*ಬಡವರಿಗೂ ಕುಡಿಯುಲು ಶುದ್ಧ ನೀರು ಸಿಗಬೇಕು: ಅನಂತಮೂರ್ತಿ ಹೆಗಡೆ*
*ದಾಂಡೇಲಿ*: ಬಡವರಿಗೆ ಮತ್ತು ಪ್ರಯಾಣಿಕರಿಗೆ ಶುದ್ಧ ಕುಡಿಯುವ ನಿರು ಪೋರೈಸಬೇಕೆನ್ನುವ ಸುದುದ್ದೇಶದಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶ್ರೀ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರಾದ ಅನಂತಮೂರ್ತಿ ಹೆಗಡೆಯವರು ದಾಂಡೇಲಿ ಕೆಂದ್ರ ಬಸ್ ನೀಲ್ದಾಣಕ್ಕೆ ಕೊಡುಗೆ ನೀಡಿ, ಗುರುವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನಂತಮೂರ್ತಿ ಹೆಗಡೆಯವರು ಜಿಲ್ಲೆಯ ಶಾಲಾ ಕಾಲೇಜು, ಆಸ್ಪತ್ರೆ ಮತ್ತು ಬಸ್ ನಿಲ್ದಾಣಗಳಲ್ಲಿ ನೂರಕ್ಕೂ ಹೆಚ್ಚು ಶುದ್ಧ ಕುಡಿಯುವ ನಿರಿನ ಘಟಕವನ್ನು ನಮ್ಮ ಟ್ರಸ್ಟ್ ವತಿಯಿಂದ ಕೊಡುಗೆಯಾಗಿ ನೀಡಿದ್ದೇವೆ. ಅದರಂತೆ ದಾಂಡೇಲಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಇಂದು ಉದ್ಘಾಟಿಸಿದ್ದೇವೆ. ಎಲ್ಲರಿಗೂ ಸಮಬಾಳು ಎಲ್ಲರಿಗೂ ಸಮಪಾಲು ಎನ್ನುವ ಧ್ಯೇಯೋದ್ದೇಶ ನಾವು ಹೊಂದಿದ್ದೇವೆ. 20 ರೂ ಕೊಟ್ಟು ಬಡವರಿಗೆ ಶುದ್ಧ ಕುಡಿಯುವ ನೀರನ್ನು ಕೊಳ್ಳಲು ಆಗುವುದಿಲ್ಲ. ಈ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸುವ ಕಾರ್ಯಕ್ಕೆ ಶ್ರೀ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮುಂದಾಗಿದ್ದೇವೆ ಎಂದರು.
ಡಿಪೋ ವ್ಯವಸ್ಥಾಪಕ ಎಲ್. ಹೆಚ್. ರಾಠೋಡ ಮಾತನಾಡಿ ಅನಂತಮೂರ್ತಿ ಹೆಗಡೆಯವರು ಕರೆ ಮಾಡಿ ಕೇಂದ್ರ ಬಸ್ ನಿಲ್ದಾಣಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸುತ್ತೇವೆ ಎಂದಾಗ ನಾವು ಸಂತಸದಿಂದ ಒಪ್ಪಿಕೊಂಡೇವು. ಅದರಂತೆ ಇಂದು ಸ್ವತಃ ದಾಂಡೇಲಿಗೆ ಆಗಮಿಸಿ ಘಟಕ ಉದ್ಘಾಟಿಸಿದ್ದಾರೆ. ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ಸಿಗಬೇಕೆನ್ನುವ ಅವರ ಸದುದ್ದೇಶ ಮೆಚ್ಚುವಂತಹದ್ದು ಎಂದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಅಭಿಮಾನಿ ಸೇನೆ (ಭೀಮಧ್ವನಿ ) ಸಂಘದ ಅಧ್ಯಕ್ಷ ರವಿಕುಮಾರ ಮಾಳಕರಿ, ಕಾಳಿ ಉತ್ಸವ ಸಮಿತಿ ಅಧ್ಯಕ್ಷ ಇಲಿಯಾಸ ಕಾಟಿ, ಮಹಾಬಳೇಶ್ವರ ಹೆಗಡೆ.. ಬಶೀರ್ ಮೊದಲಾದವರು ಇದ್ದರು.