ಹೊನ್ನಾವರ: ಅರಣ್ಯ ಭೂಮಿ ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ನ.೭ ರಂದು ಹಮ್ಮಿಕೊಳ್ಳಲಾದ ಬೆಂಗಳೂರು ಚಲೋ ಕಾರ್ಯಕ್ರಮವು ಕರ್ನಾಟಕದಲ್ಲಿ ಜರುಗಲಿರುವ ವಿಧಾನ ಸಭಾ ಉಪಚುನಾವಣೆಯ ನೀತಿ ಸಂಹಿತೆಯಿAದ ಹಾಗೂ ಹಿರಿಯ ಸಚಿವರ ಸೂಚನೆ ಮೇರೆಗೆ ರಾಜ್ಯ ಮಟ್ಟದ ಅರಣ್ಯವಾಸಿಗಳ ಬೆಂಗಳೂರು ಚಲೋ ಕಾರ್ಯಕ್ರಮವನ್ನ ನ.೨೧(ಗುರುವಾರ) ಮೂಂದುಡಲಾಗಿದೆ ಎಂಬುದಾಗಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.ಅವರು ಆ. ೨೮ ರಂದು ಹೊನ್ನಾವರ ತಾಲೂಕಿನ ಮೂಡ ಗಣಪತಿ ದೇವಸ್ಥಾನದ ಸಂಭಾಗಣದಲ್ಲಿ ಜರುಗಿದ ಅರಣ್ಯವಾಸಿಗಳ ಬೃಹತ ಕಾರ್ಯಕ್ರಮದಲ್ಲಿ ಮುಂದುಡಿಕೆಯ ದಿನಾಂಕವನ್ನ ಪ್ರಕಟಿಸಿದ್ದರು.
ಈಗಾಗಲೇ ನಿರ್ಧರಿಸಿದ ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಹೋರಾಟಗಾರರ ಬೇಡಿಕೆಗೆ ಸ್ಪಂಧಿಸುವ ಮತ್ತು ಆಶ್ವಾಸನೆ ನೀಡಲು ನೀತಿ ಸಂಹಿತೆಯ ಮಾನದಂಡ ಇರುವುದರಿಂದ ಅನಿವಾರ್ಯವಾಗಿ ಮುಂದುಡುವ ಪ್ರಸಂಗ ಬಂದೊದಗಿದೆ ಎಂದು ಅವರು ಹೇಳಿದರು.
ಸ್ವಾಗತ ನಗರ ಅಧ್ಯಕ್ಷ ಸುರೇಶ ಮೇಸ್ತಾ ಪ್ರಸ್ತಾವನೆ ಜಿಲ್ಲಾ ಸಂಚಾಲಕ ರಾಮ ಮರಾಠಿ ಎಲ್ಕೊಟಕಿ, ಸಭೆಯನ್ನುದ್ದೇಶಿಸಿ ಸುರೇಶ ನಾಯ್ಕ ಕರ್ನಾಕೋಡ್, ಮಹೇಶ ನಾಯ್ಕ ಕಾನಕ್ಕಿ, ಗಜಾನನ ನಾಯ್ಕ ಸಾಲ್ಕೋಡ, ಆರ್.ಎಚ್. ನಾಯ್ಕ ಜನಕಡಗಲ್, ಮಾತನಾಡಿದರು. ಸಭೆಯಲ್ಲಿ ವಿನೋದ ನಾಯ್ಕ ಎಲ್ಕೊಟಕಿ, ಗೀರಿಶ ಚಿತ್ತಾರ, ಸಚೀನ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಚಿಂತನಾ ಕೂಟ:
ಸಭೆಯಲ್ಲಿ ಅರಣ್ಯ ಕಾಯಿದೆ ಮತ್ತು ಅರಣ್ಯವಾಸಿಗಳಿಗಾಗುವ ದೌರ್ಜನ್ಯದ ಕುರಿತು ಚಿಂತನಾ ಕೂಟ ಜರುಗಿ ಅರಣ್ಯವಾಸಿಗಳಿಗೆ ಇರುವ ಕಾನೂನಾತ್ಮಕ ಭದ್ರತೆ ಮತ್ತು ಸಾಗುವಳಿ ರಕ್ಷಣೆ ಕುರಿತು ಸಂವಾದ ಮತ್ತು ಚರ್ಚೆ ಜರುಗಿದವು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.