ಈಡಿಗ(ನಾಮಧಾರಿ) ಸಮಾಜವು ಯಾವುದೇ ಒಬ್ಬ ವ್ಯಕ್ತಿಯ ಮಾವ, ಅಳಿಯ ಮತ್ತು ಅಕ್ಕನ ಮಗಳಿಗೆ ಸೀಮಿತವಲ್ಲ- ಕಾಂಗ್ರೆಸ್ ಮುಖಂಡ ರವೀಂದ್ರ ನಾಯ್ಕ ಗುಡುಗು
ಸಿದ್ದಾಪುರ: ಈಡಿಗ(ನಾಮಧಾರಿ) ಸಮಾಜವು ಮಾವ, ಅಳಿಯ ಮತ್ತು ಅಕ್ಕಳ ಮಗಳಿಗೆ ಸೀಮಿತವಲ್ಲ. ವೈಯಕ್ತಿಕ ಹಿತಾಸಕ್ತಿಯಲ್ಲಿ ಸಮಾಜದ ಲಾಭವನ್ನ ಬಳಸಿಕೊಳ್ಳುತ್ತಿರುವುದು ದುರಾದೃಷ್ಟಕರ ಎಂದು ಸಾಮಾಜಿಕ ಚಿಂತಕ ಹಾಗೂ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಹೇಳಿದರು.

ಅವರು ಇಂದು ಸಿದ್ದಾಪುರ ತಾಲೂಕಿನ ಮನಮನೆ ಗ್ರಾಮದ ಈಶ್ವರಿ ದೇವಾಲಯ ವಾರ್ಷಿಕೋತ್ಸವ ಮತ್ತು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ರಾಮ ಕ್ಷೇತ್ರ ಮಹಾಸಂಸ್ಥಾನದ ಗುರುವಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ. ಮಾತನಾಡುತ್ತಾ ಮೇಲಿನಂತೆ ಹೇಳಿದರು.
ಸಮಾಜದ ಧುರೀಣರು, ಸಮಾಜದಲ್ಲಿನ ಹಿಂದುಳಿದ ಜನರಿಗೆ ಗುರುತಿಸಿ ಅಂತವರ ಅಭಿವೃದ್ಧಿಗೆ ಕಾರ್ಯಪ್ರವರ್ತರಾಗಬೇಕು. ಈಡೀಗ (ನಾಮಧಾರಿ) ಸಮಾಜದ ಲಾಭವನ್ನ ಇತ್ತಿಚಿನ ದಿನಗಳಲ್ಲಿ కుటుంబ ವರ್ಗಕ್ಕೆ ಸೀಮಿತವಾಗುತ್ತಿರುವುದು ಖೇದಕರ ಎಂದು ಅವರು ವಿಷಾದಿಸಿದರು. ಇಂತಹ ಬೆಳವಣಿಗೆಯಿಂದ ಸಮಾಜದ ಬೆಳವಣಿಗೆ ಕುಂಟಿತವಾಗುವುದಲ್ಲದೇ, ಸಮಾಜದ ಒಗ್ಗಟ್ಟಿನ ಅಭಿವೃದ್ಧಿಗೆ ಮಾರಕವಾಗುವುದೆಂದು ವಿಶ್ಲೇಷಣಾತ್ಮಕವಾಗಿ ವಿಶ್ಲೇಷಿಸಿದರು.
ವೇದಿಕೆಯ ಮೇಲೆ ಅವರು ಮಾತನಾಡುವ ಸಂದರ್ಭದಲ್ಲಿ ಹಿರಿಯ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೇಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಸಂತ ನಾಯ್ಕ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ವಿ ಎನ್ ನಾಯ್ಕ ಬೇಡ್ಕಣಿ, ಈಶ್ವರ ನಾಯ್ಕ ಮನಮನೆ, ವಿನಾಯಕ ನಾಯ್ಕ, ಹೊನ್ನಪ್ಪ ರಾಮ ನಾಯ್ಕ, ಸಿ ಆರ್ ನಾಯ್ಕ, ವಿರಭದ್ರ ಮಾಲ್ಯಾ ನಾಯ್ಕ, ಶಾಂತಾರಾಮ ನಾಯ್ಕ, ಜಿಲ್ಲಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ಸಾಮಾಜಿಕ ಚಿಂತಕ ಲೋಹಿತ್ ನಾಯ್ಕ ಕಾನಸೂರ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

