ಶಿರಸಿಯ ಶಾಸಕ ಭೀಮಣ್ಣ ನಾಯ್ಕಅವರಿಂದ ಉತ್ತರ ಕನ್ನಡ ನೂತನ ಸಂಸದ ವಿಶ್ವೇಶ್ವರ ಹೆಗಡೆಯವರಿಗೆ ಅಭಿನಂದನೆ
ಶಿರಸಿ:- ಶಿರಸಿಯ ಶಾಸಕ ಭೀಮಣ್ಣ ಟಿ ನಾಯ್ಕ ಇವರು ನಿನ್ನೆ ಶಿರಸಿಯಲ್ಲಿ ರುವ ಸಂಸದರ ಕಚೇರಿಗೆ ತೆರಳಿ ನೂತನ ಸಂಸದ ವಿಶ್ವೇಶ್ವರ ಹೆಗಡೆಯವರಿಗೆ ಪುಷ್ಪಗುಚ್ಚ ನೀಡುವುದರ ಮೂಲಕ ಅಭಿನಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಶಾಸಕರು ಹಾಗು ಸಂಸದರು ಕ್ಷೇತ್ರದ ಅಭಿವೃದ್ದಿಗಾಗಿ ಜೋಡೆತ್ತಿನಂತೆ ಕೆಲಸಮಾಡುವ ಬಗ್ಗೆ ವಾಗ್ದಾನಮಾಡಿ ಶಿರಸಿಯ ಅಭಿವೃದ್ಧಿ ಗೆ ಶ್ರಮಿಸುವುದಾಗಿ ತಿಳಿಸಿದರು ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾದಿಕಾರದ ಅದ್ಯಕ್ಷ ಜಗದೀಶ ಗೌಡ್ರು , ಶಾಸಕ ಮತ್ತು ಸಂಸದ ರ ಬೆಂಬಲಿಗರು ಉಪಸ್ಥಿತರಿದ್ದರು.