ಶಿರಸಿ: ಅವೈಜ್ಞಾನಿಕ ಕರಡು ಕಸ್ತುರಿರಂಗನ್ ವರದಿಗೆ ಕೇಂದ್ರ ಸರ್ಕಾರಕ್ಕೆ ಅಂತಿಮ ಅಭಿಪ್ರಾಯ ಸಲ್ಲಿಸುವ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ಅಭಿಪ್ರಾಯಕ್ಕೆ ಹೋರಾಟಗಾರ ವೇದಿಕೆಯು ಭೌತಿಕ ಸರ್ವೇವಿಲ್ಲದೇ ರಾಜ್ಯ ಸರ್ಕಾರ ವರದಿ ಒಪ್ಪಬಾರದು ಅಲ್ಲದೇ, ವಿವಿಧ ಯೋಜನೆಯಡಿಯಲ್ಲಿ ಈಗಾಗಲೇ ಘೋಷಿಸಿದ ೧೬.೧೧೪ ಚದರ.ಕಿ.ಮೀ ಪರಿಸರ ಸೂಕ್ಷö್ಮ ಪ್ರದೇಶವನ್ನು ಪುನಂ ಕಸ್ತೂರಿರಂಗನ್ ವರದಿಯಲ್ಲಿ ಮೀತಿಗೊಳಿಸುವ ಅಭಿಪ್ರಾಯ ಸಮಂಜಸವೆಲ್ಲವೆAದು ಎಂಬ ಅಭಿಪ್ರಾಯವನ್ನ ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಸರ್ಕಾರಕ್ಕೆ ಸೂಚಿಸಿದ್ದಾರೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ನೇತ್ರತ್ವದಲ್ಲಿ ನಿನ್ನೆ ವಿಧಾನ ಸೌಧಾ ಸಂಭಾಗಣದಲ್ಲಿ ಕರಡು ವರದಿಯ ಸೂಕ್ಷö್ಮ ಪ್ರದೇಶದ ವ್ಯಾಪ್ತಿಯ ಜನಪ್ರತಿನಿಧಿಗಳ ಸಭೆಯಲ್ಲಿನ ಅಭಿಪ್ರಾಯಗಳು ವಿವಿಧ ಪ್ರತಿಕೆಯಲ್ಲಿ ಪ್ರಕಟಗೊಂಡ ವರದಿಗಳನ್ನ ಪರಿಶೀಲಿಸಿ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಅಭಯಾರಣ್ಯ ರಾಷ್ಟೀಯ ಉದ್ಯಾನವನ, ಹುಲಿ ಸಂರಕ್ಷಣಾ ಯೋಜನೆ ಮುಂತಾದ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಸೂಕ್ಷö್ಮ ಪ್ರದೇಶ ೧೬,೧೧೪ ಚದರ.ಕಿ.ಮೀ ವ್ಯಾಪ್ತಿಯಲ್ಲಿ ಇರುತ್ತದೆ. ಈಗಾಗಲೇ ಘೋಷಿಸಿದ ಈ ಕ್ಷೇತ್ರಕ್ಕೆ ಪುನಂ ಕಸ್ತೂರಿರಂಗನ್ ವರದಿಯಲ್ಲಿ ಪರಿಸರ ಸೂಕ್ಷö್ಮ ಪ್ರದೇಶವೆಂದು ಘೋಷಿಸುವ ಔಚಿತ್ಯವನ್ನು ಅವರು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಈಗಿರುವ ಕಾನೂನು ನೀತಿ ನಿಯಮದಡಿಯಲ್ಲಿ ಪರಿಸರ ರಕ್ಷಿಸಲು ಅವಕಾಶವಿರುವುದರಿಂದ ಪದೇ ಪದೇ ಒಂದೇ ಉದ್ದೇಶವನ್ನು ವಿವಿಧ ಯೋಜನೆ ಅಡಿಯಲ್ಲಿ ಜಾರಿಗೆ ತರುವದು ಸಮಂಜಸವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಸುಮಾರು ೨೦೦೦ ಚದರ.ಕಿ.ಮೀ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಶರಾವತಿ ಅಭಯಾರಣ್ಯ, ಕಾಳಿ- ಹುಲಿ ಸಂರಕ್ಷಣಾ, ದಾಂಡೇಲಿ ವನ್ಯ ಜೀವಿ ತಾಣ, ಅಣಶಿ ರಾಷ್ಟೀಯ ಉದ್ಯಾನವನ ಪರಿಸರ ಸೂಕ್ಷö್ಮ ಸಂರಕ್ಷಿತ ಪ್ರದೇಶವೆಂದು ಘೋಷಿಸಲ್ಟಟ್ಟಿದ್ದು ಇರುತ್ತದೆ. ಹಿಂದಿನ ಘೋಷಿತ ತಾಣವನ್ನು ಕಸ್ತೂರಿರಂಗನ್ ವರದಿಯಲ್ಲಿಯು ಸೂಕ್ಷö್ಮ ಪ್ರದೇಶ ಸೇರಲ್ಪಟ್ಟರೇ, ಈ ಕ್ಷೇತ್ರದ ಗಡಿಯಿಂದ ೧ ಕಿ.ಮೀ ವ್ಯಾಪ್ತಿಯವರೆಗೂ ಪರಿಸರ ಸಂರಕ್ಷಣೆಯ ವ್ಯಾಪ್ತಿಯ ಇತಿಮಿತಿಯಲ್ಲಿ ಇರುವ ಅರಣ್ಯ ಮತ್ತು ಖಾಸಗಿ ಜಮೀನು ಸಹಿತ ಅತೀ ಸೂಕ್ಷö್ಮ ಪ್ರದೇಶದ ವ್ಯಾಪ್ತಿಯ ಸುಮಾರು ೨ ಸಾವಿರ ಚದರ ಕಿ.ಮೀ. ವ್ಯಾಪ್ತಿಗೆ ಸೇರಲ್ಪಡುವದು ಎಂದು ನಿನ್ನೆ ಬೆಂಗಳೂರಿನಲ್ಲಿ ಜರುಗಿದ ಜನಪ್ರತಿನಿಧಿಗಳ ಸಭೆಯ ತೀರ್ಮಾನಕ್ಕೆ ಅಧ್ಯಕ್ಷ ರವೀಂದ್ರ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.