1.8 ಕಿ.ಮಿ ಸಂಪೂರ್ಣ ರಸ್ತೆ ಮಾಡಿ ಕೊಡಿ ಎಂದು ಕೇಳಿದ ಗ್ರಾಮಸ್ಥರಿಗೆ ಆವಾಜ್ ಹಾಕಿದ ಭಟ್ಕಳ ಶಾಸಕ ಸುನೀಲ್ ನಾಯ್ಕ
ಭಟ್ಕಳ-ಶಾಸಕರಿಗೆ ರಸ್ತೆ ಪೂರ್ಣ ಮಾಡಿಕೊಡಿ ಎಂದು ಗ್ರಾಮಸ್ಥರು ಕೇಳಿದ್ದಕ್ಕೆ ಬೆದರಿಕೆ ಹಾಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೈಲೂರು ಗ್ರಾಮದಲ್ಲಿ ನಡೆದಿದೆ. ಕೇವಲ 800 ಮೀ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲು ಆಗಮಿಸಿದ್ದ ಭಟ್ಕಳ ಶಾಸಕ ಸುನೀಲ್ ನಾಯ್ಕರಿಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದು ಗ್ರಾಮದ 1.8 ಕಿಮೀ ರಸ್ತೆ ಹಾಳಾಗಿದ್ದು, ಸಂಪೂರ್ಣ ರಸ್ಟೇ ಸರಿಪಡಿಸಿಕೊಡುವಂತೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಸರಿಪಡಿಸಿಕೊಡದೇ ಕೇವಲ 800 ಮೀಟರ್ ರಸ್ತೆಗೆ ಭೂಮಿ ಪೂಜೆ ನೆರವೇರಿಸಲು ಆಗಮಿಸಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಭೂಮಿ ಪೂಜೆ ಮಾಡದಂತೆ ಪ್ರತಿಭಟಿಸಿದ್ದಾರೆ. ಈವೇಳೆ ಸಿಟ್ಟಿಗೆದ್ದ ಶಾಸಕ ಸುನಿಲ್ ನಾಯ್ಕ ಯಾವಾಗ ಅಭಿವೃದ್ಧಿ ಮತ್ತು ರಸ್ತೆ ಮಾಡಬೇಕು ನನಗೆ ಗೊತ್ತಿದೆ, ನಾನು ಮಾಡೋದು ಇಷ್ಟು, ನಾನು ಶಾಸಕ, ರಸ್ತೆ ಮಾಡಲು ನನಗೆ ಯಾವ ದೊಡ್ಡ ನಾಯಕನ ಅಪ್ಪಣೆ ಬೇಕಿಲ್ಲ, ತಾಕತ್ತಿದ್ದರೆ ಭೂಮಿ ಪೂಜೆ ನಿಲ್ಲಿಸಿ ಎಂದು ಗ್ರಾಮಸ್ಥರಿಗೆ ಆವಾಜ್ ಹಾಕಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ
ಈ ಬಗ್ಗೆ ಸ್ಪಷ್ಟನೆ ನೀಡಿದ ಶಾಸಕರು ಈ ಗ್ರಾಮಕ್ಕೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ತರಲಾಗಿದೆ. ಇಂದು 800 ಮೀಟರ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು .ಆದ್ರೆ ಕಾಂಗ್ರೆಸ್ ಕಾರ್ಯಕರ್ತರು ಭೂಮಿ ಪೂಜೆ ನೆರವೇರಿಸಲು ಅಡ್ಡಿಪಡಿಸಿದರು, ಈ ರೀತಿ ಯಾವಾಗ ರಸ್ತೆ ಮಾಡಬೇಕು ನನಗೆ ಗೊತ್ತಿದೆ, ನಾನು ಮಾಡೋದು ಇಷ್ಟು,ನಾನು ಶಾಸಕ, ರಸ್ತೆ ಮಾಡಲು ನನಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ,ತಾಕತ್ತಿದ್ದರೆ ಭೂಮಿ ಪೂಜೆ ನಿಲ್ಲಿಸಿ ಎಂದು ಹೇಳಿದ್ದೇನೆ ಎಂದರು.