ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಚಿತ್ರಾಪುರ ಶ್ರೀವಲ್ಲಿ ಪ್ರೌಢಶಾಲೆಯ ಮೋನಿಕಾ ನಾಯ್ಕ ದ್ವಿತೀಯ ಸ್ಥಾನ
ಭಟ್ಕಳ- ಅಂಕೋಲಾದ ಸೆಟಗೇರಿಯ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯನ್ನು ಚಿತ್ರಾಪುರದ ಶ್ರೀವಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
” ಇಂದಿನ ಗ್ಯಾರಂಟಿ ಯೋಜನೆಗಳು ನಾಡಿನ ಜನತೆಗೆ ಒಂದು ಶಾಪ” ಎಂಬ ವಿಷಯದ ಬಗ್ಗೆ ಪರ ಹಾಗೂ ವಿರೋಧ ಕುರಿತು ಚರ್ಚಾ ಸ್ಪರ್ಧೆ ಎರ್ಪಡಿಸಲಾಗಿದ್ದು, ಗ್ಯಾರಂಟಿ ಯೋಜನೆ ಶಾಪ ಎಂಬ ವಿಷಯವಾಗಿ ಮಾತನಾಡಿದ ಕುಮಾರಿ ಮೋನಿಕಾ ಜಯಕರ ನಾಯ್ಕ ಜಿಲ್ಲೆಗೆ ದ್ವಿತೀಯ ಬಹುಮಾನ ಪಡೆದು ನಾಲ್ಕು ಸಾವಿರ ರೂಪಾಯಿ ನಗದು ಬಹುಮಾನ ಪಡೆಕೊಂಡರೆ, ಗ್ಯಾರಂಟಿ ಯೋಜನೆ ಶಾಪ ಎಂಬುದರ ವಿರೋಧವಾಗಿ ಮಾತನಾಡಿದ ಕುಮಾರ ಚರಣ ನಾಗಪ್ಪ ನಾಯ್ಕ ಐದನೇ ಸ್ಥಾನವನ್ನು ಪಡೆದುಕೊಂಡಿರುತ್ತಾನೆ.
ಜಿಲ್ಲೆಯಿಂದ ಸುಮಾರು ಮೂವತ್ತೆರಡು ವಿದ್ಯಾರ್ಥಿಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇಬ್ಬರೂ ಸಾಧನೆ ಮಾಡಿ ಶಾಲೆಗೆ ಹಾಗೂ ತಾಲೂಕಿಗೆ ಗೌರವ ತಂದಿರುವುದಕ್ಕೆ ಮುಖ್ಯ ಶಿಕ್ಷಕಿ ಶ್ರೀಮತಿ ಮಮತಾ ಭಟ್ಕಳ, ಮಾರ್ಗದರ್ಶಿ ಶಿಕ್ಷಕಿ ಶ್ರೀಮತಿ ರೇಷ್ಮಾ ನಾಯಕ ಶಾಲಾ ಆಡಳಿತ ಮಂಡಳಿ ಶಿಕ್ಷಕವೃಂದ ಊರಿನ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.
(ಪೋಟೊ ಕ್ಯಾಪ್ಸನ್ – ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆ ಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಾದ ಮೋನಿಕಾ ಜಯಕರ ನಾಯ್ಕ ಹಾಗೂ ಚರಣ ನಾಗಪ್ಪ ನಾಯ್ಕ ಅವರೊಂದಿಗೆ ಮುಖ್ಯ ಶಿಕ್ಷಕಿ ಮಮತಾ ಭಟ್ಕಳ ಹಾಗೂ ಮಾರ್ಗದರ್ಶಿ ಶಿಕ್ಷಕಿ ರೇಷ್ಮಾ ನಾಯಕ ಚಿತ್ರದಲ್ಲಿ ಇದ್ದಾರೆ)