ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ- ಸಾಮಾಜಿಕ ಹೋರಾಟಗಾರ , ವಕೀಲ ರವೀಂದ್ರ ನಾಯ್ಕ ‘ಕೈ’ ಹಿಡಿಯಲಿದೆಯೇ?
ಭಟ್ಕಳ: ಕಳೆದ ಐದು ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಕಾಂಗ್ರೇಸ್ ಪಕ್ಷ ಮುಂದಿನ ಎಪ್ರಿಲ್- ಮೇದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಹೋರಾಟಗಾರ ರವೀಂದ್ರ ನಾಯ್ಕ ಅವರನ್ನ ಕಾಂಗ್ರೇಸ್ ಪಕ್ಷ ಸ್ಫರ್ಧಾ ಕಣದಲ್ಲಿ ನಿಲ್ಲಿಸುವುದೇ? ಎಂಬ ಚರ್ಚೆ ಜಿಲ್ಲಾದ್ಯಂತ ನಡೆಯುತ್ತಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತನ್ನದೇ ಆದಂತಹ ಹೋರಾಟ, ಸಂಘಟನೆ ಮೂಲಕ ಚಿರಪರಿಚಿತರಾಗಿದ್ದು, ಕಳೆದ ೩೫ ವರ್ಷದಿಂದ ಜಿಲ್ಲೆಯ ಜ್ವಲಂತ ಸಮಸ್ಯೆಗಳಲ್ಲಿ ಒಂದಾದ ಅರಣ್ಯ ಅತಿಕ್ರಮಣದಾರರಿಗೆ ಬೆನ್ನೆಲುಬಾಗಿ ನಿಂತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾನು ಒಬ್ಬ ಆಕಾಂಕ್ಷಿ ಎಂದು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೇಸ್ ಪಕ್ಷ ರವೀಂದ್ರ ನಾಯ್ಕರ ‘ಕೈ’ ಹಿಡಿಯಿಲಿದೆಯೇ? ಎಂಬ ಚರ್ಚೆಗೆ ಕಾರಣವಾಗಿದೆ.
ಆರ್ಥೀಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಸಮಸ್ಯೆಗಳಲ್ಲಿ ಸ್ಫಂದಿಸುತ್ತಾ, ಹೋರಾಟವೇ ಸಮಸ್ಯೆಗೆ ಪರಿಹಾರ ಎಂದು ನಿರಂತರ ೩೫, ವರ್ಷ ಕಾಂಗ್ರೇಸ್ ಪಕ್ಷದ ಸದಸ್ಯನಾಗಿ ಹೋರಾಟ ಮಾಡಿಕೊಂಡು ಬಂದಿರುವುದು ದಾಖಲಾರ್ಹ. ಹೋರಾಟದಲ್ಲಿ ಅನಕ್ಷರಸ್ಥ, ಗುಡ್ಡಗಾಡು ಜನರಲ್ಲಿ ಸಾಮಾಜಿಕ ಪ್ರಜ್ಞೆ ಬೆಳೆಸಿ ಅಂತವರಲ್ಲಿ ಹೋರಾಟದ ಮನೋಭಾವನೆಯನ್ನು ಬೆಳೆಸಿ ಹಕ್ಕಿಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಮಾಡಿದ ಹೋರಾಟವು ಜಿಲ್ಲೆಯ ಇತಿಹಾಸದಲ್ಲಿ ದಾಖಲಾರ್ಹ. ಇಂತಹ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಕನಸೆಂಬ ಸ್ಥಿತಿಯಲ್ಲಿ ಇರುವ ಕಾಂಗ್ರೇಸ್ ಪಕ್ಷವು ರವೀಂದ್ರ ನಾಯ್ಕರನ್ನ ಅಭ್ಯರ್ಥಿಯನ್ನಾಗಿ ಮಾಡುವಲ್ಲಿ ಗಂಭೀರವಾಗಿ ಚಿಂತಿಸುತ್ತಿರುವುದು ಅವರ ಸ್ಫರ್ಧೆಯ ಮಹತ್ವವನ್ನು ಹೆಚ್ಚಿಸಿದೆ ಎಂದರೇ ತಪ್ಪಾಗಲಾರದು.
ಪಕ್ಷದ ಆಂತರಿಕ ಸಮಿಕ್ಷೆ ಮತ್ತು ಜನಾಭಿಪ್ರಾಯವು ಜನಪರ ಅಭ್ಯರ್ಥಿಯನ್ನ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಮಾಡಿದ್ದಲ್ಲಿ ಮಾತ್ರ ಬಿಜೆಪಿಯ ಗಂಡು ಮೆಟ್ಟಿನ ಕ್ಷೇತ್ರದಲ್ಲಿ ‘ಕೈ’ ಬಾವುಟ ಹಾರಿಸಲು ಸಾಧ್ಯ ಎಂಬ ಅಭಿಪ್ರಾಯ ಇದೆ. ದೊಡ್ಡ ಸಮಾಜಕ್ಕೆ ಸೇರಲ್ಪಟ್ಟು, ಬಹುಸಂಖ್ಯಾತ ಅರಣ್ಯವಾಸಿಪರ ಹೋರಾಟ ಮಾಡಿದ ರವೀಂದ್ರ ನಾಯ್ಕರ ಹೆಸರು ಕಾಂಗ್ರೇಸ್ ಪಕ್ಷದಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿದು ಬಂದಿದೆ.
ರವೀಂದ್ರ ನಾಯ್ಕ V/S ಅಂಜಲಿ ಲಿಂಬಾಳ್ಕರ್
ಸಹಜವಾಗಿ ಹಿರಿತನದಲ್ಲಿ ಆರ್.ವಿ ದೇಶಪಾಂಡೆ ಅವರ ಹೆಸರು ಮುಂಚೂಣಿಯಲ್ಲಿ ಇದೆ. ಆದರೆ, ಅವರ ಸಮ್ಮತಿ ಇಲ್ಲದಿರುವುದರಿಂದ ಬದಲಿ ಅಭ್ಯರ್ಥಿ ಕಾಂಗ್ರೇಸ್ಗೆ ಅನಿವಾರ್ಯ. ೨೦೨೪ ರ ಲೋಕಸಭಾ ಚುನಾವಣೆಗೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳ ಅಂತಿಮ ಯಾದಿಯಲ್ಲಿ ಬಹುಸಂಖ್ಯಾತ ಮತ್ತು ಉತ್ತರ ಕನ್ನಡ ಜಿಲ್ಲೆಯ ನಿವಾಸಿಯನ್ನ ಅಭ್ಯರ್ಥೀಯನ್ನಾಗಿ ಮಾಡಬೇಕಾದ್ದಲ್ಲಿ ರವೀಂದ್ರ ನಾಯ್ಕರ ಹೆಸರು ಮುಂಚೂಣಿಯಲ್ಲಿದ್ದರೆ, ಮರಾಠ ಮತ್ತು ಮಹಿಳಾ ಅಭ್ಯರ್ಥಿಗೆ ಟಿಕೇಟ್ ಮೀಸಲಿದ್ದರೇ ಖಾನಾಪುರದ ಮಾಜಿ ಶಾಸಕಿ ಅಂಜಲಿ ಲಿಂಬಾಳ್ಕರ್ ಹೆಸರು ಚಾಲ್ತಿಯಲ್ಲಿದೆ. ಅಂತಿಮ ಆಯ್ಕೆ ಪಕ್ಷಕ್ಕೆ ಸೇರಿದ್ದಾಗಿದ್ದರೂ, ಪಕ್ಷ ಗೆಲ್ಲುವ ಅಭ್ಯರ್ಥಿಯ ಆಯ್ಕೆ ಮಾಡಿದ್ದರೇ ಮಾತ್ರ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ‘ಕೈ’ ಬಾವುಟ ಹಾರುವುದು. ಇಲ್ಲದಿದ್ದರೇ ನಾಲ್ಕು ಶಾಸಕರೊಂದಿಗೆ ರಾಜ್ಯದಲ್ಲಿ ಸರಕಾರದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿದ್ದರೂ ಮೋದಿ ಅಲೆಗೆ ಕಾಂಗ್ರೇಸ್ ಪಕ್ಷ ಬಿಜೆಪಿಗೆ ಶರಣಾಗುವುದರಲ್ಲಿ ಸಂಶಯವಿಲ್ಲ.