ಹೊನ್ನಾವರ-ಉತ್ತರ ಕನ್ನಡ ಜಿಲ್ಲೆಯ ಸಂಸದ ಹಾಗೂ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ.
ಹೊನ್ನಾವರದಲ್ಲಿ ನಡೆದ ರಾಷ್ಟ್ರೀಯ ಏಕತಾ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರಗೀತೆ ಜನಗಣಮನ ಕುರಿತ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಾಗೇರಿ ಅವರ ಮಾತುಗಳಲ್ಲಿ, “ನಾವು ಪ್ರತಿ ದಿನ ಹಾಡುವ ಜನಗಣಮನ ಗೀತೆ ಮೊದಲಿಗೆ ಬ್ರಿಟಿಷರ ಸ್ವಾಗತಕ್ಕಾಗಿ ಬರೆಯಲ್ಪಟ್ಟಿತ್ತು ಎಂಬ ಮಾತು ಇತಿಹಾಸದಲ್ಲಿ ಇದೆ” ಎಂದು ಹೇಳಿದ್ದಾರೆ.ಈ ರೀತಿ ಹೇಳುವ ಮೂಲಕ ಸಂಸದ ವಿಶ್ವವೇಶ್ವರ ಹೆಗಡೆ ಕಾಗೇರಿ ಅವರು ರಾಷ್ಟ್ರ ಗೀತೆಗೆ ಅವಮಾನ ಮಾಡಿದ್ರ ಎಂಬ ಮಾತು ಕ್ಷೇತ್ರದ ಜನರಿಂದ ಕೇಳಿ ಬರುತ್ತಿದೆ.ಅವರು ಮುಂದೆ “ವಂದೇ ಮಾತರಂ ಗೀತೆಗೆ ಸಹ ಸಮಾನ ಗೌರವ ಇದೆ. ನಮ್ಮ ಪೂರ್ವಜರು ಎರಡನ್ನೂ ಗೌರವಿಸುವ ನಿರ್ಧಾರ ಮಾಡಿದ್ದರು. ಅದರಿಂದ ಇಂದಿನ ರಾಷ್ಟ್ರಗೀತೆ ಮತ್ತು ವಂದೇ ಮಾತರಂ ಎರಡೂ ನಮ್ಮ ರಾಷ್ಟ್ರೀಯ ಭಾವನೆಗಳ ಸಂಕೇತವಾಗಿದೆ” ಎಂದರು.
ಅವರು ಇನ್ನೂ ಹೇಳಿದರು, “ವಂದೇ ಮಾತರಂ ಗೀತೆ ಸ್ವಾತಂತ್ರ್ಯ ಚಳುವಳಿಯ ಹೃದಯವಾಗಿತ್ತು. ಈಗ RSS ಶತಮಾನೋತ್ಸವದ ಪ್ರಯುಕ್ತ ದೇಶದೊಳಗೆ ವಂದೇ ಭಾರತದ ಭಾವನೆ ಪುನರುಜ್ಜೀವನಗೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.
ಕಾಗೇರಿ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಹಲವರು ರಾಷ್ಟ್ರಗೀತೆಯ ಇತಿಹಾಸ ಮತ್ತು ಅದರ ಗೌರವದ ಕುರಿತಂತೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

