ಅತಿವೃಷ್ಟಿಯಿಂದ ಸಾಗುವಳಿ ಬೆಳೆ ನಷ್ಟ :ಅರಣ್ಯಅತಿಕ್ರಮಣದಾರರಿಗೂ ಪರಿಹಾರ ನೀಡಲೂ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಒತ್ತಾಯ
ಶಿರಸಿ : ಅತಿವೃಷ್ಟಿಯಿಂದ ಸಾಗೂವಳಿ ಬೆಳೆಗೆ ನಷ್ಟ ಉಂಟಾಗಿರುವ ಅರಣ್ಯ ಅತಿಕ್ರಮಣದಾರರ ಸಾಗುವಳಿಯ ಬೆಳೆ ನಷ್ಟ ನಿಧÀðರಿಸುವ ಕುರಿತು ಸರ್ಕಾರ ಚಿಂತಿಸಬೇಕೆAದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇತ್ತಿಚಿಗೆ ಭಾರಿ ಮಳೆಯಿಂದ ಜಿಲ್ಲಾದ್ಯಂತ ಅರಣ್ಯ ಅತಿಕ್ರಮಣದಾರರ ಅಡಿಕೆ, ತೆಂಗು, ಬಾಳೆ ಮುಂತಾದ ಸಾಗುವಳಿ ಬೆಳೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ ಹಿನ್ನೆಲೆಯಲ್ಲಿ ಸರ್ಕಾರ ಅರಣ್ಯ ಅತಿಕ್ರಮಣದಾರರ ಬೆಳೆಗೂ ಪರಿಹಾರ ನೀಡಲೂ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಅವರು ಹೇಳಿದರು.
೨೦೨೨ ರಿಂದ ಮನೆ ನಂಬರ್ ದಾಖಾಲಾಗಿರುವ ಅತಿಕ್ರಮಣದಾರರ ಪೂರ್ಣ ಮನೆಗೆೆ ನಷ್ಟಕ್ಕೆ ಒಂದು ಲಕ್ಷ ಇಪ್ಪತ್ತು ಸಾವಿರ ಮನೆ ನಷ್ಟ ಪರಿಹಾರ ರಾಜ್ಯ ಸರ್ಕಾರ ನೀಡುತ್ತಿದ್ದು, ಅತಿಕ್ರಮಣದಾರರ ಬೆಳೆ ನಷ್ಟಕ್ಕೆ ಪರಿಹಾರ ನಿಗದಿಗೊಳಿಸಿರಲಿಲ್ಲ. ಆ ಸಂದರ್ಭದಲ್ಲಿ ಹೋರಾಟಗಾರರ ವೇದಿಕೆಯು ಮನೆ ನಷ್ಟ ಪರಿಹಾರಕ್ಕೆ ಸರ್ಕಾರಕ್ಕೆ ಆಗ್ರಹಿಸಿತು. ಪಹಣಿ ಪತ್ರಿಕೆಯಲ್ಲಿ ಹೆಸರಿರುವ ಭೂ ಮಾಲೀಕನಿಗೆ ಬೆಳೆ ನಷ್ಟ ಶೇ ೩೩ ಕ್ಕಿಂತ ಹೆಚ್ಚು ನಷ್ಟ ಉಂಟಾದಲಿ,್ಲ ಪರಿಹಾರ ನೀಡಲು ಕೇಂದ್ರ ಸರ್ಕಾರದ ಎನ್ ಡಿ ಆರ್ ಎಫ್ ಮಾರ್ಗದರ್ಶನದಂತೆ ಅವಕಾಶವಿರುತ್ತದೆ. ಆದರೆ ಅತಿಕ್ರಮಣದಾರರಿಗೆ ಬೇಳೆ ನಷ್ಟ ಪರಿಹಾರದಿಂದ ವಂಚಿತರಾಗಿದ್ದಾರೆ ಎಂದು ಅವರು ಹೇಳಿದರು.
ಸಾವಿರಾರು ಕುಟುಂಬ :
ಜಿಲ್ಲಾದ್ಯಂತ ಸಾವಿರಾರು ಕುಟುಂಬಗಳ ಅರಣ್ಯ ಅತಿಕ್ರಮಣದಾರರ ಬೆಳೆ ನಷ್ಟಕ್ಕೆ ಒಳಗಾಗಿದ್ದು, ಸರ್ಕಾರ ಮಾನವೀಯತೆ ದೃಷ್ಟಿಯಿಂದ ತುರ್ತು ಕ್ರಮ ತೆಗೆದುಕೊಳ್ಳಲು ಅಧ್ಯಕ್ಷ ರವೀಂದ್ರ ನಾಯ್ಕ ಸರ್ಕಾರಕ್ಕೆ ಕೋರಿದ್ದಾರೆ.