ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಗುಡ್ಡ ಕುಸಿತ ಸ್ಥಳಕ್ಕೆ ಮುಖ್ಯಮಂತ್ರಿ ತಕ್ಷಣ ಆಗಮಿಸಿ, ಜಿಲ್ಲೆಗೆ ಕೂಡಲೇ ವಿಶೇಷ ಪ್ಯಾಕೆಜ್ ಘೋಷಣೆ ಮಾಡಬೇಕು. – ಬಿಜೆಪಿ ಅನಂತಮೂರ್ತಿ ಹೆಗಡೆ ಆಗ್ರಹ
ಕುಮಟಾ-ಉತ್ತರ ಕನ್ನಡ ದಲ್ಲಿ ಗುಡ್ಡ ಕುಸಿತ ಉಂಟಾಗಿ ಮಾರಣ ಹೋಮದ ರೀತಿಯಲ್ಲಿ ಸಾವಾಗುತ್ತಿದೆ , ಸಾವಿರಾರು ಜನ ತಮ್ಮ ಜಮೀನು ಕಳೆದು ಕೊಂಡಿದ್ದಾರೆ,
ರಾಜ್ಯ ಸರ್ಕಾರದ ಮಲತಾಯಿ ಧೋರಣೆ ಎದ್ದು ಕಾಣುತ್ತಿದೆ, ಬೇರೆ ಎಲ್ಲಾದರೂ ಈ ರೀತಿ ಆಗಿದ್ದರೆ ತಕ್ಷಣ ಮುಖ್ಯ ಮಂತ್ರಿ ಇಲ್ಲಿರುತ್ತಿದ್ದರು, ಹಿಂದೆ ಯಲ್ಲಾಪುರ ಕಳಚೆ ದುರಂತ ಆದಾಗ ತಕ್ಷಣ ನಮ್ಮ ಜಿಲ್ಲೆಗೆ ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ
ಆಗಮಿದ್ದರು,ಕಾಂಗ್ರೆಸ್ ಸರಕಾರಕ್ಕೆ ಜನರ ವೋಟ್ ಮಾತ್ರ ಬೇಕು, ನಾವು 4 ಜನ MLA ಗಳನ್ನ ನಿಮಗೆ ಕೊಟ್ಟಿದ್ದೇವೆ, ಜನರ ಹಿತ ನಿಮಗೆ ಬೇಕಾಗಿಲ್ಲ, ನಿಮಗೆ ಕನಿಕರ ಈದೆಯೇ?,
ಪಾಪ ಮಂಕಾಳ ವೈದ್ಯರ ಜೊತೆ ಯಾವ ಮಂತ್ರಿಯೂ ಬರುತ್ತಿಲ್ಲ, ಚುಣಾವಣೆ ಬಂದಾಗ ಮಾತ್ರ ಬರುತ್ತೀರಾ? ಈಗ ಬರಲಿಕ್ಕೆ ಏನಾಗಿದೆ ನಿಮಗೆ ?
ಜೆಲ್ಲೆಯ ಏಲ್ಲ MLA ಗಳು ತಕ್ಷಣ ಕ್ಷೇತ್ರಕ್ಕೆ ಬರಬೇಕು, ಜನರ ಕಷ್ಟಕ್ಕೆ ಸ್ಪಂದಿಸಬೇಕು ,ನಮ್ಮ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಈಗಾಗಲೆ ವೀಕ್ಷಣೆ ಮಾಡಿ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ, ಶ್ರೀ ದಿನಕರ್ ಶೆಟ್ಟಿ ರವರು ವಿಧಾನ ಸಭೆಯಲ್ಲಿ ಧ್ವನಿ ಎತ್ತಿದ್ದಾರೆ, IRB ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,
ಹಿಂದೆ ಮಂಕಾಳ ವೈದ್ಯರು, ಸತೀಶ್ ಸೈಲ್ ಎಲ್ಲರೂ IRB ವಿರುದ್ಧ ಧ್ವನಿ ಎತ್ತಿ ನಂತರ ಸೈಲೆಂಟ್ ಆಗಿದ್ದೆ ಇಸ್ಟೊಂದು ಅನಾಹುತಕ್ಕೆ ಕಾರಣ.
ತಕ್ಷಣ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹೆಲಿಕಾಪ್ಟರ್ ಮುಖಾಂತರ ಉತ್ತರ ಕನ್ನಡ ಜಿಲ್ಲೆಗೆ ಬರಬೇಕು, ಅಲ್ಲೇ ಕುಳಿತು 5 ಲಕ್ಷ ಪರಿಹಾರ ಘೋಷಣೆ ಮಾಡಿದರೆ ಏನೂ ಪ್ರಯೋಜನ ಇಲ್ಲ , ಏನು ಜನರ ಜೀವಕ್ಕೆ ಬೆಲೆ ಕಟ್ಟುತ್ತಿದ್ದೀರಾ?
ಸಾವಿರಾರು ಜನ ಮನೆ ಜಮೀನು ಕಳಿದುಕೊಂಡಿದ್ದನ್ನ ಹೆಲಿಕಾಪ್ಟರ್ ಮೂಲಕ ವೀಕ್ಷಣೆ ಕಾಡಬೇಕು, ತಕ್ಷಣ ವಿಶೇಷ ಪ್ಯಾಕೆಜ್ ಘೋಷಣೆ ಮಾಡಬೇಕು.
ನಿಮಗೆ ಉತ್ತರ ಕನ್ನಡ ಜಿಲ್ಲೆ ಜನರ ಜೀವ – ಜೀವನದ ಬಗ್ಗೆ ಕಾಳಜಿ ಇದ್ದರೆ ತಕ್ಷಣ ಬನ್ನಿ ಎಂದು ಬಿಜೆಪಿ ಮುಖಂಡ , ಅನಂತ ಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಅನಂತ ಮೂರ್ತಿ ಹೆಗಡೆ ಅವರು ಕುಮಟಾ ದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಗ್ರಹಿಸಿದರು.
ನಂತರ ಅದೇ ಸಮಯದಲ್ಲಿ ಸರಕಾರಿ ಆಸ್ಪತ್ರಗೆ ತೆರಳ ವಸ್ತ್ರ ಮತ್ತು ಬಿಸ್ಕತ್ ವಿತರಣೆ ಮಾಡಿದರು.