ಶಿರಸಿ: ಜಿಲ್ಲೆಯ ಒಂದು ಮೂರು ಅಂಶ ಅರಣ್ಯವಾಸಿಗಳ ಭೂಮಿ ಹಕ್ಕು ಅನಿವಾರ್ಯ. ಕಾನೂನು ಬದ್ಧ ಅರಣ್ಯ ಭೂಮಿ ಹಕ್ಕಿಗೆ ಸರ್ಕಾರದ ಇಚ್ಛಾಶಕ್ತಿ ಪ್ರದರ್ಶನ ಅವಶ್ಯ. ಈ ಹಂತದಲ್ಲಿ ಸರ್ಕಾರ ಭೂಮಿ ಹಕ್ಕು ನೀಡಲು ವೈಫಲ್ಯವಾದಲ್ಲಿ ಜಿಲ್ಲೆ ನಿರಾಶ್ರಿತ ಆಗುವುದರಲ್ಲಿ ಸಂಶಯವಿಲ್ಲ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಉಲ್ಲೇಖಿಸಿದರು.
ಅವರು ಇಂದು ಡಿ.೪ ರಂದು ಉತ್ತರ ಕನ್ನಡ ಜಿಲ್ಲಾ ೨೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ೨ ನೇ ದಿನದ ಅಂಕೋಲೆಯ ಹಿರಿಯ ಸಾಹಿತಿಗಳಾದ ಆರ್.ಜಿ. ಗುಂದಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ೬ ನೇ ಗೋಷ್ಠಿಯಾದ ಅರಣ್ಯವಾಸಿಗಳ ಭೂಮಿ ಹಕ್ಕಿನ ಸಮಸ್ಯೆ ಮತ್ತು ಸಾಧ್ಯತೆಗಳು ಎಂಬ ವಿಷಯ ಕುರಿತು ಮಾತನಾಡುತ್ತಾ ಮೇಲಿನಂತೆ ಹೇಳಿದರು.
ಅರಣ್ಯ ಅವಲಂಬಿತರ ಭೂಮಿ ಹಕ್ಕಿನ ಭದ್ರತೆ ಅಸ್ಥಿರಗೊಂಡಲ್ಲಿ ಜಿಲ್ಲೆಯ ಸಾಮಾಜಿಕ ಸ್ವಾಸ್ಥ ಹದಗೆಡುವುದಲ್ಲದೇ, ಸಹಸ್ರಾರು ಸಂಖ್ಯೆಯ ಅರಣ್ಯವಾಸಿಗಳು ನಿರ್ಗತಿಕರಾಗುವರು. ಸರ್ಕಾರ ಸಮಗ್ರವಾಗಿ ಚಿಂತಿಸಬೇಕೆAದು ಅವರು ಸರ್ಕಾರಕ್ಕೆ ಎಚ್ಚರಿಸಿದರು.
ಅರಣ್ಯವಾಸಿವಿಲ್ಲದ ಅರಣ್ಯ ಸಚಿವರ ಜಿಲ್ಲೆ:
ಅರಣ್ಯ ಸಚಿವರರಾದ ಬೀದರ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆಯಲ್ಲಿ ಓರ್ವ ಅರ್ಜಿ ದಾಖಲಿಸದೆ ಇರುವುದು ವಿಶೇಷ ಶೇ.೫.೩ ರಷ್ಟು ಭೌಗೋಳಿಕವಾಗಿ ಅರಣ್ಯ ಪ್ರದೇಶ ಹೊಂದಿರುವ ಅರಣ್ಯ ಸಚಿವರಿಗೆ ಅರಣ್ಯವಾಸಿಗಳ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಅಧ್ಯಯನ ಅವಶ್ಯ ಎಂದು ಅವರು ಹೇಳಿದರು.