ಶಿರಸಿ: ಸ್ಕಾಡ್ ವೆಸ್ ಸ0ಸ್ಥೆ ಯಿಂದ 75 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿದ ಸಂಸ್ಥೆಯ ಉಪಾಧ್ಯಕ್ಷ ಕೆಮವಿ.ಕೂರ್ಸೆ ಮಾತನಾಡಿ ಸಂವಿಧಾನದ ಆಶಯಗಳನ್ನು ಅರ್ಥ ಮಾಡಿಕೊಂಡು ದೇಶದ ಪ್ರಗತಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಹಾಗೂ ಸಂವಿಧಾನಕ್ಕೆ ಅಗೌರವ ತೋರುವ ಮತ್ತು ಹಗುರವಾಗಿ ಮಾತನಾಡುವ ಕೆಲಸ ಯಾರು ಮಾಡಬಾರದು ಎಂದರಲ್ಲದೇ ಸ್ವಾತಂತ್ರ ನಂತರದ ಭಾರತದ ಅಭಿವೃದ್ಧಿಗೆ ಡಾ. ಬಿ ಅರ್ ಅಂಬೇಡ್ಕರ್ ಅಧ್ಯಕ್ಷತೆಯ ಸಮಿತಿಯಿಂದ ರಚಿತವಾದ ಸಮಿತಿಯು ನೀಡಿದ ಕಾನೂನು ಬದ್ಧವಾದ ಹಕ್ಕು ಮತ್ತು ಕರ್ತವ್ಯಗಳನ್ನು ಸದುಪಯೋಗ ಪಡಿಸಿಕೊಂಡು ದೇಶದ ಪ್ರಗತಿಗೆ ಸಹಕರಿಸುವಂತೆ ಕರೆ ನೀಡಿದರು.
ನಂತರ ಸಂಸ್ಥೆಯ ಸದಸ್ಯ ದಯಾನಂದ್ ಅಗಾಸೆ ಮಾತನಾಡಿ ಅನೇಕ ಮಹನೀಯರ ಶ್ರಮ ಮತ್ತು ಚಿಂತನೆಯ ಫಲವಾಗಿ ನಮಗೆ ಸಂವಿದಾನ ದೊರಕಿದೆ ಎಂದರು
ಈ ಸಂದರ್ಭದಲ್ಲಿ ಶಿರಸಿ ನಗರದಲ್ಲಿ ಸ್ವ ಪ್ರೇರಣೆಯಿಂದ 30 ಕ್ಕು ಹೆಚ್ಚು ಬಾರಿ ರಕ್ತದಾನ ಮಾಡಿ ಮಾರಿಕಾಂಬ ರಕ್ತದಾನ ತಂಡ ಕಟ್ಟಿಕೊಂಡು ಇತರರನ್ನು ಪ್ರೇರೇಪಿಸುತ್ತ ಸುಮಾರು 2000 ಕ್ಕೂ ಹೆಚ್ಚು ಜನರಿಗೆ ರಕ್ತದಾನದ ಮೂಲಕ ಸಮಾಜ ಸೇವೆ ಮಾಡುತ್ತಿರುವ ಶ್ರೀ ರವಿ ಹೆಗಡೆ ಇವರನ್ನು ಶ್ಲಾಗಿಸಿ ಸನ್ಮಾನಿಸಲಾಯಿತು.
ಸoಸ್ಥೆ ಕಾರ್ಯದರ್ಶಿ ಸರಸ್ವತಿ ಎನ್ ರವಿ ಮಾತನಾಡಿ ಪ್ರತಿಯೊಬ್ಬ ಪ್ರಜೆಯೂ ತಮ್ಮ ಕೈಲಾದಷ್ಟು ಒಳ್ಳೆಯ ಕೆಲಸ ಗಳನ್ನು ಸಮಾಜಕ್ಕೆ ಮಾಡುವ ಮೂಲಕ ದೇಶ ಸೇವೆಗೆ ಅಣಿಯಾಗಬೇಕು ಎಂದು ತಿಳಿಸಿ ಸಂವಿಧಾನ ಘನತೆಯನ್ನು ಎಲ್ಲರೂ ಎತ್ತಿ ಹಿಡಿಯಬೇಕು ಎಂದರು.
ಸ0ಸ್ಥೆ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ್ ನಾಯ್ಕ ಮಾತನಾಡಿ ಸ0ಸ್ಥೆಯು ಹಲವಾರು ರಾಷ್ಟ್ರೀಯ ಹಬ್ಬಗಳನ್ನು ಆಚರಿಸು ತಿದ್ದು ಗಣರಾಜ್ಯೋತ್ಸವದ ಸಂಭ್ರಮ ಮಹತ್ವದ್ದಾಗಿದ್ದು , ಪ್ರತಿಯೊಬ್ಬ ವ್ಯಕ್ತಿಯೂ ಸಾಮಾಜಿಕ ಮತ್ತು ವೈಯಕ್ತಿಕ ಬದುಕಿನಲ್ಲಿ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಂಡು ದೇಶದ ಅಭವೃದ್ಧಿಗಾಗಿ ಶ್ರಮಿಸಲು ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ಕೊಡವೆಸ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.