ಅಂಕೋಲಾ : ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಹೃದಯಘಾತದಿಂದ ಹೊನ್ನಿಕೇರಿಯ ಯುವಕ ಬಲಿ.
ಅಂಕೋಲಾ : ಇಲ್ಲಿನ ಹೊನ್ನಿ ಕೇರಿಯ ನಿವಾಸಿಯಾದ ನಿಲೇಶ್ ಸುರೇಶ್ ನಾಯ್ಕ ಪ್ರಾಯ 37 ವರ್ಷದ ಯುವಕ ಕೆಳಬಜಾರ್ ರೋಡಿನಲ್ಲಿರುವ ತಮ್ಮ ಅಂಗಡಿಯಲ್ಲಿ ಎಂದಿನಂತೆ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಬೆಳಗ್ಗೆ 11 ಗಂಟೆಯ ಸುಮಾರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡು ಸ್ಥಳದಲ್ಲಿ ಕುಸಿದು ಬಿದ್ದು ತಾಲೂಕ ಆಸ್ಪತ್ರೆಗೆ ಸೇರಿಸುವ ಮುಂಚೆಯೇ ಮೃತಪಟ್ಟ ಘಟನೆ ನಡೆದಿದೆ .
ಮೃತ ನಿಲೇಶ್ ನಾಯ್ಕ ಮದುವೆಯಾಗಿ ಕೇವಲ 2ವರ್ಷವಾಗಿತ್ತು.. ಇವರಿಗೆ ಮುದ್ದಾದ ಆರು ತಿಂಗಳ ಗಂಡು ಮಗು ಜನಿಸಿತ್ತು..
ತನ್ನ ತಂದೆ ತಾಯಿ ಹೆಂಡತಿ ಮಕ್ಕಳನ್ನು ಸಲಹುವ ಗುರುತರ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ನಿಲೇಶ್ ನಾಯ್ಕ್ ವಿಧಿ ಆಟಕ್ಕೆ ಬಲಿಯಾಗಿದ್ದಾನೆ.
ಸೌಮ್ಯ ಸ್ವಭಾವದ ಈತನು ಎಲ್ಲಾ ಸಮಾಜದ ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದ.. ಯಾವುದೇ ದುಶ್ಚಟ ಇಲ್ಲದ ಈತನ ಸಾವು ಹೊನ್ನಿಕೇರಿ ಊರಿನಲ್ಲಿ ಶೋಕದ ವಾತಾವರಣ ಉಂಟುಮಾಡಿದೆ..
ಮೃತರು ಪತ್ನಿ ಮಗು.ತಂದೆ.ತಾಯಿ. ಸಹೋದರ ಸಹೋದರಿಯರನ್ನು ಅಗಲಿದ್ದಾರೆ.
ನಿಲೇಶ್ ನಾಯ್ಕ್ ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದು ನಂತರ ಮುಂದಿನ ಕ್ರಿಯಾ- ಕರ್ಮಗಳನ್ನು ವಿಧಿ ವಿಧಾನಗಳೊಂದಿಗೆ ನಡೆಸಲಾಗುತ್ತದೆ.
ಗೆಳೆಯರ ಕಂಬನಿ : ಬಂಗಾರದ ಮನುಷ್ಯನಂತಿದ್ದ್ ಸ್ನೇಹಿತನನ್ನು ಕಳೆದುಕೊಂಡ ದುಃಖದಲ್ಲಿ ಸುಭಾಷ್ ನಾಯ್ಕ್. ಪ್ರಸಾದ್ ನಾಯ್ಕ. ಅನಂತ ಬೇಳಾ. ಉದ್ಯಮಿ ಲಕ್ಷ್ಮಣ್ ಗಾಂವಕರ್ ತೆಂಕಣಕೇರಿ. ಹಾಗೂ ಅಪಾರ ಬಂಧು ಬಳಗ. ಹೊನ್ನಿ ಕೇರಿಯ ಸಮಸ್ತ ನಾಗರಿಕರು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ದೇವರಲ್ಲಿ ಪ್ರಾರ್ಥಿಸಿ ಕಂಬನಿ ಮಿಡ್ದಿದ್ದಾರೆ.
ಕೆಲವು ದಿನಗಳ ಹಿಂದೆ ಇದೇ ಊರಿನ ಕಟ್ಟು ಮಸ್ತಾದ ಯುವಕ ನವೀನ್ ನಾಯ್ಕ ನಾಯಿ ಅಡ್ಡ ಬಂದು ಮೃತಪಟ್ಟ ಸಾವಿನ ನೆನಪು ಮಾಸುವ ಮುನ್ನವೇ ಇದೇ ಊರಿನ ಮತ್ತೊಬ್ಬ ಒಳ್ಳೆಯ ವ್ಯಕ್ತಿತ್ವದ ನಿಲೇಶ್ ನಾಯ್ಕನ ಸಾವು ನಿಜಕ್ಕೂ ದುರಂತವೇ ಸರಿ.