ಭಟ್ಕಳದ ಕಡವಿನಕಟ್ಟೆಯಲ್ಲಿ ಚಿರತೆ ಪ್ರತ್ಯಕ್ಷ ಸ್ಥಳಕ್ಕೆ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸoರಕ್ಷಣ ಕಾರ್ಯಪಡೆ ಸಮಿತಿ ಅಧ್ಯಕ್ಷ ಗೋವಿಂದ ನಾಯ್ಕ ಭೇಟಿ
*ಭಟ್ಕಳ-ಭಟ್ಕಳದ ಕಡವಿನಕಟ್ಟೆಯಲ್ಲಿ ಚಿರತೆ ಪ್ರತ್ಯಕ್ಷ ಆಗಿದ್ದು ಅಲ್ಲಿಯ ಜನರು ತುಂಬಾ ಭಯಬಿತರಾಗಿದ್ದಾರೆ , ನಿನ್ನೆ ಕೂಡ ಚಿರತೆ ದಾಳಿಗೆ ಒಂದು ದನ ಬಲಿಯಾಗಿತ್ತು, ಅಲ್ಲಿಯ ಭಾಗದ ಜನರು ಮನೆ ಬಿಟ್ಟು ಹೊರಗೆ ಬಾರದಂತೆ ಜನರಲ್ಲಿ ಬಾರಿ ಆತಂಕ ಹುಟ್ಟುಕೊಂಡಿದೆ .ಇದನ್ನು ತಿಳಿದ ಕೂಡಲೇ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸoರಕ್ಷಣ ಕಾರ್ಯಪಡೆಯ ಸಮಿತಿಯ ಅಧ್ಯಕ್ಷರಾದ ಶ್ರೀ ಗೋವಿಂದ ನಾಯ್ಕ್ ಅವರು ಅಲ್ಲಿಯ ಜನರ ರಕ್ಷಣೆಗಾಗಿ ಕೂಡಲೇ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿ ದಾಳಿ ನಡೆದ ಸ್ಥಳಕ್ಕೆ ಭೇಟಿ ಮಾಡಿ ಅರಣ್ಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಪರಿಶೀಲನೆ ನಡೆಸಿ, ಮತ್ತು ಅಲ್ಲಿಯ ಜನರನ್ನು ಮಾತನಾಡಿಸಿ ಧೈರ್ಯ ತುಂಬುವ ಕೆಲಸ ಮಾಡಿದರು.ಚಿರತೆ ಪಂಜರವನ್ನು ವ್ಯವಸ್ಥೆ ಮಾಡಿಸಿ ಚಿರತೆ ಹಿಡಿಯುವ ಕಾರ್ಯ ಕೂಡಲೇ ಪ್ರಾರಂಭ ಮಾಡುವಂತೆ ಅರಣ್ಯ ಅಧಿಕಾರಿಗಳಿಗೆ ತಿಳಿಸಿದರು.