ಭಟ್ಕಳ ನಗರದ ಚೌಥನಿಯಲ್ಲಿರುವ ಕಾಸ್ಮುಡಿ ಶ್ರೀ ಹನುಮಂತ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ ಉತ್ಸವ ಫೆ.29 ರಿಂದ ಮಾ.3 ರತನಕ ನಡೆಯಲಿದೆ – ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಅಣ್ಣಪ್ಪ ನಾಯ್ಕ
ಭಟ್ಕಳ : ಭಟ್ಕಳ ನಗರದ ಚೌಥನಿಯಲ್ಲಿರುವ ಕಾಸ್ಮುಡಿ ಶ್ರೀ ಹನುಮಂತ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹಕಲಶೋತ್ಸವ ಫೆ.29 ರಿಂದ ಮಾ.3 ರತನಕ ನಡೆಯಲಿದೆ ಎಂದು ಕಾಸ್ಮುಡಿ ಹನುಮಂತ ದೇವಸ್ಥಾನದ ಸ್ವಯಂವರ ಸಭಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಕಮಿಟಿಯ ಅಧ್ಯಕ್ಷ ಅಣ್ಣಪ್ಪ ನಾಯ್ಕ ಅಬ್ಭಿಹಿತ್ಲು ತಿಳಿಸಿದ್ದಾರೆ.
ನಂತರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಾ ಫೆಬ್ರುವರಿ 29 ರಂದು ಬೆಳ್ಳಿಗೆಯಿಂದಲೇ ಧಾರ್ಮಿಕ ಕಾರ್ಯಕ್ರಮ ಗಳು ನಡೆಯಲ್ಲಿದ್ದು, ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ಆರಂಭಗೊಳಲಿದೆ ಎಂದು ತಿಳುಸಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಗಾಯಕ , ಕವಿ ಉಮೇಶ್ ಮುಂಡಲ್ಲಿ ಅವರು ಹಾಡಿ ರಚಿಸಿದ ಶ್ರೀ ಕಾಸ್ಮುಡಿ ಹನುಮಂತ ದೇವರ ಭಕ್ತಿ ಗೀತೆ ಕಾರ್ಯಕ್ರಮ ಇದೆ ಎಂದು ತಿಳಿಸಿದ್ದಾರೆ. ರಾತ್ರಿ 8.30 ಕ್ಕೆ ಯಕ್ಷಗಾನ ನಡೆಯಲಿದೆ ಎಂದು ವಿವರಿಸಿದರು. ಮಾರ್ಚ್ 1 ರಂದು ಬೆಳ್ಳಿಗೆಯಿಂದಲೇ ದಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು, ಮದ್ಯಾಹ್ನ 1 ಗಂಟೆಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ವಿದೆ , ಸಂಜೆ ಭಜನಾ ಕಾರ್ಯಕ್ರಮ ಮತ್ತು ಸಂಜೆ 7 ಗಂಟೆಗೆ ಫ್ರೆಂಡ್ಸ್ ಮೇಲೋಡಿಸ್ ಭಟ್ಕಳ ಅವರಿಂದ ಉಚಿತ ಸೇವೆಯಾಗಿ ರಸಮಂಜರಿ ಕಾರ್ಯಕ್ರಮ ವಿದೆ ಎಂದು ತಿಲಿಸಿದ್ದಾರೆ. ಮಾರ್ಚ್ 2 ರಂದು ಬೆಳಿಗ್ಗೆಯಿಂದ ದಾರ್ಮಿಕ ಕಾರ್ಯಕ್ರಮ ಆರಂಭಗೊಂಡು ಮದ್ಯಾಹ್ನ 1 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 7 ಗಂಟೆಗೆ ಸರಿಯಾಗಿ ಆಹ್ವಾನಿತ ಜಿಲ್ಲಾ ಮಟ್ಟದ ತಂಡಗಳ ಭಜನಾ ಕುಣಿತ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಮಾರ್ಚ್ 3 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ದೇವಸ್ಥಾನದ ಸ್ವಯಂ ವರ ಕಲ್ಯಾಣ ಮಂಟಪದಲ್ಲಿ ಪರಿಣಿತ ಶಿಕ್ಶಣ ತಜ್ಞರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗ ಮಾಹಿತಿ ಶಿಬಿರ ನಡೆಯಲಿದೆ ಎಂದು ವಿವರಿಸಿದರು.
ಸಂಜೆ ಡಕ್ಕೆ ಕುಣಿತ, ಮಹಿಳೆಯರಿಂದ ವಿಶೇಷ ದೀಪಾರಾದನೆ ಮತ್ತು ಸ್ಥಳೀಯ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಈ ಎಲ್ಲ 4 ದಿನಗಳ ಕಾರ್ಯಕ್ರಮ ದಲ್ಲಿ ಸರ್ವ ಭಕ್ತಾದಿಗಳು ಪಾಲ್ಗೊಂಡು ಶ್ರೀ ದೇವರ ಕೃಪೆ ಗೆ ಪಾತ್ರರಾಗಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಸ್ಮುಡಿ ಶ್ರೀ ಹನುಮಂತ ದೇವಸ್ಥಾನದ ಗೌರವಾಧ್ಯಕ್ಷ ರಾದ ಈರಪ್ಪ ಎಂ ಗರ್ಡಿಕರ, ಉಪಾಧ್ಯಕ್ಷರಾದ ಪ್ರಕಾಶ್ ನಾಯ್ಕ, ಪ್ರಮುಖರಾದ ಮಾಸ್ತಪ್ಪ ನಾಯ್ಕ್, ಗಜಾನನ ಆಚಾರ್ಯ, ಸ್ಥಳೀಯ ಯುವಕರು, ಮುಂತಾದವರು ಉಪಸ್ಥಿತರಿದ್ದರು.