ಅಂತರಾಷ್ಟ್ರೀಯ ಮಟ್ಟದ ಈಜುಪಟುವಾಗಿ ಸಾಧನೆ ಮಾಡಿದ ಶ್ರೀಮತಿ ವಿಜೇತ ಪೈ ಅವರಿಗೆ
ಯುವ ಭಾರತ್ ಪುರಸ್ಕಾರ ಪ್ರಶಸ್ತಿ
ಕಾರ್ಕಳ-ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಮನ್ವಂತರ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆದ ಯುವ ಚಿಂತನ ಕಾರ್ಯಕ್ರಮದಲ್ಲಿ ಯುವ ಭಾರತ್ ಪುರಸ್ಕಾರವನ್ನು ಸಾಧಕರಿಗೆ ನೀಡಿ ಗೌರವಿಸಲಾಯಿತು.
ಸಮಾಜದ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ಸಾಧಕರನ್ನ ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು
ಕ್ರೀಡಾ ಕ್ಷೇತ್ರದಲ್ಲ ಅಂತರಾಷ್ಟ್ರೀಯ ಮಟ್ಟದ ಈಜುಪಟುವಾಗಿ ಸಾಧನೆ ಮಾಡಿದ ಶ್ರೀಮತಿ ವಿಜೇತ ಪೈ
ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಶ್ರೀ ನಾಗರಾಜ್ ಶೆಟ್ಟಿ ಎಸ್ ಆರ್ ಶಿಕ್ಷಣ ಸಂಸ್ಥೆ ಹೆಬ್ರಿ .
ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದಂತ ಶ್ರೀ ದಿವಾಕರ್ ಶೆಟ್ಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲ್ಯಾಂಪ್ ಸೊಸೈಟಿ ಕಾರ್ಕಳ .
ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದಂತ ಶ್ರೀ ಗಿರೀಶ್ ರಾವ್ ಸಂಸ್ಥಾಪಕರು ಛತ್ರಪತಿ ಪೌಂಡೇಶನ್.
ಈ ನಾಲ್ಕು ಜನ ಸಾಧಕರಿಗೆ ಯುವ ಭಾರತ್ ಪುರಸ್ಕಾರವನ್ನು ಮಂಗಳೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರು ಶ್ರೀ ಸ್ವಾಮಿ ಚಿತ ಕಾಮನಂದಾಜಿ ಮಹಾರಾಜ್ ಹಾಗೂ ಖ್ಯಾತ ಚಿಂತಕ ಬರಹಗಾರ ಚಕ್ರವರ್ತಿ ಸೂಲಿಬೆಲೆ ರವರಿಂದ ಸ್ವೀಕರಿಸಿದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗಣೇಶ್ ಕಾರ್ಣಿಕ್ ವಿಧಾನ ಪರಿಷತ್ ಸದಸ್ಯರು ವಹಿಸಿದ್ದರು .ಮುಖ್ಯ ಅತಿಥಿಗಳಾಗಿ ಶ್ರೀ ನಿತ್ಯಾನಂದ ಪೈ ಹಾಗೂ ಕೆ ಪಿ ಶೆಣೈ .ಮಂಗಳೂರು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಹಾಗೂ ಮನ್ವಂತರ ಶಿಕ್ಷಣ ಪ್ರತಿಷ್ಠಾನದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು