮ್ಮ ಕೆಡಿಸಿಸಿ ಬ್ಯಾಂಕ್ ಆವಾರದಲ್ಲಿ ಯೇ ಮಾಡಬೇಕು ಎಲ್ಲ ಕೊನೆಗೌಡರು ತೆಂಗಿನ ಕಾಯಿ ಕೊಯ್ಯುವವರಿಗೆ ವಿಷಯ ತಿಳಿಸಿ ಆಮಂತ್ರಿಸಬೇಕು ಎಂದು ತೀರ್ಮಾನಿಸಿದೆ ಇಂದು ಇಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಅನಂತಮೂರ್ತಿಯವರ ಕಾರ್ಯದಿಂದ ಜಿಲ್ಲೆಯ ಸಾವಿರಾರು ರೈತರಿಗೆ ಉಪಯೋಗವಾಗಲಿದೆ ಎಂದರು. ಕೊನೆಗೌಡರಾದ ಶಿರಗುಂಜಿ ಕೃಷ್ಣ ಗೌಡರವರು ಶ್ರೀ ಅನಂತಮೂರ್ತಿ ಹೆಗಡೆಯವರು ಮಾಡುತ್ತಿರುವ ಉತ್ತಮ ಕಾರ್ಯದ ಬಗ್ಗೆ ರೈತರ ಪರವಾಗಿ ಶ್ಲಾಘನೆ ವ್ಯಕ್ತಪಡಿಸಿದರು..
ಕೆಡಿಸಿಸಿ ಬ್ಯಾಂಕ್ ಸಲಹಾ ಸಮಿತಿ ಸದಸ್ಯ ಶ್ರೀಪಾದ ಭಟ್ಟ ಎಲ್ಲರನ್ನೂ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ವೇದಿಕೆಯಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವಿ ಎನ್ ಭಟ್ಟ ಅಳ್ಳಂಕಿ, ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ವಿ ಸಿ ನಾಯ್ಕ
ಕೂಜಳ್ಳಿ ಸೊಸೈಟಿ ಅಧ್ಯಕ್ಷ ತಿಮ್ಮಣ್ಣ ಭಟ್ಟ, ಧಾರೇಶ್ವರ ಸೊಸೈಟಿ ಅಧ್ಯಕ್ಷ ಕುಮಾರ ಭಟ್ಟ, ಬರಗದ್ದೆ ಸೊಸೈಟಿ ಅಧ್ಯಕ್ಷ ಗಣಪತಿ ಭಟ್ಟ,
ಗ್ರಾ ಪಂ ಸದಸ್ಯ ಮಹೇಶ ದೇಶಬಂಢಾರಿ ಉಪಸ್ಥಿತರಿದ್ದರು