ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಕ್ಕೆ ೩೩ ವರ್ಷ ಪಾದಾರ್ಪಣೆ ಹಿನ್ನಲೆಯಲ್ಲಿ ಇಂದು ಶಿರಸಿಯ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ “ಜಿಲ್ಲಾ ಮಟ್ಟದ ಅರಣ್ಯವಾಸಿಗಳ ಚಿಂತನ” ಸಭೆಯನ್ನು ಸಾಮಾಜಿಕ ಹಿರಿಯ ಚಿಂತಕ ಕಾಗೋಡ ತಿಮ್ಮಪ್ಪನವರು ಭಾಗವಹಿಸುವರು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಚಿಂತನ ಕಾರ್ಯಕ್ರಮದಲ್ಲಿ ಹೋರಾಟದ ಮುಂದಿನ ರೂಪು ರೇಷೆ ನಿರ್ಧರಿಸಲಾಗುವುದು. ಅಲ್ಲದೇ, ಸುಪ್ರೀಂ ಕೋರ್ಟನಲ್ಲಿ ಅನಧಿಕೃತ ಅರಣ್ಯ ಒತ್ತುವರಿದಾರರನ್ನು ಒಕ್ಕಲೇಬ್ಬಿಸುವ ಪ್ರಕರಣದಲ್ಲಿ ಹೋರಾಟಗಾರರ ವೇದಿಕೆ ತೆಗೆದುಕೊಳ್ಳುವ ಕ್ರಮದ ಕುರಿತು ಚರ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ.