
ಕುಂದಾಪುರ, ನ. 3 — ಹಲವು ವರ್ಷಗಳಿಂದ ಹದಗೆಟ್ಟು ನಿಂತಿದ್ದ ಮದ್ದುಗುಡ್ಡೆ ಪ್ರದೇಶದ ರಸ್ತೆ ಇದೀಗ ಹೊಸ ರೂಪ ಪಡೆದಿದೆ. ಸ್ಥಳೀಯ ನಿವಾಸಿಗಳ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಪುರಸಭೆ ಸದಸ್ಯ ಅಬೂ ಮಹಮ್ಮದ್ ಹಾಗೂ ರಾಘವೇಂದ್ರ ಖಾರ್ವಿ ಅವರು ಸ್ವಯಂಪ್ರೇರಿತ ಸಹಕಾರ ನೀಡಿರುವುದು ಪ್ರದೇಶದ ಜನರಿಗೆ ಹಿತಕಾರಿಯಾಗಿದೆ.

ಪುರಸಭೆ ವ್ಯಾಪ್ತಿಯ ಪ್ರಭಾಕರ್ ಟೈಲ್ಸ್ ಬಳಿ ಇರುವ ಪ್ರಕಾಶ್ ಸೋಮಿಲ್ ಪಕ್ಕದ ರಸ್ತೆ ಕಳೆದ ಅನೇಕ ವರ್ಷಗಳಿಂದ ಹೊಂಡಗುಂಡಿಗಳಿಂದ ತುಂಬಿ ಓಡಾಡಲು ಅಸಾಧ್ಯವಾಗಿತ್ತು. ಮಳೆಗಾಲದಲ್ಲಿ ನೀರು ತುಂಬಿ ಕಷ್ಟದ ಸ್ಥಿತಿ ಎದುರಾಗುತ್ತಿತ್ತು. ನಿವಾಸಿಗಳು ಅನೇಕ ಬಾರಿ ಪುರಸಭೆಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ.

ಈ ಪರಿಸ್ಥಿತಿಯಲ್ಲಿ ಸ್ಥಳೀಯರು ಸಮಾಜ ಸೇವಕ ಮತ್ತು ಪುರಸಭೆ ಸದಸ್ಯ ಅಬೂ ಮಹಮ್ಮದ್ ರವರನ್ನು ಸಂಪರ್ಕಿಸಿದಾಗ ಅವರು ಜನರ ಕಷ್ಟವನ್ನು ಮನದಾಳದಿಂದ ಆಲಿಸಿ ತಕ್ಷಣ ಕ್ರಮ ಕೈಗೊಂಡರು. ರಸ್ತೆ ಅವರ ವಾರ್ಡ್ ವ್ಯಾಪ್ತಿಯಲ್ಲದಿದ್ದರೂ, ಅವರು ಮಾನವೀಯ ದೃಷ್ಟಿಯಿಂದ ಎರಡು ಲೋಡ್ ಶಿಲೆಕಲ್ಲಿನ ಜೆಲ್ಲಿ (ವೆಡ್ ಮೇಟ್) ತಂದು ಕಾಮಗಾರಿಗೆ ನೆರವಾದರು. ಅದೇ ಸಂದರ್ಭದಲ್ಲಿ ವಾರ್ಡಿನ ಕೌನ್ಸಿಲರ್ ರಾಘವೇಂದ್ರ ಖಾರ್ವಿ ಕೂಡ ಒಂದು ಲೋಡ್ ಜೆಲ್ಲಿ ಕಲ್ಲು ನೀಡುವ ಮೂಲಕ ಸಹಕರಿಸಿದರು.
ಈ ಸಹಕಾರದ ಫಲವಾಗಿ ಹಲವು ವರ್ಷಗಳಿಂದ ಕುಂದಾಪುರದ ಮದ್ದುಗುಡ್ಡೆ ನಿವಾಸಿಗಳು ಎದುರಿಸುತ್ತಿದ್ದ ಸಮಸ್ಯೆಗೆ ಕೊನೆಗೂ ಪರಿಹಾರ ದೊರಕಿದೆ. ಜನರು “ಇದು ವರ್ಷಗಳಿಂದ ಕಂಡ ಕನಸು ನನಸಾಗಿದೆ” ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರು ಸಂಪರ್ಕಿಸಿದಾಗ ಕೌನ್ಸಿಲರ್ ಅಬೂ ಮಹಮ್ಮದ್ ಹೇಳಿದರು —
“ರಾಜಕೀಯ ನನ್ನ ಜೀವನದ ಗುರಿಯಲ್ಲ. ಜನರ ಸಮಸ್ಯೆಗಳನ್ನು ಪರಿಹರಿಸುವುದೇ ನಿಜವಾದ ರಾಜಕೀಯ,” ಎಂದು ಅವರು ಹೃತ್ಪೂರ್ವಕವಾಗಿ ಸ್ಪಷ್ಟಪಡಿಸಿದರು.
ಸ್ಥಳೀಯ ನಿವಾಸಿಗಳಾದ ಸಂತೋಷ ಖಾರ್ವಿ, ಕೃಷ್ಣ ಮೆಂಡನ್, ಚೇತನ್ ಖಾರ್ವಿ, ಸಂತೋಷ್ ಮೊಗವೀರ, ಸುಧಾಕರ ಮೊಗವೀರ ಸೇರಿದಂತೆ ಅನೇಕರು ಕಾಮಗಾರಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂತೋಷ ವ್ಯಕ್ತಪಡಿಸಿದರು. ಸ್ಥಳೀಯ ಪತ್ರಕರ್ತರು ಸುರೇಶ್ ಮತ್ತು ಗೋಪಾಲ್ ಕವ್ರಾಡಿಯವರು ಸಹ ಹಾಜರಿದ್ದರು.

