ಅಂಕೋಲಾದ ಶಿರೂರು ಗುಡ್ಡ ಕುಸಿತ ಸಂತ್ರಸ್ತರಿಗೆ ಸಿಗಂದೂರು ದೇವಸ್ಥಾನದಿಂದ ಆಹಾರ ಕಿಟ್ ಮತ್ತು ಸಹಾಯ ಧನ ವಿತರಣೆ.
ಅಂಕೋಲಾ -ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಪ್ರದೇಶಕ್ಕೆ ಇಂದು ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್ ಆರ್ ಭೇಟಿ ನೀಡಿದರು. ಎಲ್ಲ ಸಂತ್ರಸ್ತ ಕುಟುಂಬಗಳ ಮನೆಗೂ ಭೇಟಿ ನೀಡಿ ದೇವಸ್ಥಾನದ ವತಿಯಿಂದ ಆಹಾರ ಕಿಟ್ ಹಾಗೂ ಸಹಾಯ ಧನ ವಿತರಿಸಿದರು. ಈ ಸಂದರ್ಭದಲ್ಲಿ ವೇಳೆ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಸಾಗರ ತಾಲ್ಲೂಕು ಉಪಾಧ್ಯಕ್ಷ ಗಣೇಶ ತುಮರಿ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ , ಕನ್ನಡಪರ ಹೊರಟಗಾರ ರಾಜು ಮಾಸ್ತಿಹಳ್ಳ ಉಪಸ್ಥಿತರಿದ್ದರು.