ಉ.ಕ/ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ರಣಧೀರರ ವೇದಿಕೆಯ ಸಿದ್ದಾಪುರ ತಾಲೂಕು ನೂತನ ಘಟಕದ ಉದ್ಘಾಟನೆ ಮತ್ತು ಕಾರ್ಯಕರ್ತರ ಪದಗ್ರಹಣ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಭೆಯ ಉದ್ಘಾಟನೆಯನ್ನು ರವಿವಾರ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ ಆರ್ ಶಂಕರ್ ಗೌಡ್ರು ನೆರವೇರಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಸಿದ್ದಾಪುರ ತಾಲೂಕು ಘಟಕ ನೂತನ ಅಧ್ಯಕ್ಷರಾಗಿ ಮೋಹನ್ ಪಾಂಡುರಂಗ ನಾಯ್ಕ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಸಂತೋಷ್ ಜಿನ್ ನಾಡರ್ ಅಧಿಕಾರ ಸ್ವೀಕರಿಸಿದರು,ಇನ್ನು ತಾಲ್ಲೂಕು ಘಟಕದ ಸದಸ್ಯರಾಗಿ ಹೊನ್ನಪ್ಪ ದ್ಯಾವಾ ಬಡಗಿ,ಅಜಿತ್ ಮಾರ್ಕಾಂಡ ಕೋನಾರ,ಗಣೇಶ ಈಶ್ವರ ಭೋವಿ, ಲೋಕೇಶ್ ರಾಮಾ ಬಡಗಿ, ನಾಗರಾಜ ರಾಮಾ ಬಡಗಿ,
ಸುರೇಶ್ ಚೌಡಾ ಗೊಂಡ, ಅಶೋಕ ನೀಲಪ್ಪ ಕುರುಬರ, ರವಿಚಂದ್ರ ಕರಿಯ ಗೊಂಡ,ಪುರುಷೋತ್ತಮ ಮಂಜುನಾಥ ನಾಯ್ಕ, ಮಂಜುನಾಥ ಮಾರ್ಯಾ ಗೊಂಡ ಸೇರಿದಂತೆ ಇತರರು ಸಂಘಟನೆಯ ತತ್ವ ಸಿದ್ಧಾಂತಗಳನ್ನು ಒಪ್ಪಿ ಸೇರ್ಪಡೆಯಾಗಿ ದ್ದಾರೆ. ಈ ಕಾರ್ಯಕ್ರಮದ ಉಸ್ತುವಾರಿಯನ್ನು ಸಮಾಜ ಸೇವಕರಾದ ದಿನೇಶ್ ನಾಯ್ಕ ವಹಿಸಿಕೊಂಡಿದ್ದರು.
*ಕನ್ನಡನಾಡಿನಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿ : ಕೆ ಆರ್ ಶಂಕರ್ ಗೌಡ್ರು.*
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯದ ಎಲ್ಲ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿ ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು. ಭಾಷೆಯ ತಾರತಮ್ಯ ನೀತಿಯನ್ನ ಸರ್ಕಾರಗಳು ಬಿಡಬೇಕು. ದ್ವಿಭಾಷಾ ನೀತಿ ಜಾರಿಗೆ ತರಬೇಕು.ರಸ್ತೆ ಸುಂಕ ವಸೂಲಾತಿ ಕೇಂದ್ರ (ಟೋಲ್ ಪ್ಲಾಜಾ) ಗಳನ್ನ ತೆರವು ಮಾಡಬೇಕು ಕಾರಣ ಲಕ್ಷಂತರ ರೂಪಾಯಿಗಳ ತೆರಿಗೆ ಕಟ್ಟಿದ್ದೇವೆ. ಜಾತಿ ಮತ್ತು ಧರ್ಮಗಳ ತಾರತಮ್ಯ ತೊಲಗಿಸಿ ಸಹಬಾಳ್ವೆ ಸಮಾನತೆಯನ್ನು ಒಪ್ಪಿಕೊಳ್ಳುವ ಸಮಾಜವನ್ನ ನಿರ್ಮಾಣ ಮಾಡಿವ ನಿಟ್ಟಿನಲ್ಲಿ ಹೋರಾಟಗಳು ನಿರಂತರವಾಗಿ ನಡೆಯಬೇಕಿದೆ ಹಾಗೂ ಸಿದ್ದಾಪುರ ತಾಲೂಕು ತಾಲ್ಲೋಕಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು ಎಂದು ಸಂಸ್ಥಾಪಕರಾಜ್ಯಾಧ್ಯಕ್ಷರಾದ ಕೆ ಆರ್ ಶಂಕರ್ ಗೌಡ್ರು ಆಗ್ರಹ ಮಾಡಿದರು.
ಈ ಸಂದರ್ಭದಲ್ಲಿ ತಿಮ್ಮಪ್ಪ ಗೌಡ.ಕೆ.ಎಸ್.(ಚಿನ್ನು ಗೌಡ), ರಾಜ್ಯ ಪ್ರಧಾನ ಕಾರ್ಯದರ್ಶಿ,ಕುಮಾರ ನಾಯ್ದ ಅಧ್ಯಕ್ಷರು, ಕರಾವಳಿ ಕರ್ನಾಟಕ ವಿಭಾಗ, ಸೂರಜ್ ನಾಯ್ಕ ಜಿಲ್ಲಾಧ್ಯಕ್ಷರು, ಸುಪ್ರಿಯಾ ವಿಷ್ಣು ನಾಯ್ಕ ಮಹಿಳಾ ಜಿಲ್ಲಾಧ್ಯಕ್ಷರು, ಕಿರಣ ಚಂದ್ರಹಾಸ ದಾಂವಕರ ,ನೆಲಮಂಗಲ ಅಧ್ಯಕ್ಷ ಮೂರ್ತಿ.ಕೊರಟಗೆರೆ ಅಧ್ಯಕ್ಷ ಮಂಜುಸ್ವಾಮಿ.ಎಂ.ಎನ್.ಲೋಕೇಶ್.ಎಸ್. ನಾರಾಯಣಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.