ಅಂಜುಮನ್ ಕಲಾ ವಾಣಿಜ್ಯ ವಿಜ್ಞಾನ ಮಹಾ ವಿದ್ಯಾಲಯ ಹಾಗೂ ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ.
ಭಟ್ಕಳ: ಇಲ್ಲಿನ ಹಡೀಲಿನ ಸ.ಹಿ.ಪ್ರಾ.ಶಾಲೆಯಲ್ಲಿ ಅಂಜುಮನ್ ಕಾಲೇಜಿನ ವತಿಯಿಂದ ನಡೆದ ಎನ್ಎಸ್ಎಸ್ ಶಿಬಿರದಲ್ಲಿ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ತಾಲೂಕಿನ ಇತಿಹಾಸದ ಕಿರು ನೋಟ, ಹಾಗೂ ಸೌಹಾರ್ಧತೆಯಲ್ಲಿ ಮಾಧ್ಯಮಗಳ ಪಾತ್ರ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು ಭಟ್ಕಳ ತಾಲೂಕಿನ ಇತಿಹಾಸದ ಕಿರುನೋಟದ ಕುರಿತು ಸಾಹಿತಿ ಶ್ರೀಧರ್ ಶೇಟ್ ಉಪನ್ಯಾಸ ನೀಡಿ ರಾಣಿ ಚೆನ್ನಭೈರಾದೇವಿಯ ಆಳ್ವಿಕೆಯ ಕುರಿತು, ಹಾಗೂ ಜೈನಮುನಿ, ವ್ಯಾಕರಣಕಾರ ಭಟ್ಟಾಕಳಂಕನಿಂದಾಗಿ ಭಟ್ಕಳ ಎಂಬ ಹೆಸರು ಬಂದಿರುವ ಹಿನ್ನೆಲೆಯನ್ನು ತಿಳಿಸಿದರಲ್ಲದೇ ಪ್ರಪಂಚದ ಇತಿಹಾಸದ ಜೊತೆಗೆ ನಮ್ಮ ನೆಲದ ಇತಿಹಾಸವನ್ನೂ ಅರಿಯಬೇಕು ಎಂದು ತಿಳಿಸಿದರು. ಪತ್ರಕರ್ತ ಎಂಆರ್ ಮಾನ್ವಿ ಸೌಹಾರ್ದತೆಯಲ್ಲಿ ಮಾಧ್ಯಮಗಳ ಪಾತ್ರದ ಕುರಿತು ಮಾತನಾಡಿದರು.ಎನ್.ಎಸ್.ಎಸ್.ಯೋಜನಾ ಅಧಿಕಾರಿ, ಉಪನ್ಯಾಸಕ, ಸಾಹಿತಿ ಪ್ರೊ. ಆರ್ ಎಸ್ ನಾಯಕ್ ಪ್ರಸ್ತಾವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಜುಮನ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಭಾಗದ ಮುಖ್ಯಸ್ಥ ಪ್ರೊ. ಉಮೇಶ್ ಮೆಸ್ತ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಂಜುಮನ್ ಕಾಲೇಜ್ ನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.