ಭೂತ್ ಲೆವೆಲ್ ಏಜೆಂಟರ್ ನೇಮಕಾತಿ;
ಕೆನರಾ ಕ್ಷೇತ್ರಕ್ಕೆ ರವೀಂದ್ರ ನಾಯ್ಕ ಸಂಯೋಜಕರಾಗಿ ನೇಮಕ.
ಶಿರಸಿ: ಮುಂಬರುವ ಲೋಕಸಭಾ ಚುನಾವಣೆಗೆ, ಭೂತ್ ಲೆವೆಲ್ ಏಜೆಂಟರಾಗಿ ನೇಮಕಾತಿ ಪ್ರಕ್ರಿಯೇಗೆ, ಕೆನರಾ ಲೋಕಸಭಾ ಕ್ಷೇತ್ರಕ್ಕೆ ಉಸ್ತುವಾರಿಯನ್ನಾಗಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರ ನಾಯ್ಕ ಅವರನ್ನು ಸಂಯೋಜಕರಾಗಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯು ನೇಮಕ ಮಾಡಿರುತ್ತಾರೆ.
ಕೆನರಾ ಲೋಕಸಭಾ ಕ್ಷೇತ್ರಕ್ಕೆ ಬರುವ ಏಂಟು ವಿಧಾನಸಭಾ ಕ್ಷೇತ್ರದ ಭೂತ್ ಲೆವೆಲ್ ಏಜೆಂಟರ್ ನೇಮಕಾತಿ ಪ್ರಕ್ರಿಯೇಯನ್ನು ನಿರ್ದಿಷ್ಟ ಸಮಯದೊಳಗೆ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸುವ ಮತ್ತು ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೇಸ್‌ದೊAದಿಗೆ ಸಮನ್ವಯತೆ ಸಾಧಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯು ರವೀಂದ್ರ ನಾಯ್ಕ ಅವರನ್ನು ಲೋಕಸಭೆ ಕ್ಷೇತ್ರಕ್ಕೆ ಸಂಯೋಜಕರಾಗಿ ನೇಮಿಸಿದ್ದಿರುತ್ತದೆ.
ರವೀಂದ್ರ ನಾಯ್ಕ ಅವರು ಕಾಂಗ್ರೇಸ್ ಪಕ್ಷದಲ್ಲಿ ಜಿಲ್ಲಾ ವಿದ್ಯಾರ್ಥಿ ಕಾಂಗ್ರೇಸ್ ಘಟಕ(೧೯೯೦), ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ(೧೯೯೩), ಜಿಲ್ಲಾ ಕಾಂಗ್ರೇಸ್ ಹಿಂದುಳಿದ ಘಟಕ(೧೯೯೮), ಜಿಲ್ಲಾ ಕಾಂಗ್ರೇಸ್ ಕಾನೂನು ಘಟಕದ ಅಧ್ಯಕ್ಷ(೨೦೦೮), ರಾಜ್ಯ ಕಾಂಗ್ರೇಸ್ ಕಾನೂನು ಮತ್ತು ಮಾನವ ಹಕ್ಕು ಘಟಕದ ಹಿರಿಯ ಉಪಾಧ್ಯಕ್ಷರಾಗಿ(೨೦೦೯) ಕಾರ್ಯ ನಿರ್ವಹಿಸಿದ್ದು, ಹಾಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಸಾಯಿನಾಥ ಗಾಂವ್ಕರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.