ಹೊನ್ನಾವರ: ಬೆಂಗಳೂರಿನಿoದ ಹೊನ್ನಾವರ ಕಡೆ ಹೊರಟಿದ್ದ ಬಸ್ಸು ಬಾಳೆಗದ್ದೆ ತಿರುವಿನಲ್ಲಿ ಪಲ್ಟಿಯಾಗಿದೆ. ಶನಿವಾರ ಮುಂಜಾನೆ ನಡೆದ ಈ ಅವಘಡದಲ್ಲಿ 22 ಜನ ಗಾಯಗೊಂಡಿದ್ದಾರೆ. ಐವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರೆದಿದೆ.
ಶುಕ್ರವಾರ ರಾತ್ರಿ ಬೆಂಗಳೂರಿನಿAದ ಈ ಬಸ್ಸು ಹೊರಟಿತ್ತು. `ಬೆನಕ ಟ್ರಾವೆಲ್ಸ್’ ಕಂಪನಿಗೆ ಸೇರಿದ ಬಸ್ಸು ಇದಾಗಿದ್ದು, ಶನಿವಾರ ಬೆಳಗ್ಗೆ ಗೋಕರ್ಣವನ್ನು ತಲುಪಬೇಕಿತ್ತು. ಆದರೆ, ಹೊನ್ನಾವರ ಪ್ರವೇಶಕ್ಕೂ ಮುನ್ನವೇ ಬಸ್ಸು ಅಪಘಾತಕ್ಕೀಡಾಕಿದೆ. ಗಾಯಗೊಂಡ ಎಲ್ಲರೂ ಬೆಂಗಳೂರಿನವರಾಗಿದ್ದಾರೆ.
ಶನಿವಾರ ಬೆಳಗ್ಗೆ 7.30ರ ಆಸುಪಾಸಿಗೆ ಚಾಲಕ ಬಸ್ಸಿನ ವೇಗ ಹೆಚ್ಚಿಸಿದ್ದು, ಆಗ ಬಸ್ಸು ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮಜ ಬಸ್ಸಿನ ಒಳಗಿದ್ದ 22 ಜನರು ಪೆಟ್ಟು ಮಾಡಿಕೊಂಡಿದ್ದಾರೆ. ಈ ಪೈಕಿ 10 ಜನರಿಗೆ ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿದೆ. ಉಳಿದವರನ್ನು ಬೇರೆ ಕಡೆ ಹೆಚ್ಚಿನ ಚಿಕಿತ್ಸೆಗಾಗಿ ಸಾಗಿಸಲಾಗಿದೆ.