ಫೋನ್ಪೇ ಮೂಲಕ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಡು ಭ್ರಷ್ಟ ಜೆಸ್ಕಾಂ ಎ.ಇ.ಇ ಕೆಂಚಪ್ಪ
ಲಿಂಗಸೂರು- ರಾಯಚೂರು ಜಿಲ್ಲೆಯ ಲಿಂಗಸೂಗೂರು ಜೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಕೆಂಚಪ್ಪ ಎಂದು ತಿಳಿದುಬಂದಿದೆ.
ಈತ ಗುತ್ತಿಗೆದಾರನ ಬಳಿ 10,000 ರೂ. ಲಂಚಕ್ಕೆ ಬೇಡಿಕೆಯಿಟ್ಟು ಈಗಾಗಲೇ 5000 ರೂಪಾಯಿ ಹಣವನ್ನು ಫೋನ್ಪೇ ಮೂಲಕ ಪಡೆದಿದ್ದ.
ಬಳಿಕ ಮತ್ತೊಮ್ಮೆ 5000 ರೂಪಾಯಿ ಹಣವನ್ನು ಫೋನ್ಪೇ ಮೂಲಕ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದಾನೆ.
ಲಂಚ ಪಡೆಯುವಾಗ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಎಇಇ ಅಧಿಕಾರಿ ಕೆಂಚಪ್ಪರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಈ ವೇಳೆ ಇದ್ದಕ್ಕಿದ್ದಂತೆ ಅಧಿಕಾರಿಯ ಆರೋಗ್ಯದಲ್ಲಿ ಏರುಪೇರಾಗಿದೆ. ನಂತರ ಲಿಂಗಸೂಗೂರು ತಾಲೂಕು ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಯಿತು ಎಂದು ತಿಳಿದುಬಂದಿದೆ.