ಹೊನ್ನಾವರ- ಹೊನ್ನಾವರ ತಾಲೂಕಿನ ಗುಂಡಿಬೈಲು ಗ್ರಾಮದ ಗಾಯತ್ರಿ ಗೌಡ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವಿವರಗಳು ಬೆಳಕಿಗೆ ಬಂದಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ಪ್ರೇಮ ಸಂಬಂಧದ ವಿಷಯದಲ್ಲಿ ಉಂಟಾದ ವಿವಾದದಿಂದ ಅವರು ಅತೀವ ನಿರಾಶೆಯಲ್ಲಿದ್ದರು ಎಂದು ತಿಳಿದುಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ, ಗಾಯತ್ರಿ ಗೌಡ ಹಾಗೂ ರಮೇಶ್ ಗೌಡ ಎಂಬ ವ್ಯಕ್ತಿ ಕಳೆದ ಹಲವು ವರ್ಷಗಳಿಂದ ಪರಿಚಿತರಾಗಿದ್ದರು. ಇವರಿಬ್ಬರ ನಡುವೆ ವೈಯಕ್ತಿಕ ಕಲಹ ಉಂಟಾಗಿ ಮನಸ್ಥಾಪದಿಂದ ಅವರು ಜೀವತ್ಯಾಗ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಗಾಯತ್ರಿ ಗೌಡ ಅವರ ತಾಯಿ ಕಾಸರಕೋಡ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಮೃತ ಯುವತಿಯು ಬರೆದಿರುವ ಚೀಟಿಯ ಆಧಾರದ ಮೇಲೆ ಪೊಲೀಸರು ಪ್ರೇಮ ಸಂಬಂಧದ ಅಸಮಾಧಾನವೇ ಸಾವಿಗೆ ಕಾರಣ ಎನ್ನುವ ಕೋನದಲ್ಲೂ ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿಯ ಬಂಧನಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
			