ಭಟ್ಕಳದ ಹುರುಳಿಸಾಲ್ ಯುವಕ ನಾಗರಾಜ ವೆಂಕಟೇಶ ನಾಯ್ಕ ತೀವ್ರ ಹೃದಯಾಘಾತದಿಂದ ಸಾವು
ಭಟ್ಕಳ: ತಾಲೂಕಿನ ಹುರುಳಿಸಾಲ್ ನಿವಾಸಿ ನಾಗರಾಜ ವೆಂಕಟೇಶ ನಾಯ್ಕ (೨೩) ಇವರು ಭಾನುವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿದನರಾಗಿದ್ದಾರೆ. ಭಾನುವಾರ ಬೆಳಿಗ್ಗೆ ಕುಸಿದು ಬಿದ್ದ ಇವರನ್ನು ತಕ್ಷಣ ಇಲ್ಲಿನ ಸರಕಾರಿ ಆಸ್ಪತೆಗೆ ಕರೆದೊಯ್ಯಲಾಯಿತಾದರೂ ಆಸ್ಪತ್ರೆಗೆ ಸಾಗಿಸುವಾಗಲೇ ಮೃತಪಟ್ಟಿದ್ದಾರೆನ್ನಲಾಗಿದೆ. ಮೃತರು ಮೇಸ್ತಿç ಕೆಲಸವನ್ನು ಮಾಡಿಕೊಂಡಿದ್ದು ಕುಟುಂಬದಲ್ಲಿ ದುಡಿಯುವವನೋರ್ವನೇ ಆಗಿದ್ದಾನೆ ಎನ್ನಲಾಗಿದೆ. ಮೃತರು ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.