ಭಟ್ಕಳ: ಒಂದು ದಶಕದಿಂದ ಭಟ್ಕಳದ ಲ್ಲಿ ಬೀಡು ಬಿಟ್ಟಿರುವ ಸರ್ಕಾರಿ ನೌಕರರನ್ನು ವರ್ಗಾಯಿಸಿ ಎಂದು ಆಗ್ರಹಿಸಿ ನಿನ್ನೆಯಿಂದ ಭಟ್ಕಳದ ಹಳೆ ತಹಸೀಲ್ದಾರ್ ಕಚೇರಿ ಎದುರು ರಾಜ್ಯ ಮಾಹಿತಿ ಹಕ್ಕು ಕಾಯ್ದೆ ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಜಿಲ್ಲಾ ಅಧ್ಯಕ್ಷ ಶಂಕರ ನಾಯ್ಕ ನೇತೃತ್ವದಲ್ಲಿ ಅಹೋರಾತ್ರಿ ಅನಿರ್ದಿಷ್ಟಾವದಿ ಧರಣಿ ಶಾಂತಿಯುತವಾಗಿ ನಡೆಸುತ್ತಿರುವ ಪ್ರತಿಭಟನಾಕಾರರಿಗೆ ಇಂದು ಮಧ್ಯಾಹ್ನ ಭಟ್ಕಳ ತಾಲೂಕ ಆಡಳಿತ ಭಟ್ಕಳ ಅತಿಸೂಕ್ಷ ಪ್ರದೇಶ ಮತ್ತು ಕಾನೂನು ಸುವ್ಯವಸ್ಥೆಯ ನೆಪ ಒಡ್ಡಿ ಪ್ರತಿಭಟನೆಯನ್ನು ಮುಕ್ತಾಯಗೊಳಿಸುವಂತೆ ಭಟ್ಕಳ ನಗರ ಕಂದಾಯ ನಿರೀಕ್ಷಕರ ಮೂಲಕ ನೋಟಿಸ್ ಜಾರಿ ಮಾಡಿದ ಕ್ರಮವನ್ನು ಕರ್ನಾಟಕ ರಣಧೀರರ ವೇಧಿಕೆ ಉತ್ತರ ಕನ್ನಡ ಜಿಲ್ಲಾ ಉಪಾಧ್ಯಕ್ಷ , ಸಾಮಾಜಿಕ ಹೋರಾಟಗಾರ ಕಿರಣ್ ಗಾವಂಕರ್ ಅಂಕೋಲಾ ತೀವ್ರವಾಗಿ ಖಂಡಿಸಿದ್ದಾರೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಸಂವಿಧಾನದ ಪ್ರಕಾರ ತಮ್ಮ ನ್ಯಾಯಯುತ ಬೇಡಿಕೆಗಾಗಿ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಪ್ರತಿಭಟನೆ ನಡೆಸುವ ಹಕ್ಕಿದೆ. ಕುಂಟು ನೆಪ ಒಡ್ಡಿ ಭಟ್ಕಳ ತಾಲೂಕ ಆಡಳಿತ ಇಂದು ಮಧ್ಯಾಹ್ನ ನೋಟೀಸ್ ನ್ನು ನೀಡಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ತಿಳಿಸಿದ್ದಾರೆ.
ಭಟ್ಕಳದ ಸಹಾಯಕ ಕಮಿಷನರ್ ಕಚೇರಿ ಹಾಗೂತಹಶೀಲ್ದಾರ ಕಚೇರಿಯಲ್ಲಿನಿಯಮಬಾಹೀರವಾಗಿ ಹಲವು ವರ್ಷದಿಂದ ಸರ್ಕಾರಿ ನೌಕರರು ಬೀಡುಬಿಟ್ಟಿದ್ದಾರೆ. ಇಂತಹ ನೌಕರರಿಂದ ಆಡಳಿತ ಹದಗೆಟ್ಟಿದ್ದು ಭಟ್ಕಳದಲ್ಲಿ ಭ್ರಷ್ಟಾಚಾರ ಜಾಸ್ತಿ ಆಗಿದೆ ಆದ ಕಾರಣ ಈ ಕೂಡಲೇ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಆದ ಮಂಕಾಳ ವೈದ್ಯ ಅವರು ಮದ್ಯ ಪ್ರವೇಶಿಸಿ ಕೂಡಲೇ ಈ ಸಮಸ್ಯೆ ಯನ್ನು ಪರಿಹರಿಸಿ ಅವರ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ