ಕರ್ನಾಟಕ ವಿಧಾನಸಬೆಗೆ ಮೇ 10 ರಂದು ಚುನಾವಣೆ, -ಮೇ 13 ರಂದು ಫಲಿತಾಂಶ
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಮುಖ್ಯ ಚುನಾವಣೆ ಆಯುಕ್ತ ರಾಜೀವ ಕುಮಾರ ಮತದಾನ ಮತ್ತು ಚುನಾವಣೆಯ ಇತರ ಪ್ರಕ್ರಿಯೆಗಳ ದಿನಾಂಕವನ್ನು ಪ್ರಕಟಿಸಿದರು.
ಚುನಾವಣೆ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬಂದಿದೆ. ಮತದಾನ ಮೇ10 ರಂದು ನಡೆಯಲಿದ್ದು, ಮತ ಎಣಿಕೆ ಮೇ.13 ರಂದು ನಡೆಯಲಿದೆ. ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಆಯೋಗ ನಿರ್ಧರಿಸಿದೆ.ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24 ನಾಮಪತ್ರ ವಾಪಸು ಪಡೆಯಲು ಕೊನೆದಿನವಾಗಿದೆ
ಮೇ 24ಕಕ್ಕೆ 15ನೇ ವಿಧಾನಸಭೆ ಅವಧಿ ಮುಕ್ತಾಯವಾಗಲಿದೆ. ಚುನಾವಣೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರ್ನಾಟಕದಲ್ಲಿ 5 ಕೋಟಿ 21 ಲಕ್ಷ ಮತದಾರರಿದ್ದಾರೆ. ಪುರುಷ ಮತದಾರರು-2,63,43,561, ಮಹಿಳೆಯರು 2,59,26,319 ಮತದಾರರಿದ್ದಾರೆ. ತೃತೀಯಲಿಂಗಿಗಳು 4,699 ಮತದಾರರು ಇದ್ದಾರೆ. 12.15 ಲಕ್ಷ ಯುವ ಮತದಾರರಿದ್ದಾರೆ. 18-19 ವರ್ಷದ ವಯಸ್ಸಿನ ಮತದಾರರ ಸಂಖ್ಯೆ 9,17,241.