ಸಿದ್ದಾಪುರ: ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಸಂಬAಧಿಸಿ ಅಸಮರ್ಪಕ ಜಿಪಿಎಸ್ ಆಗಿರುವ ಕುರಿತು ತೀವ್ರ ಆಕ್ರೋಶ ಅರಣ್ಯವಾಸಿಗಳಿಂದ ವ್ಯಕ್ತವಾದವು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಆಶ್ರಯದಲ್ಲಿ ಸಿದ್ದಾಪುರ ತಾಲೂಕಾದ್ಯಂತ ಜರುಗಿದ ಅಸಮರ್ಪಕ ಜಿಪಿಎಸ್ ಮೇಲ್ಮನವಿ ಪ್ರತಿ ಇಂದು ಸ್ಥಳೀಯ ಬಾಲಭವನ ಸಂಭಾಗಣದಲ್ಲಿ ವಿತರಿಸುವ ಸಂದರ್ಭದಲ್ಲಿ ಅರಣ್ಯವಾಸಿಗಳಿಂದ ಅಸಮರ್ಪಕ ಜಿಪಿಎಸ್ ಕುರಿತು ತೀವ್ರ ಆಕ್ರೋಶ ವ್ಯಕ್ತವಾದ ಸಂದರ್ಭ ಜರುಗಿದವು.
ಸಿದ್ದಾಪುರ ತಾಲೂಕಿನಾದ್ಯಂತ ೬,೯೧೫ ಜಿಪಿಎಸ್ ಮೇಲ್ಮನವಿ ಉಚಿತವಾಗಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಜರುಗಿಸಿದ ಅಸಮರ್ಪಕ ಜಿಪಿಎಸ್ಗೆ ಕಾನೂನಾತ್ಮಕ ಹೋರಾಟ ಮಾಡಿರುವ ಕುರಿತು ಸಭೆಯಲ್ಲಿ ಅರಣ್ಯವಾಸಿಗಳು ಸ್ಲಾಗಣೆ ವ್ಯಕ್ತಪಡಿಸಿದರು.
ತಲಾತಲಾತರದಿಂದ ಸಾಗುವಳಿ ಮಾಡಿದ ಕೋಟಿಗೆ, ಅಂಗಳ, ಗೊಬ್ಬರ ಗುಂಡಿ, ಗಿಡಮರ ಮತ್ತು ಹುಲ್ಲುಗಾವಲು ಕ್ಷೇತ್ರ, ಜಿಪಿಎಸ್ನಿಂದ ತಪ್ಪಿರುವುದಕ್ಕೆ ಸಭೆಯನ್ನದ್ದೇಶಿಸಿ ರೈತ ಹೋರಾಟಗಾರ ವೀರಭದ್ರ ನಾಯ್ಕ, ಜಿಲ್ಲಾ ಸಂಚಾಲಕ ಶ್ರೀ ಹರಿಹರ ನಾಯ್ಕ ಓಂಕಾರ್, ಟಿ.ಎಮ್ ನಾಯ್ಕ ಅವರಗುಡ್ಡ, ಮಧುಕೇಶ್ವರ ನಾಯ್ಕ ಜೋಗಿಮನೆ, ಮಹಾಬಲೇಶ್ವರ ಗೌಡ ಸುಳಗಾರ್ ಮಾತನಾಡಿದರು. ಸಭೆಯಲ್ಲಿ ಜಯಂತ ನಾಯ್ಕ ಕಾನಗೋಡ, ವೆಂಕಟರಮಣ ನಾಯ್ಕ ಕುಪ್ಪರ್ಜಡ್ಡಿ, ಗಣಪ ಗೌಡ ತಾರೇಮನೆ, ಗೋಪಾಲ ನಾಯ್ಕ ಮನಮನೆ, ಖಾಜೀರಾ ಬೇಗಂ ಕಾನಗೋಡ, ಮಂಜುನಾಥ ಣಾಯ್ಕ ಹಾರ್ಸಿಕಟ್ಟಾ, ಸುರೇಶ ನಾಯ್ಕ ಹಾರ್ಸಿಕಟ್ಟಾ, ಗೋವಿಂದ ಗೌಡ ಸೋವಿನಕೊಪ್ಪ ಉಪಸ್ಥಿತರಿದ್ದರು.
ಹೋರಾಟದಿಂದ ಯಶಸ್ಸು ಸಾಧ್ಯ:
ಕಾಯಿದೆಯಲ್ಲಿ ಯಶಸ್ಸು ಹೋರಾಟದಿಂದ ಮಾತ್ರ ಸಾಧ್ಯ ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಧ್ಯಕ್ಷ ರವೀಂದ್ರ ನಾಯ್ಕ ಕರೆ ನೀಡಿದರು.