ಜೋರಾದ ಮಳೆಯಲ್ಲೂ ಕೂಡ ಅತ್ಯಂತ ವಿಜೃಂಭಣೆಯಿಂದ ಅದ್ದೂರಿಯಾಗಿ ಮುಕ್ತಾಯಗೊಂಡ ಭಟ್ಕಳ ಮಾರಿಜಾತ್ರೆ
ಭಟ್ಕಳ: ತಾಲೂಕಿನ ಅತಿ ಪ್ರಸಿದ್ದ ಜಾತ್ರೆಯಾದ ಶ್ರೀ ಮಾರಿ ಜಾತ್ರೆ ಬುದುವಾರ ಬೆಳಿಗ್ಗೆ 5.30ಕ್ಕೆ ಇಲ್ಲಿನ ಮಾರಿಕಾಂಬಾ ದೇವಸ್ಥಾನದಲ್ಲಿ ಮಾರಿಯಮ್ಮ ಗದ್ದುಗೆ ಏರುವುದರ ಮೂಲಕ ವಿದ್ಯುಕ್ತವಾಗಿ ಭಟ್ಕಳ ಮಾರಿಜಾತ್ರೆ ಆರಂಭಗೊಂಡಿತು. ಬುಧವಾರದಂದು ಮುಂಜಾನೆ ಕರೆತರಲಾದ ಮಾರಿದೇವಿಯ ಮೂರ್ತಿಯನ್ನು ಮಾರಿಕಾಂಬಾ ದೇವಿಯ ಎದುರಿನ ಪ್ರಾಂಗಣದ ಗರ್ಭಗುಡಿಯ ಹೊರಗಡೆ ಮಾರಿದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಎರಡು ದಿವಸ ನಡೆಯುವ ಈ ಜಾತ್ರೆಯಲ್ಲಿ ಮೊದಲನೇ ದಿನವಾದ ಬುಧವಾರ ದೂರದ ಊರಿನವರು ತಮ್ಮ ಮನೆಯಲ್ಲಿ ಹಬ್ಬ ಆಚರಿಸುತ್ತಾರೆ ಮತ್ತು ಎರಡನೇ ದಿನವಾದ ಗುರುವಾರದಂದು ಸ್ಥಳೀಯರು ಹಬ್ಬ ಆಚರಿಸುವ ಪದ್ದತಿ ರೂಢಿಯಲ್ಲಿದೆ. ಸಂಭ್ರಮದಿಂದ ಜರುಗುವ ಈ ಜಾತ್ರೆಯಲ್ಲಿ ಅಕ್ಕಪಕ್ಕದ ತಾಲೂಕಿನಿಂದಲೂ ಭಕ್ತರು ಬಂದು ದೇವಿಯ ಆಶೀರ್ವಾದ ಪಡೆಯುತ್ತಿದ್ದು, ಉದ್ದದ ಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ದರ್ಶನ ಪಡೆದರು.ಭಕ್ತರು ಹಣ್ಣು ಕಾಯಿ ನೀಡಿ ಪೂಜೆಯ ನ್ನು ಮಾಡಿಸಿದ್ದರು, ದೇವಸ್ಥಾನದ ಆಡಳಿತ ಮಂಡಳಿಯಿಂದ ಭಕ್ತರ ದರ್ಶಕ್ಕೆ ಉತ್ತಮ ವ್ಯವಸ್ಥ ಮಾಡಿಕೊಟ್ಟಿರುವುದರಿಂದ ಮಾರಿಯಮ್ಮ ದೇವಿ ದರ್ಶನಕ್ಕೆ ಯಾವುದೇ ತೊಂದರೆಯಾದೆ ಭಕರಿಗೆ ಸರಾಗವಾಗಿ ದರ್ಶನ ಸಿಕಿತ್ತು. ಮಾರಿ ಜಾತ್ರೆ ಯ 2 ನೆ ದಿನವಾದ ಗುರುವಾರ ಸಂಜೆ 5 ಗಂಟೆಗೆ ಜೋರಾದ ಮಳೆಯಲ್ಲೂ ಕೂಡ ಅಪಾರ ಸಂಖ್ಯೆಯಭಕರುಮಾರಿಯಮ್ಮದೇವಿಯನ್ನುಮೂರ್ತಿಯನ್ನು ಭವ್ಯ ಮೆರವಣಿಗೆ ಯ ಮೂಲಕ ತೆಗೆದುಕೊಂಡು ಹೋಗಿ ಜಾಲಿ ಕೊಡಿ ಸಮುದ್ರದಲ್ಲಿ ವಿಸರ್ಜನೆ ಮಾಡುವುದರ ಮೂಲಕ ಭಟ್ಕಳ ಮಾರಿಜಾತ್ರೆ ಮುಕ್ತಾಯಗೊಂಡಿತು.ಮಾರಿ ಜಾತ್ರೆ ಹಿನ್ನೆಲೆ 2 ದಿನ ಭಟ್ಕಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಜಿಲ್ಲೆಯಲ್ಲಿಯೇ ಅತ್ಯಂತ ವಿಜೃಂಭಣೆಯಿಂದ ಅದ್ದೂರಿಯಾಗಿ ನಡೆಯುವ ಮಾರಿ ಜಾತ್ರೆಗಳಲ್ಲಿ ಭಟ್ಕಳ ತಾಲೂಕಿನ ಮಾರಿ ಜಾತ್ರೆ ಸಹ ಒಂದು. ಜೋರಾದ ಮಳೆಯನ್ನು ಲೆಕ್ಕಿಸದೆ ಅಪಾರ ಸಂಖ್ಯೆಯ ಭಕರು ಬೇರೆ ಬೇರೆ ಊರುಗಳಿಂದ ಬಂದು ಇಂದಿನ ಮಾರಿಯಮ್ಮ ದೇವಿಯ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿ ದ್ದರು.
ಗುರುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರು ಮಾರಿ ಜಾತ್ರೆಗೆ ಬೇಟಿ ನೀಡಿ ದೇವಿಯ ದರ್ಶನ ಪಡೆದರು.
ಮಾರಿದೇವಿಯ ವಿಸರ್ಜನೆ ಮೆರವಣಿಗೆ ಯಲ್ಲಿ ಮಾರಿಕಾಂಬಾ ದೇವಸ್ಥಾನ ಅಧ್ಯಕ್ಷ ಪರಮೇಶ್ವರ್ ನಾಯ್ಕ್, ಸಮಿತಿ ಸದಸ್ಯರು, ಸಾಮಾಜಿಕ ಹೋರಾಟಗಾರ ಈರ ನಾಯ್ಕ್, ಚೌತನಿ, ಸಮಾಜ ಸೇವಕ ಶ್ರೀನಿವಾಸ ನಾಯ್ಕ್ ಹನುಮಾನ ನಗರ, ಮುಂತಾದವರು ಮತ್ತು ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.