ಕಾಲೇಜಿಗೆ ಹೋದ ಹೋದ ವಿದ್ಯಾರ್ಥಿ ಮರಳಿ ಮನೆಗೆ ಬಾರದೆ ನಾಪತ್ತೆ : ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ತಂದೆ
ಶಿರಸಿ:ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋದ ಮಗ ಮನೆಗೆ ಬಾರದೆ ಕಾಲೇಜಿಗೂ ಹೋಗದೇ ಕಾಣೆಯಾಗಿರುವ ಬಗ್ಗೆ ತಂದೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಶಿರಸಿ ತಾಲೂಕಿನಲ್ಲಿ ನಡೆದಿದೆ.
ಕಾನಗೋಡನ ಕಬ್ಬಳ್ಳಿ ಮೂಲದ ಮಂಜುನಾಥ ಹೆಗಡೆಯವರ ಮಗ ಸಾತ್ವಿಕ್ ಹೆಗಡೆ ಕಾಣೆಯಾದ ವಿದ್ಯಾರ್ಥಿಯಾಗಿದ್ದಾನೆ.ತಾನು ವಿಧ್ಯಾಭ್ಯಾಸ ಮಾಡುತ್ತಿದ್ದ ಆರ್ ಎನ್ ಶೆಟ್ಟಿ ಕಾಲೇಜಿಗೆ ಸಾತ್ವಿಕ್ ಬೆಳಿಗ್ಗೆ 10 ಗಂಟೆಗೆ ಹೋಗಿದ್ದು, ಮರಳಿ ಮನೆಗೆ ಬಾರದ ಮಗನ ಸುಳಿವಿಗೆ ಪೋಲೀಸ್ ಸಹಾಯಕ್ಕೆ ಠಾಣೆ ಮೆಟ್ಟಿಲೇರಿದ್ದಾರೆ.ವಿಧ್ಯಾರ್ಥಿ 19 ವರ್ಷದವನಾಗಿದ್ದು,5ಪೂಟ್ 3 ಇಂಚು ಎತ್ತರ,ಗೋದಿ ಮೈಬಣ್ಣ, ಹಾಗೂ ಬಿಳಿ ಬಣ್ಣದ ಕಪ್ಪು ಚುಕ್ಕೆ ಇರುವ ಟೀಶರ್ಟ ಹಾಗೂ ಬೂದು ಬಣ್ಣದ ಜೀನ್ಸ ಪ್ಯಾಂಟ್ ಧರಿಸಿರುವುದಾಗಿ ತಿಳಿಸಿದ್ದಾರೆ.ಈತನ ಬಗ್ಗೆ ಯಾರಿಗಾದರು ಸುಳಿವು ಸಿಕ್ಕಲ್ಲಿ ಶಿರಸಿ ಪೋಲೀಸ್ ಠಾಣೆಗೆ ಈ ಮೊಬೈಲ್ ನಂಬರ್ 9480805264 ಕಾಲ್ ಮಾಡಿ ತಿಳಿಸಬೇಕಾಗಿ ಕೋರಿದ್ದಾರೆ.