ಮಾರ್ಚ 1 ರಂದು ಮುರುಡೇಶ್ವರದಲ್ಲಿ ನಡೆಯುವ ಭಟ್ಕಳ ತಾಲೂಕಾ 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ
ಲಾಂಛನವನ್ನು ಬಿಡುಗಡೆಗೊಳಿಸಿದ ಭಟ್ಕಳ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್.
ಭಟ್ಕಳ-ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಮಾರ್ಚ ಒಂದನೇ ತಾರೀಖಿನ ಬುಧವಾರದಂದು ನಡೆಯಲಿರುವ ಭಟ್ಕಳ ತಾಲೂಕಾ 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ
ಲಾಂಛನವನ್ನು ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್. ಇಂದು ಬೆಳ್ಳಿಗೆ ತಮ್ಮ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಅಶೋಕ ಭಟ್, ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ, ಕಸಾಪ ಕೋಶಾಧ್ಯಕ್ಷ ಶ್ರೀಧರ ಶೇಟ್, ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್,ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾದ ವೆಂಕಟೇಶ ನಾಯ್ಕ ಆಸರಕೇರಿ, ಸಂತೋಷ ಆಚಾರ್ಯ, ಕೃಷ್ಣ ಮೊಗೇರ್, ಸಾಹಿತಿ ಪ್ರೋ.ಆರ್.ಎಸ್.ನಾಯಕ, ಲಾಂಛನ ಚಿತ್ರಕಾರ ಸಂಜಯ ಗುಡಿಗಾರ ಮುಂತಾದವರು ಉಪಸ್ಥಿತರಿದ್ದರು.