ಶ್ರೀವಲ್ಲಿ ಪ್ರೌಢಶಾಲೆ ಸಾಹಿತ್ಯ ಸಂಘದಿಂದ ಭಾವೈಕ್ಯತೆಯ ರಕ್ಷಾ ಬಂಧನ ಆಚರಣೆ
ಭಟ್ಕಳ- ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಚಿತ್ರಾಪುರ ಮಠದ ಆಡಳಿತದ ಶ್ರೀವಲ್ಲಿ ಪ್ರೌಢಶಾಲೆ ಯಲ್ಲಿ ನಿನ್ನೆ ಬುದುವಾರ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು.ಸುಮಾರು ಹದಿನೈದು ವರ್ಷಗಳಿಂದ ಶ್ರೀವಲ್ಲಿ ಸಾಹಿತ್ಯ ಸಂಘದಿಂದ ಪ್ರತಿವರ್ಷವೂ ರಕ್ಷಾ ಬಂಧನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅತಿ ಹೆಚ್ಚು ವಿದ್ಯಾರ್ಥಿಗಳಿಂದ ಕೂಡಿರುವ ಉಚಿತ ಶಿಕ್ಷಣವನ್ನು ನೀಡಲಾಗುತ್ತಿರುವ ಶಾಲೆಯಲ್ಲಿ ಮಕ್ಕಳಲ್ಲಿ ಸಹೋದರತೆ ಬ್ರಾತತ್ವ ಬಂದುತ್ವದ ಕಲ್ಪನೆಯನ್ನು ಸಾಕಾರಗೊಳಿಸಲು ಪರಸ್ಪರ ರಕ್ಷೆ ಕಟ್ಡಿ ಹಾರೈಸಿಕೊಳ್ಳುವ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ವಿದ್ಯಾರ್ಥಿ ವಿದ್ಯಾರ್ಥಿನಿಯರು ಪರಸ್ಪರ ಎದುರು ಬದುರಾಗಿ ಕುಳಿತು ರಕ್ಷೆ ಕಟ್ಟಿಕೊಳ್ಳುವ ಮೂಲಕ ಶುಭಾಶಯ ಹಾಗೂ ಸಂಭ್ರಮ ವಿನಿಮಯ ಮಾಡಿಕೊಂಡು ಸಿಹಿ ಹಂಚಿಕೊಂಡರು.ಶಿಕ್ಷಕರು ಕೂಡ ರಕ್ಷೆ ಧಾರಣೆ ಮಾಡಿಸಿಕೊಂಡು ಮಕ್ಕಳಲ್ಲೂ ಸಹೋದರ ಸಂಬಂಧವನ್ನು ಜಾಗೃತಗೊಳಿಸಿದರು. ಮೊದಲಿಗೆ ಸಾಂಕೇತಿಕವಾಗಿ ಸಹೋದರಿಯಿಂದ ಸಹೋದರರಿಗೆ ಆರತಿ ಬೆಳಗಿ ತಿಲಕ ಇಡಿಸಲಾಯಿತು.
ಈ ಸಂಧರ್ಭದಲ್ಲಿ ರಕ್ಷಾ ಬಂಧನ ನ ಆರಂಭ ಉದ್ದೇಶ ಸದುಪಯೋಗ ಗಳ ಬಗ್ಗೆ ಶಿಕ್ಷಕರು ಮಕ್ಕಳಿಗೆ ಉಪದೇಶ ಮಾಡಿದರು.ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ಮಮತಾ ಭಟ್ಕಳ, ಶ್ರೀವಲ್ಲಿ ಸಾಹಿತ್ಯ ಸಂಘದ ಸಂಸ್ಥಾಪಕ ಶಿಕ್ಷಕಿ ರೇಷ್ಮಾ ನಾಯಕ, ಕಲಾ ಶಿಕ್ಷಕ ಸಂಜಯ ಗುಡಿಗಾರ, ನಾರಾಯಣ ನಾಯ್ಕ, ಶ್ರೀಮತಿ ಕಾಂಚನಾ ಉಪಸ್ಥಿತಿ ಇದ್ದರು. ಶಾಲೆಯ ಎಲ್ಲ ಶಿಕ್ಷಕ ಶಿಕ್ಷಕರು ಸಿಬ್ಬಂದಿಗಳು ಈ ಸಂಭ್ರಮದಲ್ಲಿ ಪಾಲ್ಗೊಂಡರು.