ಅಂಕೋಲಾದಲ್ಲಿ ವಿಶೇಷ ಹೋಳಿ ಆಚರಣೆ : ರಾಜ್ಯ ಸರ್ಕಾರದ ಶಕ್ತಿ ಯೋಜನೆ. ಗೃಹಲಕ್ಷ್ಮಿ ಯೋಜನೆ ಸರ್ಕಾರವನ್ನೇ ಅಣಕಿಸಿದ ಅಣುಕು ಪ್ರದರ್ಶನ .
ಅಂಕೋಲಾ : ದಿನಾಂಕ 24/03/2024.ಹೋಳಿ ಹಬ್ಬದ ಅಂಗವಾಗಿ ಅಂಕೋಲಾ ತಾಲೂಕಿನಲ್ಲಿ ವಿಶಿಷ್ಟವಾದ ನೈಜ ಘಟನೆಗಳ ಅಣಕು ಪ್ರದರ್ಶನ ಮೆರವಣಿಗೆ ನಡೆಯಿತು.
ತಾಲೂಕಿನ ಬೆಳಂಬಾರ ಗ್ರಾಮದ ಹಾಲಕ್ಕಿ ಸಮುದಾಯದವರು ಹೋಳಿಯ ಪ್ರಯುಕ್ತ ನಗರದಲ್ಲಿ ವೇಷ-ಭೂಷಣಗಳನ್ನು ಹಾಕಿಕೊಂಡು ನಿತ್ಯ ಸಮಾಜದಲ್ಲಿನ ಆಗುಹೋಗುಗಳನ್ನು ಅಣಕು ಪ್ರದರ್ಶನ ಮಾಡುವುದು ಇಲ್ಲಿನ ಸಂಪ್ರದಾಯವಾಗಿ ಮುಂದುವರೆದಿದೆ .
ಈ ಒಂದು ದಿನ ಮಾತ್ರ ಇಲ್ಲಿ ಯಾರ ಕುರಿತು ಅಣಕು ಮಾಡಿದರೂ ಯಾವುದೇ ನಿರ್ಬಂಧ ಇರುವುದಿಲ್ಲ. ಸಮಾಜದಲ್ಲಿನ ಅನೇಕ ಘಟನೆಗಳನ್ನು ಇಲ್ಲಿನ ಹೋಳಿ ಆಚರಣೆ ವೇಳೆ ಅಣಕು ಪ್ರದರ್ಶನದ ಮೂಲಕ ಸಾರ್ವಜನಿಕರೆದುರು ತೆರೆದಿಡಲಾಯಿತು.
ಇನ್ನು ಈ ಬಾರಿಯ ಅಣಕು ಪ್ರದರ್ಶನದಲ್ಲಿ ವಿಶೇಷ ಆಕರ್ಷಣೆಯಾಗಿ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಶಕ್ತಿ ಯೋಜನೆ. ಹಾಗೂ ಗೃಹಲಕ್ಷ್ಮಿ ಯೋಜನೆಯ್ ಸನ್ನಿವೇಶ ನೇರವಾಗಿ ಸರ್ಕಾರವನ್ನು ತೀಕ್ಷ್ಣವಾಗಿ ಅಣಕಿಸಲಾಗಿದೆ.
ರಾಸಾಯನಿಕ ಗೋಬಿ ಮಾರಾಟ . ಕಾಳಿಂಗ ಮರ್ದನ, ಶ್ರೀ ಸೋಂದ ಸ್ವರ್ಣವಲ್ಲಿ ಮಹಾ ಸಂಸ್ಥಾನ ಮಠಾಧೀಶರ ಮೆರವಣಿಗೆ. ಕೃಷಿ ಚಟುವಟಿಕೆಯಲ್ಲಿ ರೋಬೋಟ್ಗಳ ಪಾತ್ರ. ನಾಗ ಸಾಧುಗಳ ಮೆರವಣಿಗೆ. ಮಹಿಷಾಸುರ ಮರ್ದಿನಿ ಸನ್ನಿವೇಶ. ಡ್ರ್ಯಾಗನ್ ಪ್ರಾಣಿ, ತುಂಡು ಉಡುಗೆಯಲ್ಲಿ ಹೆಣ್ಣು ಮಕ್ಕಳ ವೇಷಭೂಷಣ ತೊಟ್ಟವರು ಇನ್ನಿತರ ಎಲ್ಲಾ ಪ್ರದರ್ಶನಗಳು ಸಾರ್ವಜನಿಕರ್ ಗಮನ ಸೆಳೆಯಿತು.
ಇದರ ಜೊತೆಗೆ ಮರುಕಾಲು ವೇಷ ತೊಟ್ಟು ಯಕ್ಷಗಾನ ನೃತ್ಯ. ನಾಡಿನ ಸುಪ್ರಸಿದ್ಧ ಬೆಳಂಬಾರ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತ ಆಕರ್ಷಣೀಯವಾಗಿತ್ತು. ಈ ಸಂದರ್ಭದಲ್ಲಿ ಈ ಸುಗ್ಗಿ ತಂಡಕ್ಕೆ ಬ್ರಿಟಿಷರ ಕಾಲದಲ್ಲಿ ಕೊಟ್ಟಿರುವ ತಾಮ್ರ ಪತ್ರವನ್ನು ತಹಶೀಲ್ದಾರ ಊರಗೌಡರ ಸಮ್ಮುಖದಲ್ಲಿ ತೆರೆದು ಗೌರವ ಸೂಚಿಸುವ ಮೂಲಕ ಈ ವರ್ಷದ ಸುಗ್ಗಿ ಆಚರಣೆ ಸಂಪನ್ನಗೊಂಡಿತು.
ಕ್ಲಬ್ ವಿಟ್ನೆಸ್ ತಂಡದವರಿಂದ ಇದೇ ಪ್ರಥಮ ಬಾರಿಗೆ ಕರಡಿ ವೇಷ ತೋಟ ಉತ್ತಮ ಕರಡಿಗಳಿಗೆ ವಿಶೇಷ ಆಕರ್ಷಕ ಬಹುಮಾನಗಳನ್ನು ನೀಡಲಾಯಿತು.
ಅಣಕು ಪ್ರದರ್ಶನ ನೋಡಲು ಅಂಕೋಲಾ ಪಟ್ಟಣದಲ್ಲಿ ಸಾವಿರಾರು ಜನ ಸೇರಿದ್ದರು. ಅಂಕೋಲಾದ ಈ ಹೋಳಿ ಅಣಕು ಪ್ರದರ್ಶನ ರಾಜ್ಯದಲ್ಲಿ ಮತ್ತೆಲ್ಲೂ ಕಾಣ ಸಿಗದ ವಿಶಿಷ್ಟ ಆಚರಣೆಯಾಗಿದ್ದು, ಇಂದಿಗೂ ಮುಂದುವರಿದಿದೆ.