ಪ್ರಿಯಕರನನ್ನು ಲಾಡ್ಜ ಗೆ ಕರೆದು ಕೊಲೆ ಮಾಡಿದ
ಪ್ರಿಯತಮೆ
ಭದ್ರಾವತಿ-ಪ್ರೀಯತಮೆಯೇ ಪ್ರಿಯಕರನನ್ನು ಕೊಲೆ ಮಾಡಿದ ಘಟನೆ ಭದ್ರಾವತಿ ಪಟ್ಟಣದ ಹೇರಿಟೇಜ್ ಲಾಡ್ಜ್ ನಲ್ಲಿ ನಡೆದಿದ್ದು, ಹಾಸನ ಜಿಲ್ಲೆ ಚನ್ನರಾಯನಪಟ್ಡಣ ಮೂಲದವರದ ಪರ್ವೆಜ್ ಖಾನ್ ಮೃತಪಟ್ಟ ವ್ಯಕ್ತಿ. ಪರ್ವೆಜ್ ಖಾನ್‌ನನ ಕುತ್ತಿಗೆ ಭಾಗ ಭೀಕರವಾಗಿ ಹಲ್ಲೆ ಮಾಡಲಾಗಿತ್ತು
ಈ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವುದಾಗಿ ತಿಳಿದುಬಂದಿದೆ. ಬ್ಯಾಗ್ ಕಾಣೆಯಾಗಿದೆ ಒಂದು ರಾತ್ರಿಗೆ ರೂಂ ಬೇಕೆಂದು ಜನವರಿ 12 ಗುರುವಾರ ರಾತ್ರಿ 11 ಗಂಟೆಗೆ ಲಾಡ್ಜ್ ನಲ್ಲಿ ರೂಂ ಮಾಡಿದ್ದರು. ಬೆಳಗಿನ ಜಾವ ಬ್ಯಾಗ್ ಸಿಕ್ಕ ಮಾಹಿತಿ ಬಂದಿದೆ. ಗಂಡ ಮದ್ಯ ಸೇವಿಸಿ ಮಲಗಿರುವುದಾಗಿ ಹೇಳಿ ತೆರಳಿದಳು. ಬೆಳಗ್ಗೆ 11 ಗಂಟೆಗೆ ಲಾಡ್ಜ್ ಸಿಬ್ಬಂದಿ ಕಿಟಕಿ ಮೂಲಕ ಒಳಗೆ ನೋಡಿದಾಗ ಪರ್ವೇಜ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.
ಮೃತನ ತಾಯಿ, ತಂಗಿ ಲಾಡ್ಜ್ ಗೆ ಭೇಟಿ ನೀಡಿದ್ದು, ತನ್ನ ಮಗನನ್ನು ಮೋಸದಿಂದ ಕೊಲೆ ಮಾಡಿರುವುದಾಗಿ ತಾಯಿ ಶಕೀಲಾ ಆರೋಪಿಸಿದ್ದಾರೆ. ನನ್ನ ಬಳಿ ಒಂದೂವರೆ ಲಕ್ಷ ರೂಪಾಯಿ ಹಣವಿದೆ. ಬೇರೆ ಮನೆ ಮಾಡುತ್ತೇನೆ. ನನ್ನ ಜತೆ ಇದ್ದು ಬಿಡು ಎಂದು ನಂಬಿಸಿ ಕರೆಸಿದ್ದಾಳೆ. ಇಲ್ಲಿಗೆ ಬರುವ ಮುಂಚೆ ಮಗನ ಸಿಮ್ ಅನ್ನು ತುಂಡು ಮಾಡಿ ಕರೆದುಕೊಂಡು ಬಂದಿದ್ದಾಳೆ ಎಂದು ತಾಯಿ ಶಕೀಲಾ ಆರೋಪಿಸಿದ್ದಾರೆ.
ಪೊಲೀಸರು ಇನ್ನು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.