ಹೊನ್ನಾವರ-ಭಟ್ಕಳ ಟ್ಯಾಕ್ಸಿ ಚಾಲಕ ಮಾಲಕರ ಸಂಘದ ವತಿಯಿಂದ ಹೊನ್ನಾವರದ ಆರ್.ಟಿ.ಓ ಗೆ ಮನವಿ ಸಲ್ಲಿಸಲಾಯಿತು.
ಭಟ್ಕಳದಲ್ಲಿ ಸುಮಾರು 250ರಿಂದ 260 ಟೂರಿಸ್ಟ್ ಕಾರುಗಳ ಚಾಲಕ ಮತ್ತು ಮಾಲಕರು ಬಾಡಿಗೆ ನಂಬಿ ಜೀವನ ಮಾಡುತ್ತಿದ್ದೇವೆ. ಆದರೆ ಕೆಲವೊಂದು ಪ್ರೈವೇಟ್ ಕಾರಿನವರು ಮಂಗಳೂರು ,ಗೋವಾ ಮುಂತಾದ ಕಡೆಗಳಿಗೆ ಪ್ರಯಾಣಿಕರನ್ನು ಕೂರಿಸಿಕೊಂಡು ಬಾಡಿಗೆ ಮಾಡುತ್ತಿರುವುದು ಕಂಡು ಬರುತ್ತಿದೆ ಪ್ರೈವೇಟ್ ಕಾರ್ಯದವರಿಗೆ ಯಾವುದೇ ರೀತಿಯಲ್ಲಿ ಬಾಡಿಗೆ ಮಾಡಲು ಅವರಿಗೆ ಅವಕಾಶವಿರುವುದಿಲ್ಲ, ಅವರು ಕೇವಲ ತಮ್ಮ ಸ್ವಂತಕ್ಕೆ ಮಾತ್ರ ಬಳಸಲು ಅವಕಾಶವಿರುತ್ತದೆ. ಹಾಗಾಗಿ ಈ ವಿಷಯವನ್ನು ಆರ್ಟಿಓ ಕಚೇರಿಗೆ ಹೋಗಿ ಅವರಿಗೆ ಮನವರಿಕೆ ಮಾಡಿ ಅಂತವರ ವಿರುದ್ಧ ಕಠಿಣ ಕ್ರಮ ಕೈ ಗೊಳ್ಳುವಂತೆ ಆಗ್ರಹಿಸಿ ಮನವಿಯನ್ನು ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಆರ್ ಟಿ ಓ ಅವರು ಎಲ್ಲಾ ಬಾಡಿಗೆ ಹೊಡೆಯುವ ಪ್ರೈವೇಟ್ ಕಾರ್ ನವರಿಗೆ ಬಾಡಿಗೆ ಅಂತ ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು .ಅಲ್ಲದೆ ಈ ಒಂದು ಸಂದರ್ಭದಲ್ಲಿ ದಕ್ಷಿಣ ಕನ್ನಡ ದ ಆಟೋ ಚಾಲಕರ ಬಗ್ಗೆಯೂ ತಿಳಿಸಲಾಯಿತು, ರಿಕ್ಷಾದವರಿಗೆ ಸರಕಾರ ಕೇವಲ ಏಳು ಕಿಲೋಮೀಟರ್ ಪರ್ಮೀಟ್ ನೀಡಿರುತ್ತದೆ .ಆದರೆ ಅವರು ಸಿಗಂದೂರು, ಕುಂದಾಪುರ ಕೊಲ್ಲೂರು ಮುಂತಾದ ಊರುಗಳಿಗೆ ಬಾಡಿಗೆಯನ್ನು ತೆಗೆದುಕೊಂಡು ಹೋಗುತ್ತಾರೆ, ಅವರ ಬಗ್ಗೆನೂ ಚರ್ಚಿಸಿ ಕ್ರಮ ಕೈ ಗೊಳ್ಳುವಂತೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಭಟ್ಕಳ ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಗಣೇಶ್ ದೇವಾಡಿಗ, ಉಪಾಧ್ಯಕ್ಷರಾದ ಅಬ್ದುಲ್ ಸಮಿ,ಸೂರ್ಯಕಾಂತ ನಾಯ್ಕ ಜಾಲಿ,ಮುಂತಾದವರು ಉಪಸ್ಥಿತರಿದ್ದರು.